• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗೂಗಲ್ ಸಂಸ್ಥೆ ಸಿಇಒ ಸುಂದರ್ ಪಿಚ್ಚೈ ವಿರುದ್ಧ ಎಫ್‌ಐಆರ್ ದಾಖಲಿಸಿ ಬಳಿಕ ಕೈಬಿಟ್ಟ ವಾರಾಣಸಿ ಪೊಲೀಸರು

|
Google Oneindia Kannada News

ವಾರಾಣಸಿ,ಫೆಬ್ರವರಿ 12: ಮಾನಹಾನಿ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಗೂಗಲ್ ಸಿಇಒ ಸುಂದರ್ ಪಿಚ್ಚೈ ಅವರ ಹೆಸರನ್ನು ಎಫ್‌ಐಆರ್‌ನಿಂದ ಕೈಬಿಡಲಾಗಿದೆ.

ಗೂಗಲ್ ಸಂಸ್ಥೆ ಸಿಇಒ ಸುಂದರ್ ಪಿಚ್ಚೈ ಸೇರಿ 17 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದೀಗ ಎಫ್‌ಐಆರ್‌ನಿಂದ ವಾರಾಣಸಿ ಪೊಲೀಸರು ಅವರ ಹೆಸರನ್ನು ತೆಗೆದುಹಾಕಿದ್ದಾರೆ.

ಗೂಗಲ್ ವಿರುದ್ಧ ಭಾರಿ ದೊಡ್ಡ ಪ್ರಕರಣ ದಾಖಲಿಸಿದ ಅಮೆರಿಕಗೂಗಲ್ ವಿರುದ್ಧ ಭಾರಿ ದೊಡ್ಡ ಪ್ರಕರಣ ದಾಖಲಿಸಿದ ಅಮೆರಿಕ

ಅಮೆರಿಕದಲ್ಲಿರುವ ಸುಂದರ್ ಪಿಚೈ ಅಲ್ಲದೆ ಗೂಗಲ್ ಇಂಡಿಯಾ ಸಂಸ್ಥೆಯ ಸಂಜಯ್ ಕುಮಾರ್ ಗುಪ್ತಾ ಸೇರಿ ಮೂವರ ವಿರುದ್ಧ ಕಳೆದ ಫೆಬ್ರವರಿ 6ರಂದು ವಾರಣಾಸಿಯ ಭೇಲುಪುರ್ ಪೊಲೀಸ್ ಠಾಣೆಯಲ್ಲಿ ಆರಂಭದಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ಗೂಗಲ್ ಸಂಸ್ಥೆ ಕಡೆಯಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ.

ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಸುಂದರ್ ಪಿಚೈ ಮತ್ತು ಇತರ ಮೂವರು ಉನ್ನತ ಅಧಿಕಾರಿಗಳ ಹೆಸರುಗಳನ್ನು ಕೇಸಿನಿಂದ ಕೈಬಿಡಲಾಗಿದೆ ಎಂದು ತನಿಖೆಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ತನಗೆ ಮೊದಲು ವಾಟ್ಸಾಪ್ ಗ್ರೂಪ್ ನಲ್ಲಿ ಮತ್ತು ನಂತರ ಯೂಟ್ಯೂಬ್ ನಲ್ಲಿ ಬಂದ ವಿಡಿಯೊವನ್ನು 5 ಲಕ್ಷ ಮಂದಿ ವೀಕ್ಷಿಸಿದ್ದು ವಿಡಿಯೊಗೆ ತಾವು ಆಕ್ಷೇಪ ಸಲ್ಲಿಸಿದ ಬಳಿಕ 8,500ಕ್ಕೂ ಅಧಿಕ ಬೆದರಿಕೆ ಕರೆಗಳು ಮೊಬೈಲ್ ಗೆ ಬಂದವು ಎಂದು ಸ್ಥಳೀಯರೊಬ್ಬರು ದೂರು ನೀಡಿದ್ದರು.

English summary
Police in Uttar Pradesh's Varanasi had booked Google CEO Sundar Pichai and 17 others last week over a video that allegedly defamed Prime Minister Narendra Modi but later removed the tech giant officials' names from the FIR, police officials said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X