ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ: ಕದ್ದ ಎಮ್ಮೆಯ ನಿಜವಾದ ಮಾಲೀಕನ ಪತ್ತೆಗೆ ಡಿಎನ್‌ಎ ಪರೀಕ್ಷೆ

|
Google Oneindia Kannada News

ಶಾಮ್ಲಿ ಜೂನ್ 07: ಸಾಮಾನ್ಯವಾಗಿ ಸಾಕು ಜಾನುವಾರಗಳು ಕಳ್ಳತನದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಆದರೆ ಕಳ್ಳತನವಾದ ಪ್ರಾಣಿಗಳನ್ನು ಪತ್ತೆ ಹಚ್ಚುವುದು ಬಹುದೊಡ್ಡ ಕೆಲಸ. ಒಂದು ಪಕ್ಷ ಯಾವುದಾದರು ವಸ್ತುವನ್ನು ಕದ್ದ ಕಳ್ಳನನ್ನು ಹಿಡಿದುಬಿಡಬಹುದೇನೋ, ಆದರೆ ಜಾನುವಾರಗಳನ್ನು ಕಳ್ಳತನ ಮಾಡಿದರೆ ಅದನ್ನು ಪತ್ತೆ ಮಾಡುವುದು ಸುಲಭದ ಮಾತಲ್ಲ. ಅದಕ್ಕೂ ಕೂಡ ಜಾಣ್ಮೆ ಬೇಕು. ಉತ್ತರಪ್ರದೇಶದ ಎಮ್ಮೆ ಕಳ್ಳತನದ ಪ್ರಕರಣದಲ್ಲಿ ಜಾಣತನದಿಂದ ಬಗೆಹರಿಸಲಾಗಿದೆ.

ಹೌದು... ಉತ್ತರ ಪ್ರದೇಶದ ಶಾಮ್ಲಿ ಎಂಬಲ್ಲಿ ಎಮ್ಮೆ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಕಳೆದು ಹೋದ ಎಮ್ಮೆ ಸಿಕ್ಕರೂ ಮಾಲೀಕರು ಇಬ್ಬರೂ ಎಮ್ಮೆ ತಮ್ಮದೆಂದು ವಾದಿಸುವುದು ಕಂಡು ಬಂದಿದೆ. ಇದು ಪೊಲೀಸರಿಗೆ ದೊಡ್ಡ ತಲೆ ನೋವಾಗಿತ್ತು. ಎಮ್ಮೆಯ ನಿಜವಾದ ಮಾಲೀಕ ಯಾರು? ಎಂದು ಕಂಡುಹಿಡಿಯಲು ಯುಪಿ ಪೊಲೀಸರು ಎಮ್ಮೆಯ ಡಿಎನ್‌ಎ ಪರೀಕ್ಷೆಗೆ ಆದೇಶಿಸಿದ್ದಾರೆ. ಬಳಿಕ ಎಮ್ಮೆಯ ನಿಜವಾದ ಮಾಲೀಕನನ್ನು ಕಂಡು ಹಿಡಿಯಲಾಗಿದೆ.

ಯೋಗಿ ರ್‍ಯಾಲಿ ಮೈದಾನದಲ್ಲಿ ರೈತರು ಬಿಡಾಡಿ ದನಗಳನ್ನು ಬಿಟ್ಟಿದ್ದು ಸುಳ್ಳುಯೋಗಿ ರ್‍ಯಾಲಿ ಮೈದಾನದಲ್ಲಿ ರೈತರು ಬಿಡಾಡಿ ದನಗಳನ್ನು ಬಿಟ್ಟಿದ್ದು ಸುಳ್ಳು

ನಿಜವಾದ ಮಾಲೀಕರು ಯಾರು?

ನಿಜವಾದ ಮಾಲೀಕರು ಯಾರು?

ರೈತ ಚಂದ್ರಪಾಲ್ ಕಶ್ಯಪ್ ಅವರ ಮೂರು ವರ್ಷದ ಕರು ಇರುವ ಎಮ್ಮೆಯನ್ನು ಆಗಸ್ಟ್ 25, 2020 ರಂದು ಕಳವು ಮಾಡಲಾಗಿತ್ತು. ರೈತ ಚಂದ್ರಪಾಲ್ ಕಶ್ಯಪ್ ಅಹಮದ್‌ಗಢ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದು ಬಹುತೇಕ ಕೊರೊನಾ ಸಂದರ್ಭ. ಆದರೆ ಪೊಲೀಸರು ಕದ್ದ ಎಮ್ಮೆಯನ್ನು ಕಂಡುಹಿಡಿಯದಿದ್ದಾಗ, ರೈತ ಚಂದ್ರಪಾಲ್ ಉನ್ನತ ಮಟ್ಟದಲ್ಲಿ ಎಮ್ಮೆಯನ್ನು ಹುಡುಕಲು ಪ್ರಾರಂಭಿಸಿದರು. ಅವರು ತಮ್ಮ ಎಮ್ಮೆಯನ್ನು ಸಹರಾನ್‌ಪುರದ ಬೀನ್‌ಪುರ್ ಗ್ರಾಮದಲ್ಲಿ ಕಂಡುಕೊಂಡರು. ಆದರೆ ಎಮ್ಮೆಯ ಹೊಸ ಮಾಲೀಕ ಸತ್‌ಬೀರ್ ಸಿಂಗ್ ಅದು ತನ್ನದು ಎಂದು ಹೇಳತೊಡಗಿದರು. ಎಮ್ಮೆ ಹಿಂತಿರುಗಿಸಲು ನಿರಾಕರಿಸಿದರು. ಸಮಸ್ಯೆ ಮತ್ತಷ್ಟು ದ್ವಿಗುಣಗೊಂಡಿತು. ಎಮ್ಮೆಯ ನಿಜವಾದ ಮಾಲೀಕ ಯಾರು ಎಂಬುದು ತಿಳಿಯಲಿಲ್ಲ. ಮತ್ತೆ ಈ ಸಮಸ್ಯೆ ಪೊಲೀಸರ ಬಳಿ ಹೋಗಿದೆ.

ಒತ್ತಾಯದಿಂದ DNA ಪರೀಕ್ಷೆ ನಡೆಸುವುದು ಸಮ್ಮತವಲ್ಲ; ಸುಪ್ರೀಂ ಕೋರ್ಟ್ಒತ್ತಾಯದಿಂದ DNA ಪರೀಕ್ಷೆ ನಡೆಸುವುದು ಸಮ್ಮತವಲ್ಲ; ಸುಪ್ರೀಂ ಕೋರ್ಟ್

ವರದಿಯಲ್ಲಿ ನಿಜವಾದ ಮಾಲೀಕ ಪತ್ತೆ

ವರದಿಯಲ್ಲಿ ನಿಜವಾದ ಮಾಲೀಕ ಪತ್ತೆ

ಇಬ್ಬರೂ ಮಾಲೀಕರು ಎಮ್ಮೆ ತಮ್ಮದೆಂದು ವಾದಿಸಿದಾಗ ಪೊಲೀಸರು ಎಮ್ಮೆಯ ನಿಜವಾದ ಮಾಲೀಕ ಯಾರು ಎಂದು ಪತ್ತೆ ಹಚ್ಚಲು ಡಿಎನ್‌ಎ ಪರೀಕ್ಷೆಗೆ ಆದೇಶಿಸಿದ್ದಾರೆ. ಕರು ಹಾಗೂ ಎಮ್ಮೆಯ ಪರೀಕ್ಷೆ ಬಳಿಕ ಸತ್‌ಬೀರ್ ಸಿಂಗ್ ಸುಳ್ಳು ಹೇಳಿರುವುದು ಡಿಎನ್‌ಎ ವರದಿ ಮೂಲಕ ತಿಳಿದು ಬಂದಿದೆ. ಎಮ್ಮೆಯ ನಿಜವಾದ ಮಾಲೀಕ ಚಂದ್ರಪಾಲ್ ಕಶ್ಯಪ್ ಆಗಿದ್ದರು. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ಹಿಂದಿನ ಕಳ್ಳತನ ಪ್ರಕರಣ ಸದ್ಯ ಕೊನೆಗೊಂಡಿದೆ. ಶಾಮ್ಲಿ ಎಸ್ಪಿ ಸುಕೃತಿ ಮಾಧವ್ ಅವರು ಎಮ್ಮೆಯ ನಿಜವಾದ ಮಾಲೀಕನನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. 'ಸಹರಾನ್‌ಪುರದ ಎರಡೂ ಎಮ್ಮೆಗಳ ಡಿಎನ್‌ಎ ಪರೀಕ್ಷೆಗೆ ಆದೇಶಿಸಿದ್ದೆವು. ವರದಿಯಲ್ಲಿ ಸತ್‌ಬೀರ್ ಸಿಂಗ್ ಸುಳ್ಳು ಹೇಳುತ್ತಿರುವುದು ತಿಳಿದು ಬಂದಿದೆ. ಎಮ್ಮೆ ಮತ್ತು ಕರಿ ಎರಡೂ ಕಶ್ಯಪ್ ಬಳಿ ಇವೆ. ನಿಜವಾದ ಮಾಲೀಕರನ್ನು ಪತ್ತೆ ಹಚ್ಚುವುದು ನಿಜಕ್ಕೂ ಸವಾಲಾಗಿತ್ತು' ಎಂದು ಶಾಮ್ಲಿ ಎಸ್ಪಿ ಈ ಸಂದರ್ಭದಲ್ಲಿ ಹೇಳಿದರು.

ಪತ್ರದಲ್ಲಿ ಡಿಎನ್‌ಎ ಪರೀಕ್ಷೆಗೆ ಒತ್ತಾಯ

ಪತ್ರದಲ್ಲಿ ಡಿಎನ್‌ಎ ಪರೀಕ್ಷೆಗೆ ಒತ್ತಾಯ

ಈ ಸಂಬಂಧ ಸಂತ್ರಸ್ತ ರೈತ ಚಂದ್ರಪಾಲ್ ಅವರು ಉನ್ನತ ಅಧಿಕಾರಿಗಳ ಜತೆ ಸಿಎಂ ಯೋಗಿ ಅವರಿಗೆ ಪತ್ರ ಬರೆದಿದ್ದರು. ಇದರಲ್ಲಿ ನೊಂದ ರೈತ, ಎಮ್ಮೆ ಹಾಗೂ ಕರು ಡಿಎನ್‌ಎ ಪರೀಕ್ಷೆ ನಡೆಸಿ ಸತ್ಯಾಂಶ ತಿಳಿಯುವಂತೆ ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಬಳಿಕ ಪೊಲೀಸರು ಡಿಎನ್‌ಎ ಪರೀಕ್ಷೆಗೆ ಆದೇಶಿಸಿದ್ದರು ಎಂದು ತಿಳಿದು ಬಂದಿದೆ.

ಎಮ್ಮೆ ಪಡೆದ ರೈತನ ಮೊಗದಲ್ಲಿ ಸಂತಸ

ಎಮ್ಮೆ ಪಡೆದ ರೈತನ ಮೊಗದಲ್ಲಿ ಸಂತಸ

ಇದೇ ವೇಳೆ ತಮ್ಮ ಎಮ್ಮೆಯನ್ನು ಗುರುತಿಸುವ ಕುರಿತು ರೈತ ಚಂದ್ರಪಾಲ್ ಮಾತನಾಡಿ, ಮನುಷ್ಯರಂತೆ ಪ್ರಾಣಿಗಳಿಗೂ ವಿಭಿನ್ನ ಗುಣಗಳಿವೆ. ಮೊದಲಿಗೆ ಅವರ ಎಡಗಾಲಿಗೆ ರಕ್ತಗಾಯವಾಗಿದೆ. ಇದರ ಬಾಲದಲ್ಲಿ ಬಿಳಿ ತೇಪೆಯೂ ಇದೆ. ಮತ್ತು ಮೂರನೆಯ ವಿಷಯವೆಂದರೆ ಅದರ ಸ್ಮರಣೆ. ನಾನು ಅವನಿಗೆ ಹತ್ತಿರವಾದಾಗ, ಅವನು ನನ್ನನ್ನು ಗುರುತಿಸಿದನು ಮತ್ತು ನನ್ನನ್ನು ತಲುಪಲು ಪ್ರಯತ್ನಿಸಿದನು. ಹಾಗಾದರೆ ನನ್ನ ಎಮ್ಮೆಯನ್ನು ಗುರುತಿಸಲು ಇನ್ನೇನು ಬೇಕು? ಎಂದು ರೈತ ಹೇಳಿಕೊಂಡರು. ಜೊತೆಗೆ ತಮ್ಮ ಎಮ್ಮೆಯನ್ನು ವಾಪಸ್ ಪಡೆದಿದ್ದಕ್ಕೆ ಅವರು ಸಂತಸ ಕೂಡ ವ್ಯಕ್ತಪಡಿಸಿದ್ದಾರೆ.

English summary
Police have uncovered a stolen buffalo from a DNA test in Shamli, Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X