ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ: ಅಸಾದುದ್ದೀನ್ ಓವೈಸಿ 'ಭಗವಾನ್ ರಾಮನ ವಂಶಸ್ಥರು' ಎಂದ ಬಿಜೆಪಿ ಸಂಸದ

|
Google Oneindia Kannada News

ಲಕ್ನೋ ಫೆ.16: ಉತ್ತರಪ್ರದೇಶದಲ್ಲಿ ಇತ್ತೀಚೆಗೆ ಜಾತಿ ರಾಜಕಾರಣ ಮತ್ತು ಜಾತಿ ಆಧಾರಿತ ಪ್ರಚಾರ ಹೆಚ್ಚಾಗಿ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿಗಳಿಂದ ಪದೇ ಪದೇ ಧ್ರುಡೀಕರಣದ ಮಾತುಗಳು ಕೇಳಿ ಬರುತ್ತಿದ್ದು ವಿಪಕ್ಷಗಳ ಆಕ್ರೋಶ ಎಡೆ ಮಾಡಿದೆ. ನಿನ್ನೆ ಮತ್ತೋರ್ವ ಅಭ್ಯರ್ಥಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಭಾರತೀಯ ಜನತಾ ಪಕ್ಷದ ನಾಯಕ ಮತ್ತು ಕೈಸರ್‌ಗಂಜ್‌ನ ಲೋಕಸಭಾ ಸಂಸದ, ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿಯನ್ನು "ಭಗವಾನ್ ರಾಮನ ವಂಶಸ್ಥರು" ಎಂದು ಕರೆದಿದ್ದಾರೆ.

"ಒವೈಸಿ ನನ್ನ ಹಳೆಯ ಸ್ನೇಹಿತ. ನನಗೆ ತಿಳಿದಿರುವಂತೆ, ಅವರು ಮೊದಲು 'ಕ್ಷತ್ರಿಯ' (ಹಿಂದೂ) ಆಗಿದ್ದರು. ಅವರು ಭಗವಾನ್ ರಾಮನ ವಂಶಸ್ಥರು. ಇರಾನ್‌ಗೆ ಸೇರಿದವರಲ್ಲ" ಎಂದು ಸಿಂಗ್ ಹೇಳಿದರು.

'ನಾನು ಪುನರಾಯ್ಕೆಯಾದರೆ ಮುಸ್ಲಿಮರು ತಿಲಕ ಇಡುತ್ತಾರೆ': ಬಿಜೆಪಿ ಶಾಸಕರ ದ್ವೇಷ ಭಾಷಣ
ಸಿಂಗ್ ಅವರು ಸೋಮವಾರ ತಮ್ಮ ಪುತ್ರ ಹಾಗೂ ಗೊಂಡಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತೀಕ್ ಭೂಷಣ್ ಸಿಂಗ್ ಪರ ಪ್ರಚಾರ ನಡೆಸುತ್ತಿದ್ದಾಗ ಈ ಹೇಳಿಕೆಯನ್ನು ನೀಡಿದ್ದಾರೆ. 'ಎಐಎಂಐಎಂ ಜೊತೆ ಮೈತ್ರಿ ಮಾಡಿಕೊಳ್ಳದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಟೀಕಿಸಿದ ಸಿಂಗ್, ಅಖಿಲೇಶ್ ಮತ್ತು ಓವೈಸಿ ಮುಸ್ಲಿಂ ಸಮುದಾಯದ ನಾಯಕತ್ವವನ್ನು ಪಡೆಯಲು ಹೋರಾಡುತ್ತಿದ್ದಾರೆ. ಅಖಿಲೇಶ್ ಒಬ್ಬ ಮೋಸಗಾರ, ಅವನು ತನ್ನ ತಂದೆ ಮತ್ತು ಅವನ ಚಿಕ್ಕಪ್ಪನಿಗೆ ದ್ರೋಹ ಮಾಡಿದನು. ಮೋಸ ಮಾಡುವುದೇ ಅವನ ಕೆಲಸ. ಅವನು ಸ್ವಾಮಿ ಪ್ರಸಾದ್ ಮೌರ್ಯರಿಗೂ ದ್ರೋಹ ಮಾಡಿದನು. ಮೌರ್ಯ 20-30 ಸೀಟುಗಳ ಭರವಸೆಯೊಂದಿಗೆ ಎಸ್‌ಪಿಗೆ ಹೋದನು, ಅವನಿಗೆ ಏನೂ ಸಿಗಲಿಲ್ಲ ಎಂದು ಸಿಂಗ್ ಹೇಳಿದ್ದಾರೆ.

UP Polls: Asaduddin Owaisi Is ‘Descendant of Lord Ram’, Says BJP MP

ಸ್ವಾಮಿ ಪ್ರಸಾದ್ ಮೌರ್ಯ ಅವರು ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಸಚಿವರಾಗಿದ್ದರು. ಚುನಾವಣೆಗೆ ವಾರಗಳ ಮುಂಚೆ ಅವರು ಬಿಜೆಪಿಗೆ ರಾಜೀನಾಮೆ ನೀಡಿ ಎಸ್‌ಪಿ ಸೇರಿದ್ದರು. ಕುಶಿನಗರ ಜಿಲ್ಲೆಯ ಫಾಜಿಲ್‌ನಗರ ವಿಧಾನಸಭಾ ಕ್ಷೇತ್ರದಿಂದ ಮೌರ್ಯ ಅವರನ್ನು ಎಸ್‌ಪಿ ಕಣಕ್ಕಿಳಿಸಿದೆ.

ಮೊನ್ನೆಯಷ್ಟೇ ಬಿಜೆಪಿಯ ಮತ್ತೊಬ್ಬ ಅಭ್ಯರ್ಥಿ ದ್ವೇಷದ ಭಾಷಣ ಮಾಡಿದ್ದರು. ವಿಡಿಯೊವೊಂದರಲ್ಲಿ ಪೂರ್ವ ಯುಪಿಯ ಡೊಮರಿಯಾಗಂಜ್‌ನ ಶಾಸಕ ರಾಘವೇಂದ್ರ ಸಿಂಗ್ ಅವರು ತಾವು ಚುನಾವಣೆಯಲ್ಲಿ ಮರು ಆಯ್ಕೆಯಾದರೆ, ಮುಸ್ಲಿಮರ ಹಣೆಗೆ "ತಿಲಕ" ಇಡುವಂತೆ ಬದಲಾಯಿಸಲಾಗುತ್ತದೆ ಎಂದು ಹೇಳುವುದು ಕೇಳಿಬಂದಿದೆ. ಜೊತೆಗೆ ಇದನ್ನು ಸಮರ್ಥಿಸಿಕೊಂಡಿದ್ದ ಶಾಸಕ "ಇಸ್ಲಾಮಿಕ್ ಅನ್ನು ಭಯೋತ್ಪಾದನೆ" ಎಂದು ಕರೆದಿದ್ದನ್ನು "ಷರತ್ತಿನ ಭಾಷಣ" ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ಭಾಷಣವನ್ನು ಸಮರ್ಥಿಸಿಕೊಂಡಿದ್ದರು.

"ಇಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ಇದ್ದಾಗ, ಹಿಂದೂಗಳು ಗೋಲ್ ಟೋಪಿಗಳನ್ನು (ತಲೆಬುರುಡೆಯ ಕ್ಯಾಪ್) ಧರಿಸುವಂತೆ ಒತ್ತಾಯಿಸಲಾಯಿತು. ನಾನು ಷರತ್ತು ವಿಧಿಸಿದೆ. ನಾನು ಹಿಂದೂ ಹೆಮ್ಮೆಗಾಗಿ ಏನು ಬೇಕಾದರೂ ತ್ಯಾಗ ಮಾಡಲು ಸಿದ್ಧನಿದ್ದೇನೆ. ನನ್ನ ಪ್ರಕಾರ ಮುಸ್ಲಿಮರು ನನ್ನನ್ನು ಸೋಲಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದರೆ, ನಾನು ಮೌನವಾಗಿರುವುದಿಲ್ಲ' ಎಂದು ರಾಘವೇಂದ್ರ ಸಿಂಗ್ ವಿಡಿಯೋದಲ್ಲಿ ಹೇಳಿದ್ದಾರೆ.

"ನಾನು ಮತ್ತೆ ಶಾಸಕನಾದರೆ, ಗೋಲ್-ಟೋಪಿಗಳು (ಸ್ಕಲ್ ಕ್ಯಾಪ್) ಮಾಯವಾದಂತೆ ಮುಂದಿನ ಬಾರಿ ಮಿಯಾನ್ ಲಾಗ್ (ಮುಸ್ಲಿಮರಿಗೆ ಅವಹೇಳನಕಾರಿಯಾಗಿ ಬಳಸಲಾಗುವ ಪದ)ಗಳು ತಿಲಕವನ್ನು ಇಡುವಂತೆ ಮಾಡುತ್ತೇನೆ" ಎಂದು ಸಿಂಗ್ ಹೇಳಿದ್ದಾರೆ. "ಮೊದಲ ಬಾರಿಗೆ ಇಷ್ಟು ಹಿಂದೂಗಳು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ದೊಮರಿಯಾಗಂಜ್‌ನಲ್ಲಿ 'ಸಲಾಮ್' ಇದೆಯೇ? ಅಥವಾ 'ಜೈ ಶ್ರೀ ರಾಮ್' ಇದೆಯೇ?" ಎಂದು ಅವರು ಪ್ರಶ್ನಿಸಿದ್ದರು.

ಉತ್ತರ ಪ್ರದೇಶದಲ್ಲಿ ಎರಡು ಹಂತದ ಚುನಾವಣೆ ಮುಗಿದಿದ್ದು, ರಾಜ್ಯದಲ್ಲಿ ಇನ್ನೂ ಐದು ಹಂತಗಳ ಮತದಾನ ಬಾಕಿ ಇದೆ. ಮೂರನೇ ಹಂತದ ಚುನಾವಣೆ ಭಾನುವಾರ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

Recommended Video

ಉಕ್ರೇನ್ ಮೇಲೆ ಸೈಬರ್ ದಾಳಿ ಮಾಡಿದ ರಷ್ಯಾ,ಮುಂದೇನು? | Oneindia Kannada

English summary
Bharatiya Janata Party leader and Lok Sabha MP from Kaiserganj, Brij Bhushan Sharan Singh called All India Majlis-E-Ittehadul Muslimeen (AIMIM) chief Asaduddin Owaisi "a descendent of Lord Ram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X