ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶ: ರೈತರ ವಿರುದ್ಧದ ಕೇಸ್ ಹಿಂಪಡೆಯಲು ಸರ್ಕಾರ ನಿರ್ಧಾರ

|
Google Oneindia Kannada News

ಲಕ್ನೋ, ಸೆಪ್ಟೆಂಬರ್ 16: ಉತ್ತರ ಪ್ರದೇಶದ ಚುನಾವಣೆ ಹಿನ್ನೆಲೆಯಲ್ಲಿ ರೈತರ ವಿರುದ್ಧ ಇರುವ 868 ಪ್ರಕರಣಗಳನ್ನು ಹಿಂಪಡೆಯಲು ಯೋಗಿ ಸರ್ಕಾರ ನಿರ್ಧರಿಸಿದೆ. ಪೈರನ್ನು ಸುಡುವ ಮೂಲಕ ಪರಿಸರ ಮಾಲಿನ್ಯಕ್ಕೆ ಕಾರಣವಾದ ಆರೋಪದ ಮೇರೆಗೆ ರೈತರ ಮೇಲೆ ಕೇಸ್ ಹಾಕಲಾಗಿತ್ತು.

ಈ ಸಂಬಂಧದ ರಾಜ್ಯ ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ ನಂತರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ( ಗೃಹ) ಅವನಿಶ್ ಅವಾಸ್ತಿ ರೈತರ ಮೇಲಿನ ಕೇಸ್ ಹಿಂಪಡೆಯುವ ಆದೇಶವನ್ನು ಹೊರಡಿಸಿದ್ದಾರೆ.

ಉತ್ತರ ಪ್ರದೇಶ ಚುನಾವಣೆ 2022: ಕಾಂಗ್ರೆಸ್‌ಗೆ ಪ್ರಿಯಾಂಕಾ ನಾಯಕತ್ವಉತ್ತರ ಪ್ರದೇಶ ಚುನಾವಣೆ 2022: ಕಾಂಗ್ರೆಸ್‌ಗೆ ಪ್ರಿಯಾಂಕಾ ನಾಯಕತ್ವ

ಪೈರನ್ನು ಸುಡುವುದಕ್ಕಾಗಿ ರೈತರ ಮೇಲೆ ಹಾಕಲಾಗಿರುವ ಕೇಸ್ ಗಳನ್ನು ಹಿಂಪಡೆಯುವುದಾಗಿ ಈ ಹಿಂದೆ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಭರವಸೆ ನೀಡಿದ್ದರು. ಒಂದು ವೇಳೆ ಯಾವುದೇ ದಂಡ ವಿಧಿಸಿದ್ದರೆ ಅದನ್ನು ಮನ್ನಾ ಮಾಡಲಾಗುವುದು, ಇದಲ್ಲದೇ, ಕಬ್ಬಿಗೆ ಬೆಂಬಲ ಬೆಲೆ ಹೆಚ್ಚಿಸುವ ವಿಚಾರವನ್ನು ಪರಗಣಿಸಲಾಗುವುದು ಎಂದು ಅಭಯ ನೀಡಿದ್ದರು. ರಾಜ್ಯದ ಆರ್ಥಿಕತೆ ಮತ್ತು ಅಭಿವೃದ್ಧಿಯಲ್ಲಿ ರೈತರು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಆದ್ದರಿಂದ ಪೈರನ್ನು ಸುಟ್ಟಿದ್ದಕ್ಕಾಗಿ ರೈತರ ವಿರುದ್ಧ ಹಾಕಲಾಗಿದ್ದ 868 ಕೇಸ್ ಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಅವಾಸ್ತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

UP Polls 2022: Yogi Govt Withdraws 868 Cases Against Farmers For Stubble Burning

ಕೊರೊನಾ ಸಾಂಕ್ರಾಮಿಕದಿಂದ ಆರ್ಥಿಕ ತೊಂದರೆಯಿಂದ ಸಂಕಷ್ಟ ಪಡುತ್ತಿರುವ ರೈತರ ಹಿತಾಸಕ್ತಿ ರಕ್ಷಿಸುವ ಸಲುವಾಗಿ ವಿವಿಧ ಜಿಲ್ಲೆಗಳಲ್ಲಿ ದಾಖಲಾಗಿದ್ದ ಪ್ರಕರಣ ಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ಆದೇಶಿಸಿರುವುದಾಗಿ ಅವಾಸ್ತಿ ಹೇಳಿದ್ದಾರೆ.

ಪಶ್ಚಿಮ ಬಂಗಾಳ ಉಪಚುನಾವಣೆಯಲ್ಲಿ ಸ್ಪರ್ಧಿಯನ್ನು ಕಣಕ್ಕಿಳಿಸದ ಕಾಂಗ್ರೆಸ್ ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸ್ಪರ್ಧೆಯನ್ನು ಪ್ರಿಯಾಂಕಾ ನಾಯಕತ್ವದಲ್ಲಿ ನಡೆಸಲು ನಿರ್ಧರಿಸಿದೆ.

ಮುಂಬರಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಸ್ಪರ್ಧೆ ನಡೆಸಲಿದೆ ಎಂದು ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ. ಅತ್ಯುತ್ತಮ ಎಸ್‌ಯುವಿಯನ್ನು ಹೊಂದಲು ನಿಮಗೊಂದು ಅವಕಾಶ. ಇಲ್ಲಿ ಕ್ಲಿಕ್ ಮಾಡಿ ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಇನ್ನೂ ನಿರ್ಧರಿಸಿಲ್ಲ ಆದರೆ ಉತ್ತರ ಪ್ರದೇಶದ ಎಲ್ಲಾ 403 ವಿಧಾನಸಭಾ ಸ್ಥಾನಗಳಿಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಸಲ್ಮಾನ್ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದು ಹೇಳಿದ್ದಾರೆ.

ಪ್ರಣಾಳಿಕೆ ಬಗ್ಗೆ ಮಾಹಿತಿ ನೀಡಿದ ಸಲ್ಮಾನ್, ಉತ್ತರ ಪ್ರದೇಶ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆಯನ್ನು ತಜ್ಞರ ಶಿಫಾರಸಿನ ಮೇರೆಗೆ ತಯಾರಿಸಲಾಗುವುದಿಲ್ಲ. ಇದು ಸ್ಥಳೀಯ ಜನರ ಸಾಮಾನ್ಯ ಸಮಸ್ಯೆಗಳನ್ನು ಒಳಗೊಂಡಿರುತ್ತದೆ. ಈ ಪ್ರಣಾಳಿಕೆ ತಮ್ಮದೇ ಎಂದು ಅವರು ಹೇಳಬಹುದು ಎಂದರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧೆಯ ಕಾರಣದಿಂದ ರಂಗೇರಿರುವ ಭವಾನಿಪುರ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಕಣದಿಂದ ಹಿಂದೆ ಸರಿಯುವ ಮೂಲಕ ಕಾಂಗ್ರೆಸ್ ಮತ್ತೆ ಮೂಕಪ್ರೇಕ್ಷಕನಾಗುತ್ತಿದೆ.

ಮುಂದಿನ ವರ್ಷ, 2022 ರಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಇನ್ನೂ ಸರಿ ಸುಮಾರು 5 ತಿಂಗಳ ಸಮಯವಿದೆ. ಹೀಗಿದ್ದರೂ ರಾಜಕೀಯ ಪಕ್ಷಗಳು ಮಾತ್ರ ಮತದಾರರನ್ನು ಸೆಳೆಯುವ ಯತ್ನ ಆರಂಭಿಸಿವೆ. ಹೌದು ದೇಶದ ಅತಿದೊಡ್ಡ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲು ಎಲ್ಲಾ ಪಕ್ಷಗಳು ಕಾರ್ಯತಂತ್ರ ರೂಪಿಸುತ್ತಿವೆ. ಹೀಗಿರುವಾಗ ದೆಹಲಿ ಗದ್ದುಗೆ ಏರಿರುವ, ಆಡಳಿತ ಪಕ್ಷ ಆಮ್ ಆದ್ಮಿ ಕೂಡಾ ಯುಪಿ ಚುನಾವಣಾ ಕಣಕ್ಕಿಳಿಯಲು ಸಿದ್ಧತೆ ಆರಂಭಿಸಿದೆ. ಸದ್ಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಚುನಾವಣೆಯಲ್ಲಿ ಆಪ್‌ ಗೆದ್ದರೆ ಉಚಿತ ವಿದ್ಯುತ್ ಸೇರಿದಂತೆ ಅನೇಕ ದೊಡ್ಡ ಘೋಷಣೆಗಳನ್ನು ಮಾಡಿದ್ದಾರೆ. ಇದೇ ವೇಳೆ ಇತ್ತ ಟ್ವಿಟರ್‌ನಲ್ಲಿ ಭಾರೀ ಟೀಕೆಗಳೂ ವ್ಯಕ್ತವಾಗಿವೆ.

ಹೌದು ದೆಹಲಿಯ ಉಪಮುಖ್ಯಮಂತ್ರಿ, ಉತ್ತರ ಪ್ರದೇಶದ ರಾಜಧಾನಿಯಾದ ಲಕ್ನೋಗೆ ಗುರುವಾರ ಭೇಟಿ ನೀಡಿದ್ದಾರೆ. ಇಲ್ಲಿ ಚುನಾವಣಾ ಘೋಷಣೆಗಳನ್ನು ಮಾಡಿದ ಸಿಸೋಡಿಯಾ ಯುಪಿ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಗೆದ್ದರೆ, ಯುಪಿಯ ಸಂಪೂರ್ಣ ಚಿತ್ರಣವೇ ಬದಲಾಗುತ್ತದೆ, 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತದೆ. ಇದರೊಂದಿಗೆ ರೈತರಿಗೆ ಕೃಷಿಗಾಗಿ ಬಳಸುವ ವಿದ್ಯುತ್ ಸಂಪೂರ್ಣ ಉಚಿತವಾಗಿ ನೀಡಲಾಗುವುದು ಎಂದಿದ್ದಾರೆ.

ಆಮ್ ಆದ್ಮಿ ಪಕ್ಷ ಈಗಾಗಲೇ ಪಂಜಾಬ್-ಉತ್ತರಾಖಂಡ ಮತ್ತು ಗುಜರಾತ್‌ನಲ್ಲಿ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದೆ ಎಂಬುವುದು ಉಲ್ಲೇಖನೀಯ. ಈಗ ಉತ್ತರ ಪ್ರದೇಶದಲ್ಲೂ ಇಂತಹುದ್ದೊಂದು ಘೋಷಣೆ ಮಾಡಿದೆ. ಆದರೆ ಈ ಭರವಸೆ ಕೊಟ್ಟ ಬೆನ್ನಲ್ಲೇ ಟ್ವಿಟ್ಟರ್‌ನಲ್ಲಿ ಅನೇಕ ತೀಕ್ಷ್ಣವಾದ ಕಾಮೆಂಟ್‌ಗಳು ಬಂದಿವೆ. ಒಬ್ಬ ಬಳಕೆದಾರರು ಉಚಿತ ವಿದ್ಯುತ್ ಹಿಂದಿನ ಅಸಲಿಯತ್ತನ್ನು ಗೂಗಲ್‌ನಲ್ಲಿ ಹುಡುಕಿ ಎಂದಿದ್ದಾರೆ.

English summary
In a bid to pacify the farmers’ unrest ahead of the upcoming UP Assembly elections, the Yogi Aditynath government in Uttar Pradesh has decided to withdraw around 868 cases registered against farmers for causing air pollution by burning stubble.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X