ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪತ್ರಿಕೆಯಲ್ಲಿ 100 ರೂ. ಇಡಿ ಅಂಕ ಬರುತ್ತೆ ಎಂದಿದ್ದ ಪ್ರಾಂಶುಪಾಲ ಅರೆಸ್ಟ್

|
Google Oneindia Kannada News

ಲಕ್ನೋ, ಫೆಬ್ರವರಿ 20: ಮಕ್ಕಳನ್ನು ಉತ್ತಮ ದಾರಿಯೆಡೆಗೆ ಕೊಂಡೊಯ್ಯಬೇಕಿದ್ದ ಶಿಕ್ಷಕರೇ ಭ್ರಷ್ಟಾಚಾರಕ್ಕಿಳಿದಿದ್ದು, ಉತ್ತರ ಪತ್ರಿಕೆಯಲ್ಲಿ 100 ರೂ. ಇಡಿ ಅಂಕ ಬರುತ್ತೆ ಎಂದು ಮಕ್ಕಳಿಗೆ ಪಾಠ ಮಾಡಿದ್ದ ಪ್ರಾಂಶುಪಾಲರನ್ನು ಬಂಧಿಸಲಾಗಿದೆ.

ಲಖನೌದಿಂದ 300 ಕಿ.ಮೀ. ದೂರವಿರುವ ಮೌ ಜಿಲ್ಲೆಯ ಖಾಸಗಿ ಶಾಲೆಯ ಪ್ರಾಂಶುಪಾಲ, ಮ್ಯಾನೇಜರ್​ ಪ್ರವೀಣ್​​ ಮಲ್​ ಎಂಬಾತನೇ ಬಂಧಿತ ವ್ಯಕ್ತಿ.

ಬೇಡಿಕೆಗಳ ಈಡೇರಿಕೆಗಾಗಿ ದೆಹಲಿಯಲ್ಲಿ ಒಂದು ವಾರ ಶಿಕ್ಷಕರ ಸತ್ಯಾಗ್ರಹಬೇಡಿಕೆಗಳ ಈಡೇರಿಕೆಗಾಗಿ ದೆಹಲಿಯಲ್ಲಿ ಒಂದು ವಾರ ಶಿಕ್ಷಕರ ಸತ್ಯಾಗ್ರಹ

ಪರೀಕ್ಷೆ ವೇಳೆ ಹೇಗೆ ಮೋಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಆತ ಮಾಹಿತಿ ನೀಡುತ್ತಿದ್ದ. ಇದನ್ನು ಅಲ್ಲೇ ಇದ್ದ ಒಬ್ಬರು ವಿಡಿಯೋ ಮಾಡಿದ್ದಾರೆ. ಅಲ್ಲಿ ಕೆಲ ಪಾಲಕರು ಉಪಸ್ಥಿತರಿದ್ದರು.

UP School Official Advises Students Giving Board Exam Arrested

ಯಾವ ಪ್ರಶ್ನೆಯನ್ನು ಉತ್ತರಿಸದೇ ಇರಬೇಡಿ. ಉತ್ತರ ಪತ್ರಿಕೆಯಲ್ಲಿ 100 ರೂಪಾಯಿ ನೋಟು ಇಡಿ. ಶಿಕ್ಷಕರು ಕಣ್ಣುಮುಚ್ಚಿಕೊಂಡು ಅಂಕಗಳನ್ನು ನೀಡುತ್ತಾರೆ. 4 ಅಂಕದ ಪ್ರಶ್ನೆಯಾಗಿದ್ದರೆ, 3 ಅಂಕಗಳನ್ನಾದರೂ ನೀಡುತ್ತಾರೆ ಎಂದು ಪ್ರವೀಣ್​ ಆ ವಿಡಿಯೋದಲ್ಲಿ ಹೇಳಿದ್ದಾನೆ. ಜೈ ಹಿಂದ್​, ಜೈ ಭಾರತ್​ ಎಂದು ಘೋಷಣೆ ಕೂಗಿ ತನ್ನ ಮಾತು ಮುಗಿಸಿದ್ದಾನೆ.

ಈ ವಿಡಿಯೋವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ರವಾನಿಸಲಾಗಿದ್ದು. ವಿಡಿಯೋ ಜತೆಗೆ ದೂರನ್ನು ಸಲ್ಲಿಸಲಾಗಿದೆ. ಇದರ ಆಧಾರದ ಮೇಲೆ ಪ್ರವೀಣ್​ನನ್ನು ಬಂಧಿಸಲಾಗಿದೆ.

ನಾನು ಚಾಲೆಂಜ್​ ಮಾಡ್ತೀನಿ. ನಮ್ಮ ಯಾವ ವಿದ್ಯಾರ್ಥಿಗಳು ಫೇಲ್​ ಆಗುವುದಿಲ್ಲ. ನೀವು ಪರೀಕ್ಷೆ ಬರೆಯುವಾಗ ನೀವು ಮಾತನಾಡಿಕೊಳ್ಳಿ ನಂತರ ಉತ್ತರ ಬರೆಯಿರಿ. ನಿಮ್ಮ ಸರ್ಕಾರಿ ಪರೀಕ್ಷಾ ಕೇಂದ್ರಗಳಲ್ಲಿ ಇರುವವರು ನನಗೆ ಗೆಳೆಯರು. ಹೆದರಬೇಡಿ, ಮಾತಾಡಿ ಬರೆಯಿರಿ ಎಂದು ಪ್ರವೀಣ್​ ಮಾತನಾಡಿರುವುದು ವಿಡಿಯೋದಲ್ಲಿದೆ.

English summary
Video of Praveen Mall, manager-cum-principal of a private school ( Harivansh Memorial Inter College ) in Mau district giving ‘cheating’ tips to the students is going viral Arrested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X