ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾಮಿ ಪ್ರಸಾದ್ ಮೌರ್ಯ ಪಾಳಯದಲ್ಲಿ ಅಖಿಲೇಶ್ ವಿರುದ್ಧ ಅಸಮಾಧಾನ

|
Google Oneindia Kannada News

ಲಕ್ನೋ ಏಪ್ರಿಲ್ 21: ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿ ಸೋಲಿನ ನಂತರ ಪಕ್ಷದೊಳಗೆ ಬಂಡಾಯದ ಬೆಂಕಿ ಆವರಿಸಿದೆ. ಸ್ವಾಮಿ ಪ್ರಸಾದ್ ಮೌರ್ಯ ಪಾಳಯದಲ್ಲಿ ಅಖಿಲೇಶ್ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಹೀಗಾಗಿ ಸ್ವಾಮಿ ಪ್ರಸಾದ್ ಮೌರ್ಯ ಅವರ ಸೋದರಳಿಯ ಪ್ರಮೋದ್ ಮೌರ್ಯ ಕೂಡ ಎಸ್‌ಪಿಗೆ ರಾಜೀನಾಮೆ ನೀಡಿದ್ದಾರೆ.

ಪ್ರಮೋದ್ ಮೌರ್ಯ ಎಸ್ಪಿಯ ರಾಜ್ಯ ಕಾರ್ಯದರ್ಶಿ ಹುದ್ದೆಯಲ್ಲಿದ್ದರು. ಹಿಂದೂಸ್ತಾನ್ ಸುದ್ದಿ ಪ್ರಕಾರ, ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಗೆ ಕಳುಹಿಸಲಾದ ರಾಜೀನಾಮೆಯಲ್ಲಿ ಪ್ರಮೋದ್ ಮೌರ್ಯ ಅನೇಕ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಎಸ್ಪಿಯ ಅಖಿಲೆಶ್ ಮುಸ್ಲಿಂ ಸಮುದಾಯ, ಶಾಸಕರು, ಸೈನಿ, ಸಮಾಜದ ಜನರನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಮೋದ್ ಮೌರ್ಯ ರಾಜೀನಾಮೆ ನಂತರ ಇದೀಗ ಸ್ವಾಮಿ ಪ್ರಸಾದ್ ಮೌರ್ಯ ಅವರು ಎಸ್‌ಪಿ ತೊರೆಯಬಹುದೇ ಎಂಬ ದೊಡ್ಡ ಪ್ರಶ್ನೆ ಉದ್ಭವಿಸಿದೆ.

'ಅಖಿಲೇಶ್ ಮುಸ್ಲಿಂ ನಾಯಕರನ್ನು ಕಡೆಗಣಿಸುತ್ತಿದ್ದಾರೆ': ಸಿಕಂದರ್ ಅಲಿ ಆರೋಪ 'ಅಖಿಲೇಶ್ ಮುಸ್ಲಿಂ ನಾಯಕರನ್ನು ಕಡೆಗಣಿಸುತ್ತಿದ್ದಾರೆ': ಸಿಕಂದರ್ ಅಲಿ ಆರೋಪ

2018ರಲ್ಲಿ ಎಸ್‌ಪಿ ಸೇರಿದ್ದ ಪ್ರಮೋದ್ ಮೌರ್ಯ

ಪ್ರಮೋದ್ ಮೌರ್ಯ ಅವರು ಪ್ರತಾಪಗಢದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದರು. ಅವರು ಬಿಜೆಪಿ ತೊರೆದು ಫೆಬ್ರವರಿ 2018 ರಲ್ಲಿ ಎಸ್‌ಪಿ ಸೇರಿದರು. ಎಸ್ಪಿ ಸೇರಿದ ನಂತರ ಸ್ವಾಮಿ ಪ್ರಸಾದ್ ಮೌರ್ಯ ಕೂಡ ಎಸ್ಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಪ್ರಮೋದ್ ಮೌರ್ಯ ಹೇಳಿಕೊಂಡಿದ್ದರು. ಆದರೆ ಸ್ವಾಮಿ ಪ್ರಸಾದ್ ಮೌರ್ಯ ಅವರು ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಎಸ್‌ಪಿ ಸೇರಿದ್ದರು.

UP: Pramod Maurya resigns from SP

ಪ್ರಮೋದ್ ಮೌರ್ಯ ಆರೋಪ

ರಾಜೀನಾಮೆ ಪತ್ರದಲ್ಲಿ ಪ್ರಮೋದ್ ಮೌರ್ಯ ಅವರು, 'ನಾನು ಎಸ್‌ಪಿಗೆ ಸೇರ್ಪಡೆಗೊಳ್ಳುವಾಗ, ಎಸ್‌ಪಿ ಕೇವಲ ಒಂದು ನಿರ್ದಿಷ್ಟ ಜಾತಿಯ ಜನರ ಪಕ್ಷ ಎಂದು ಕೆಲವರು ಹೇಳಿದ್ದರು, ಆದರೆ ನಾದು ಅದನ್ನು ನಂಬಿರಲಿಲ್ಲ. ಎಸ್‌ಪಿಗೆ ಸೇರಿಕೊಂಡಿದ್ದೆ. ಪಕ್ಷದಲ್ಲಿ ಕೆಲಸ ಮಾಡುವಾಗ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ತಮ್ಮ ಜಾತಿಯನ್ನು ಮಾತ್ರ ದೊಡ್ಡ ಜಾತಿ ಎಂದು ಪರಿಗಣಿಸುತ್ತಾರೆ ಎಂದು ನಾವು ಅರಿತುಕೊಂಡಿದ್ದೇವೆ ಎಂದು ಪ್ರಮೋದ್ ಮೌರ್ಯ ಹೇಳಿಕೊಂಡಿದ್ದಾರೆ. ಪಕ್ಷದ ಸಭೆಗಳಲ್ಲಿ ಮೌರ್ಯರು, ಕುಶ್ವಾಹಗಳು, ಶಾಕ್ಯರು, ಸೈನಿಗಳು, ಪಟೇಲ್ಗಳು ಮತ್ತು ಇತರ ಹಿಂದುಳಿದ ಜಾತಿಗಳು ಸಾಮಾನ್ಯವಾಗಿ ಸಣ್ಣದಾಗಿ ಕಾಣಿಸಿಕೊಳ್ಳುತ್ತಿವೆ. 75 ಜಿಲ್ಲೆಗಳ ಎಸ್‌ಪಿಯಲ್ಲಿ ಒಬ್ಬನೇ ಒಬ್ಬ ಜಿಲ್ಲಾಧ್ಯಕ್ಷ ಮೌರ್ಯ, ಕುಶ್ವಾಹ, ಶಾಕ್ಯ, ಸೈನಿ ಜಾತಿಗೆ ಸಂಬಂಧಿಸಿದವರಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

UP: Pramod Maurya resigns from SP

ಸ್ವಾಮಿ ಪ್ರಸಾದ್ ಮೌರ್ಯ ಬಗ್ಗೆ ರಾಜೀನಾಮೆಯಲ್ಲಿ ಪ್ರಸ್ತಾಪ

ಪ್ರಮೋದ್ ರಾಜೀನಾಮೆಯಲ್ಲಿ ಸ್ವಾಮಿ ಪ್ರಸಾದ್ ಮೌರ್ಯ ಅವರನ್ನೂ ಉಲ್ಲೇಖಿಸಿದ್ದಾರೆ. ಸ್ವಾಮಿ ಪ್ರಸಾದ್ ಎಸ್‌ಪಿಗೆ ಸೇರ್ಪಡೆಯಾದಾಗ ಎಸ್‌ಪಿಯಲ್ಲಿ ಮೌರ್ಯ, ಕುಶ್ವಾಹ, ಶಾಕ್ಯ, ಸೈನಿ ಸಮಾಜಕ್ಕೆ ಪ್ರಾಮುಖ್ಯತೆ ಸಿಗುತ್ತದೆ ಎಂದು ಭಾವಿಸಲಾಗಿತ್ತು. ಎಲ್ಲೆಲ್ಲಿ ಸ್ವಾಮಿ ಪ್ರಸಾದ್ ಮೌರ್ಯ ಸಮಾಜದವರಿಗೆ ಟಿಕೆಟ್ ಕೊಡ್ತೀವಿ ಅಂತ ಮಾತಾಡಿ ಒಪ್ಪಿಕೊಂಡಿದ್ರೋ ಅಲ್ಲಿ ಟಿಕೆಟ್ ಫೈನಲ್ ಮಾಡೋವಾಗ ಟಿಕೆಟ್ ಕಟ್ ಆಗಿದೆ. ಈ ಜನ ಗೆದ್ದರೆ ಪಕ್ಷದಲ್ಲಿ ಮೌರ್ಯ ಕುಶ್ವಾಹ, ಶಾಕ್ಯ, ಸೈನಿ ಸಮಾಜ ಬಲಿಷ್ಠವಾಗುತ್ತದೆ. ಈ ಸಮಾಜಗಳ ಜನರು ಎಸ್‌ಪಿಗಿಂತ ಬಿಜೆಪಿಯಿಂದ ಗೆದ್ದು ಬಂದಿದ್ದಾರೆ ಎಂದು ಪ್ರಮೋದ್ ಹೇಳಿದ್ದಾರೆ.

English summary
Swamy Prasad Maurya's nephew Pramod Maurya has also resigned from the SP by making serious allegations against SP leader Akhilesh Yadav.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X