ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾಣಿಗಳಂತೆ ಮಕ್ಕಳನ್ನು ಹುಟ್ಟಿಸುವುದು ದೇಶಕ್ಕೆ ಅಪಾಯಕಾರಿ:ಮುಸ್ಲಿಂ ಮುಖಂಡ

|
Google Oneindia Kannada News

Recommended Video

ಇನ್ನು ಮುಂದೆ ಮನಸ್ಸಿಗೆ ಬಂದಷ್ಟು ಮಕ್ಕಳನ್ನು ಮಾಡಿಕೊಳ್ಳುವ ಹಾಗಿಲ್ಲ..!

ಲಕ್ನೋ, ಜನವರಿ 21: ''ಪ್ರಾಣಿಗಳಂತೆ ಮಕ್ಕಳನ್ನು ಹುಟ್ಟಿಸುವುದು ದೇಶದ ಬೆಳವಣಿಗೆಗೆ ಅಪಾಯಕಾರಿಯಾಗಿದೆ. ಹೀಗಾಗಿ ಜನಸಂಖ್ಯಾ ನಿಯಂತ್ರಣ ಹಾಗೂ ಜನನ ಪ್ರಮಾಣಕ್ಕೆ ಸರ್ಕಾರ ನೀತಿ ನಿಯಮ ರಚಿಸಬೇಕಿದೆ ''ಎಂದು ಉತ್ತರ ಪ್ರದೇಶ ಶಿಯಾ ವಕ್ಫ್‌ ಮಂಡಳಿ ಅಧ್ಯಕ್ಷ ವಾಸಿಂ ರಿಜ್ವಿ ಹೇಳಿದ್ದಾರೆ.

ಜನಸಂಖ್ಯಾ ನಿಯಂತ್ರಣಕ್ಕೆ ಸರ್ಕಾರ ಕಾನೂನು ತರಬೇಕು ಎಂದು ಆರ್‌ಎಸ್‌ಎಸ್‌ ಸರಸಂಗ ಚಾಲಕ ಮೋಹನ್ ಭಾಗವತ್ ಅವರ ಹೇಳಿಕೆಯನ್ನೂ ಪ್ರತಿಪಾದಿಸಿರುವ ರಿಜ್ವಿ ಭಾರತಕ್ಕೆ ಇಂತಹ ಒಂದು ಕಾನೂನಿನ ಅಗತ್ಯವಿದೆ ಎಂದಿದ್ದಾರೆ.

ಮಕ್ಕಳು ಹುಟ್ಟುವುದು ನೈಸರ್ಗಿಕ ಪ್ರಕ್ರಿಯೆ ಎಂದು ಕೆಲವರು ತಿಳಿದುಕೊಂಡಿದ್ದು, ಅದನ್ನು ನಿಯಂತ್ರಿಸುವ ಪ್ರಯತ್ನವನ್ನೇ ಮಾಡುವುದಿಲ್ಲ.

wasim

ಈ ರೀತಿ ಪ್ರಾಣಿಗಳಂತೆ ಹೆಚ್ಚೆಚ್ಚು ಮಕ್ಕಳಿಗೆ ಜನ್ಮ ನೀಡುವುದು ಸಮಾಜ ಹಾಗೂ ದೇಶಕ್ಕೆ ಅಪಾಯಕಾರಿ. ಹೀಗಾಗಿ ಜನಸಂಖ್ಯಾ ನಿಯಂತ್ರಣಕ್ಕೆ ಕಾಯ್ದೆ ರೂಪಿಸುವುದು ದೇಶಕ್ಕೆ ಒಳ್ಳೆಯದು ಎಂದಿದ್ದಾರೆ.

ಕಳೆದ ಭಾನುವಾರವಷ್ಟೇ ಇದೇ ವಿಚಾರದ ಕುರಿತು ಮಾತನಾಡಿದ್ದ ಮೋಹನ್ ಭಾಗವತ್ ಜನಸಂಖ್ಯಾ ಹೆಚ್ಚಳವು ಸಮಸ್ಯೆಯ ಜೊತೆಗೆ ಸಂಪನ್ಮೂಲವೂ ಹೌದು. ಆದರೆ ನಿಯಂತ್ರಣಕ್ಕಾಗಿ ಕಾನೂನು ಬರಲೇಬೇಕಿದೆ.

ಒಬ್ಬ ದಂಪತಿ ಎಷ್ಟು ಮಕ್ಕಳನ್ನು ಹೊಂದಬಹುದು ಎಂದು ಈ ಕಾನೂನು ಹೇಳಬೇಕಿದೆ. ಈ ಮಿತಿಯ ಬಗ್ಗೆ ನಾನು ಯಾವುದೇ ಹೇಳಿಕೆ ನೀಡುವುದಿಲ್ಲ ಅದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಹೇಳಿದ್ದರು.

English summary
UP Shia Waqf Board Chairmen Wasim Rizvi Says that giving Birth to children like animal is harmful for country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X