ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ: ಟ್ವಿಟರ್, ಫೇಸ್‌ಬುಕ್‌ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿದ ಜನನಾಯಕರು

|
Google Oneindia Kannada News

ಲಕ್ನೋ ಫೆಬ್ರವರಿ 21: 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ರಂಗೇರಿದೆ. 403 ಸ್ಥಾನಗಳ ಪೈಕಿ 172 ಸ್ಥಾನಗಳಿಗೆ ಮೂರು ಹಂತಗಳಲ್ಲಿ ಮತದಾನ ಪೂರ್ಣಗೊಂಡಿದೆ. ಎಲ್ಲಾ ಸ್ಥಾನಗಳ ಮತದಾನವು ಮಾರ್ಚ್ 7 ರಂದು ಮುಕ್ತಾಯಗೊಳ್ಳಲಿದೆ ಮತ್ತು ಮಾರ್ಚ್ 10 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು. ಈ ಚುನಾವಣೆಗಳಲ್ಲಿ ಸಾಮಾಜಿಕ ಮಾಧ್ಯಮವು ದೊಡ್ಡ ಪಾತ್ರವನ್ನು ವಹಿಸುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ತಮ್ಮ ಭಾಷಣಗಳನ್ನು ದೊಡ್ಡ ರ್ಯಾಲಿಗಳನ್ನು ಮತ್ತು ರೋಡ್‌ಶೋಗಳನ್ನು ನೇರವಾಗಿ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಉತ್ತರ ಪ್ರದೇಶದ ಮತದಾರರಿಗೆ ತಮ್ಮ ಸಂದೇಶಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಲು ಅವರು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ಟ್ವಿಟ್ಟರ್ ಮತ್ತು ಫೇಸ್‌ಬುಕ್‌ನಲ್ಲಿ ಉತ್ತರ ಪ್ರದೇಶದ ದೊಡ್ಡ ನಾಯಕರ ಹಿಂಬಾಲಕರ ಸಂಖ್ಯೆ ಹೆಚ್ಚಾಗಿದೆ. ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರಿಗೆ ಹೋಲಿಸಿದರೆ ಉತ್ತರ ಪ್ರದೇಶ ಮುಖ್ಯಮಂತ್ರಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಯೋಗಿ ಆದಿತ್ಯನಾಥ್ ಅವರು ಹೆಚ್ಚು ಟ್ವಿಟರ್ ಅನುಯಾಯಿಗಳನ್ನು ಹೊಂದಿದ್ದಾರೆ.

ಫೇಸ್‌ಬುಕ್‌ನಲ್ಲಿ ಯೋಗಿಗೆ 60 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್

ಫೇಸ್‌ಬುಕ್‌ನಲ್ಲಿ ಯೋಗಿಗೆ 60 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್

ಜನವರಿ 1, 2022 ರಂದು ಯೋಗಿ ಆದಿತ್ಯನಾಥ್ ಅವರು ಟ್ವಿಟ್ಟರ್‌ನಲ್ಲಿ 1,73,79,413 ಅನುಯಾಯಿಗಳನ್ನು ಹೊಂದಿದ್ದರು. ಇದು ಫೆಬ್ರವರಿ 20 ರ ವೇಳೆಗೆ 1,77, 13, 658 ಕ್ಕೆ ಏರಿಕೆಯಾಗಿದೆ. ಇನ್ನೂ ಕೇವಲ 51 ದಿನಗಳಲ್ಲಿ ಯೋಗಿ ಅವರ ಟ್ವಿಟ್ಟರ್ ಅನುಯಾಯಿಗಳು 3,34, 245 ರಷ್ಟು ಹೆಚ್ಚಾಗಿದ್ದಾರೆ. ಮಾತ್ರವಲ್ಲದೆ ಪ್ರತಿದಿನ 6,550 ಕ್ಕೂ ಹೆಚ್ಚು ಅನುಯಾಯಿಗಳು ಹೆಚ್ಚುತ್ತಿದ್ದಾರೆ.

ಫೇಸ್ ಬುಕ್ ನಲ್ಲಿ ಯೋಗಿ ಆದಿತ್ಯನಾಥ್ 60 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ, ಅಖಿಲೇಶ್ 70 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ ಮತ್ತು ಪ್ರಿಯಾಂಕಾ ಗಾಂಧಿ 40 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಮಾಯಾವತಿ ಅವರು ಫೇಸ್‌ಬುಕ್‌ನಲ್ಲಿ ಯಾವುದೇ ಅಧಿಕೃತ ದೃಢೀಕೃತ ಪುಟವನ್ನು ಹೊಂದಿಲ್ಲ.

4000 ಅನುಯಾಯಿಗಳ ಹೆಚ್ಚಳ

4000 ಅನುಯಾಯಿಗಳ ಹೆಚ್ಚಳ

ಇನ್ನೂ ಜನವರಿ 1, 2022 ರಂದು, ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಟ್ವಿಟರ್‌ನಲ್ಲಿ 1, 39,0,422 ಅನುಯಾಯಿಗಳನ್ನು ಹೊಂದಿದ್ದರು. 20 ಫೆಬ್ರವರಿ 2022 ರಂದು ಅನುಯಾಯಿಗಳ ಸಂಖ್ಯೆ 1,59,4,422 ಕ್ಕೆ ಏರಿಕೆಯಾಗಿದೆ. ಆದರೆ ಕೇವಲ 51 ದಿನಗಳಲ್ಲಿ, ಅಖಿಲೇಶ್ ಯಾದವ್ 2,04,000 ಟ್ವಿಟರ್ ಅನುಯಾಯಿಗಳನ್ನು ಹೊಂದಿದ್ದಾರೆ. ಜೊತೆಗೆ ಸುಮಾರು 4000 ಅನುಯಾಯಿಗಳು ಪ್ರತಿದಿನ ಹೆಚ್ಚುತ್ತಾರೆ.

ಜನಮನ ಗೆಲ್ಲುವತ್ತ ಪ್ರಿಯಾಂಕಾ ಗಾಂಧಿ

ಜನಮನ ಗೆಲ್ಲುವತ್ತ ಪ್ರಿಯಾಂಕಾ ಗಾಂಧಿ

ಇತ್ತ ಜನವರಿ 1, 2022 ರಂದು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ Twitter ನಲ್ಲಿ 45, 14, 516 ಅನುಯಾಯಿಗಳನ್ನು ಹೊಂದಿದ್ದರು, ಇದು ಫೆಬ್ರವರಿ 20 2022 ರಂದು 46,00,373 ಕ್ಕೆ ಏರಿಕೆಯಾಗಿದೆ. ಇನ್ನೂ 51 ದಿನಗಳಲ್ಲಿ ಒಟ್ಟು 85,857 Twitter ಅನುಯಾಯಿಗಳು ಹೆಚ್ಚಾಗಿದ್ದಾರೆ. ಸುಮಾರು 1,600 ಅನುಯಾಯಿಗಳು ಪ್ರತಿದಿನ ಹೆಚ್ಚಿದರು.

ಬೇರೆ ಪಕ್ಷಗಳಿಗೆ ಹೋಲಿಸಿದರೆ ಮಾಯವಾದ್ರಾ ಮಾಯಾವತಿ

ಬೇರೆ ಪಕ್ಷಗಳಿಗೆ ಹೋಲಿಸಿದರೆ ಮಾಯವಾದ್ರಾ ಮಾಯಾವತಿ

ಜನವರಿ 1, 2022 ರಂದು, BSP ವರಿಷ್ಠೆ ಮಾಯಾವತಿ Twitter ನಲ್ಲಿ 24, 31, 677 ಅನುಯಾಯಿಗಳನ್ನು ಹೊಂದಿದ್ದರು, ಇದು ಫೆಬ್ರವರಿ 20, 2022 ರಂದು 25,01,016 ಕ್ಕೆ ಏರಿಕೆಯಾಗಿದೆ. 51 ದಿನಗಳಲ್ಲಿ, ಮಾಯಾವತಿ 69,339 ಅನುಯಾಯಿಗಳನ್ನು ಸೇರಿಸಿದರು - ಸುಮಾರು 1296 ಅನುಯಾಯಿಗಳು ಪ್ರತಿದಿನ ಹೆಚ್ಚುತ್ತಿದ್ದಾರೆ. ಹೀಗಾಗಿ ಬೇರೆ ಪಕ್ಷಗಳಿಗೆ ಹೋಲಿಸಿದರೆ ಮಾಯಾವತಿ ಫಾಲೋವರ್ಸ್ ತುಂಬಾ ಕಡಿಮೆ ಇದ್ದಾರೆ.

English summary
Uttar Pradesh Assembly elections 2022 are in full swing. Voting on 172 of the 403 seats has been completed in three phases. The voting on all seats will conclude on March 7 and results will be announced on March 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X