ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉ.ಪ್ರ ಚುನಾವಣೆ: ಬಿಎಸ್‌ಪಿ ಮತಗಳನ್ನು ಬಾಚಿಕೊಳ್ಳಲು ಎಸ್‌ಪಿ ಯತ್ನ

|
Google Oneindia Kannada News

ಲಕ್ನೋ, ನವೆಂಬರ್ 30: ಮುಂಬರಲಿರುವ ಉತ್ತರ ಪ್ರದೇಶ ವಿಧಾನಸಭೆ ಹೊಸ್ತಿಲಿನಲ್ಲಿ ಮತಬ್ಯಾಂಕ್ ಲೆಕ್ಕಾಚಾರ ಶುರುವಾಗಿದೆ.

ಸಮಾವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರ ಮತ ಬ್ಯಾಂಕ್ ಆಗಿರುವ ಜಾಟವ ಸಮುದಾಯದ ಮತಗಳ ಮೇಲೆ ಕಣ್ಣಿರಿಸಿದ್ದಾರೆ.

 ಉ.ಪ್ರ ಚುನಾವಣೆ: ಯಾವ ಪಕ್ಷದೊಂದಿಗೂ ಮೈತ್ರಿ ಇಲ್ಲ ಎಂದ ಮಾಯಾವತಿ ಉ.ಪ್ರ ಚುನಾವಣೆ: ಯಾವ ಪಕ್ಷದೊಂದಿಗೂ ಮೈತ್ರಿ ಇಲ್ಲ ಎಂದ ಮಾಯಾವತಿ

ಅಖಿಲೇಶ್ ಯಾದವ್ ಭಾನುವಾರ ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಖಿಲೇಶ್ ಇತರೆ ಹಿಂದುಳಿದ ಸಮುದಾಯದ ಮತದಾರರ ಮೇಲೆ ಪ್ರಭಾವ ಬೀರಬಲ್ಲ ಸಣ್ಣಪುಟ್ಟ ಪಕ್ಷಗಳೊಂದಿಗೆ ಈಗಾಗಲೇ ಮೈತ್ರಿ ಗಟ್ಟಿಗೊಳಿಸಿದ್ದಾರೆ.

UP Poll: Akhilesh Now Eyes Mayawatis Vote Bank

ಇನ್ನು ಅಖಿಲೇಶ್ ಭೇಟಿ ಕುರಿತು ಚಂದ್ರಶೇಖರ್ ಮಾತನಾಡಿದ್ದು, ಈ ಸರ್ಕಾರವು ದಲಿತ ವಿರೋಧಿಯಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಚಂದ್ರಶೇಖರ್ ದಲಿತ ಮತದಾರರ ಮೇಲೆ ಅದರಲ್ಲೂ ವಿಶೇಷವಾಗಿ ಉತ್ತರಪ್ರದೇಶದ ಪಶ್ಚಿಮ ಭಾಗದ ಸಹರನ್‌ಪುರ, ಪುಜಾಫರ್‌ನಗರ, ಬುಲಂದ್‌ಶೆಹರ್ ಸೇರಿ ಹಲವು ಜಿಲ್ಲೆಗಳಲ್ಲಿ ಪ್ರಭಾವ ಬೀರಿದ್ದಾರೆ.

ಕಳೆದ ವರ್ಷ ನಡೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಎಸ್‌ಪಿ ಬಹುವಾಗಿ ನಿರೀಕ್ಷೆ ಇಟ್ಟುಕೊಂಡಿದ್ದ ಕ್ಷೇತ್ರದಲ್ಲಿ ಚಂದ್ರಶೇಖರ್ ಅವರ ಸಂಘಟನೆಯ ಆಜಾದ್ ಸಮಾಜ್ ಪಕ್ಷ ಅಭ್ಯರ್ಥಿ 13,500ಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಈ ಮೂಲಕ ಬಿಜೆಪಿಗೆ ಎಚ್ಚರಿಕೆಯನ್ನೂ ರವಾನಿಸಿದ್ದರು.

ಚಂದ್ರಶೇಖರ್ ಬಣದ ಸಖ್ಯವು, ಸಮಾಜವಾದಿ ಪಕ್ಷಕ್ಕೆ ಖಂಡಿತವಾಗಿಯೂ ಪ್ರಯೋಜನಕ್ಕೆ ಬರಲಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಬಿಎಸ್‌ಪಿಯ ಮತ ಬ್ಯಾಂಕ್ ಅನ್ನು ಕಸಿಯುವ ಸಾಮರ್ಥ್ಯವನ್ನು ಅವರು ಈಗಾಗಲೇ ಸಾಬೀತುಪಡಿಸಿದ್ದು, ದಲಿತರ ಮತಗಳು ಅಖಿಲೇಶ್‌ಗೆ ಬೋನಸ್ ಆಗಿ ಪರಿಣಮಿಸಬಲ್ಲದು ಎಂದು ಹೇಳಲಾಗಿದೆ.

ಚಂದ್ರಶೇಖರ್ ಬಣವು ತಮ್ಮ ಪಕ್ಷಕ್ಕೆ ದೊಡ್ಡ ಹೊಡೆದ ಎಂಬುದನ್ನು ಬಿಎಸ್‌ಪಿ ನಾಯಕರು ಕೂಡ ಒಪ್ಪುತ್ತಾರೆ. ಮಾಯಾವತಿ ಅವರು ದಲಿತರ ಹಿತ ಕಾಯಲಿಲ್ಲ ಎಂದು ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ. ಚಂದ್ರಶೇಖರ್ ಪ್ರವೇಶದಿಂದಾಗಿ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಗೆಲುವಿನ ನಿರೀಕ್ಷೆಯ ಕ್ಷೇತ್ರಗಳಲ್ಲಿ ಖಂಡಿತ ಹೊಡೆದ ಬೀಳುತ್ತದೆ ಎಂದು ಬಿಎಸ್‌ಪಿ ನಾಯಕರು ಹೇಳುತ್ತಾರೆ.

ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜವಾದಿ ಪಕ್ಷ(ಬಿಎಸ್‌ಪಿ) ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ತಿಳಿಸಿದ್ದಾರೆ.

ನಮಗೆ ಯಾವುದೇ ಪಕ್ಷದ ನೆರವು ಬೇಕಿಲ್ಲ, ನಾವು ಸಮಾಜದ ಎಲ್ಲಾ ವಿಭಾಗದ ಜನತೆಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ. ಅದು ಶಾಶ್ವತ ಮೈತ್ರಿ. ಈ ಮೈತ್ರಿಯೊಂದಿಗೇ ನಾವು 2007ರಂತೆಯೇ ಈ ಬಾರಿಯೂ ಬಹುಮತದೊಂದಿಗೆ ಗೆಲ್ಲುತ್ತೇವೆ ಎಂದು ಅವರು ಹೇಳಿದ್ದಾರೆ.

ರಾಜ್ಯಗಳ ಚುನಾವಣೆ ಬಳಿಕ ಮತ್ತೆ ಇಂಧನ ದರ ಏರಲಿದೆ: ಮಾಯಾವತಿರಾಜ್ಯಗಳ ಚುನಾವಣೆ ಬಳಿಕ ಮತ್ತೆ ಇಂಧನ ದರ ಏರಲಿದೆ: ಮಾಯಾವತಿ

ಇದೇ ವೇಳೆ ಬಿಜೆಪಿ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ವಿರುದ್ಧವೂ ಹರಿಹಾಯ್ದಿದ್ದಾರೆ. ಮತ್ತೊಂದೆಡೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ವಿರುದ್ಧ ಮತ್ತೆ ಗುಡುಗಿದ್ದಾರೆ.

ಲಖಿಂಪುರ್ ಖೇರಿ ಪ್ರಕರಣದಲ್ಲಿ ಹೈಕೋರ್ಟ್‌ಗಳ ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ ನಡೆಸಲು ಸುಪ್ರೀಂ ನೀಡಿರುವ ಆದೇಶದ ಬಗ್ಗೆ ಮಾತನಾಡಿರುವ ಅಖಿಲೇಶ್ ಸುಪ್ರೀಂಕೋರ್ಟ್‌ಗೆಬಿಜೆಪಿ ಬಗ್ಗೆ ನಂಬಿಕೆ ಇಲ್ಲ. ದೆಹಲಿ, ಲಕ್ನೋ ಹಾಗೂ ಲಖಿಂಪುರ ಖೇರಿಯ ಬಿಜೆಪಿ ಇಂಜಿನ್‌ಗಳು ಸೇರಿಕೊಂಡು ನ್ಯಾಯಾಂಗವನ್ನೇ ಹಾಳುಮಾಡಲು ಯತ್ನಿಸುತ್ತಿವೆ ಎಂದರು.

ದಲಿತರು ಹಾಗೂ ಹಿಂದುಳಿದ ವರ್ಗಗಳಲ್ಲಿ ಹುಟ್ಟಿದ ಮಹಾನ್ ನಾಯಕರನ್ನು ಸಮಾಜವಾದಿ ಪಕ್ಷವು ಅವಹೇಳನ ಮಾಡಿದೆ ಎಂದು ಮಾಯಾವತಿ ಈ ಹಿಂದೆ ಆರೋಪಿಸಿದ್ದರು. ಈ ವರ್ಗಗಳ ಜನರು ಅಖಿಲೇಶ್ ಯಾದವ್ ಅವರ ಪಕ್ಷದಿಂದ ಏನ್ನನೂ ನಿರೀಕ್ಷಿಸಬಾರದು ಎಂದು ಹೇಳಿದ್ದರು.

ಜಾತಿಯ ದ್ವೇಷ ರಾಜಕಾರಣದಿಂದ ರಾಜ್ಯದಲ್ಲಿ ಅನೇಕ ಸಂಸ್ಥೆಗಳು ಹಾಗೂ ಯೋಜನೆಗಳ ಹೆಸರನ್ನು ಬದಲಿಸಲಾಗಿದೆ ಎಂದಿದ್ದರು. ದಲಿತರು ಹಾಗೂ ಹಿಂದುಳಿದ ವರ್ಗಗಳಲ್ಲಿ ಹುಟ್ಟಿದ ಮಹಾನ್ ಸಂತರು, ಗುರುಗಳು ಹಾಗೂ ಮಹಾಪುರುಷರನ್ನು ಎಸ್‌ಪಿ ಮೊದಲಿನಿಂದಲೂ ಅವಹೇಳನ ಮಾಡುತ್ತಿದೆ.

Recommended Video

ಕೃಷಿ ಕಾಯ್ದೆ ರದ್ದತಿ ಮಸೂದೆ ಮಂಡಿಸಲು ಸರ್ಕಾರದ ಸಿದ್ಧತೆ ಹೇಗಿದೆ? | Oneindia Kannada

English summary
After consolidating his tie-ups with several smaller outfits which have influence over 'non-Yadav' OBC voters, Samajwadi Party (SP) president Akhilesh Yadav has now set his eyes on the 'Jatav' (SC) vote bank of BSP supremo Mayawati and has initiated talks with Dalit leader and Bheem Army founder Chandrashekhar alias Ravan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X