ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು ಉತ್ತರಪ್ರದೇಶದತ್ತ: ಬಿಎಸ್‌ಪಿಯಲ್ಲಿ ಜಾತವ ಸಮುದಾಯದ ನಾಯಕತ್ವದ ಇತಿಹಾಸ ಇಲ್ಲಿದೆ

|
Google Oneindia Kannada News

ನವದೆಹಲಿ, ಜು. 02: ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಕಾನ್ಪುರದ ಗಂಗಾ ತೀರದಲ್ಲಿ ಬೆಳ್ಳಿಯಿಂದ ಮಾಡಿದ ರಥವನ್ನು ಓಡಿಸುವ ಮೂಲಕ ಖ್ಯಾತಿಯಾದ ಸಂವಾಲ್ ದಾಸ್ ಎಂಬ ಜಾತವ ಸಮುದಾಯದ ವ್ಯಕ್ತಿಯು ಕಥೆ ನಿಮಗೆ ತಿಳಿದಿರಬಹುದು. ಎರಡನೇ ವಿಶ್ವ ಯುದ್ಧದ ಸಂದರ್ಭ ಚರ್ಮದ ಬೂಟುಗಳು ಮತ್ತು ಬೆಲ್ಟ್‌ಗಳ ಬೇಡಿಕೆ ಹೆಚ್ಚಾದಾಗ, ಆಗ್ರಾದಲ್ಲಿನ ಹಾಗೂ ಕಾನ್ಪುರದಲ್ಲಿನ ಜಾತವ ಸಮುದಾಯದವರು ಚರ್ಮದ ವ್ಯಾಪಾರದ ಮೂಲಕ ಸಾಕಷ್ಟು ಹಣವನ್ನು ಗಳಿಸಿ ಈ ಪ್ರದೇಶದಲ್ಲಿ ದೊಡ್ಡ ವ್ಯಾಪಾರಸ್ಥರು ಆದರು ಎಂಬುದು ನಿಮಗೆ ತಿಳಿದಿದೆಯೇ?.

ಇನ್ನು 1857 ರಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ, ಆಂದೋಲನದಲ್ಲಿ ಭಾಗವಹಿಸಿದ ಜಾತವ ಕುಲದವರ ಭೂಮಿಯನ್ನು ಬ್ರಿಟಿಷರು ಮುಟ್ಟುಗೋಲು ಹಾಕಿಕೊಂಡಿರುವ ವಿಚಾರ ತಿಳಿದಿರುವಂತದ್ದು. ಆ ಸಂದರ್ಭದಲ್ಲಿ ಈ ಜಾತವ ಸಮುದಾಯದವರಲ್ಲಿ ಭಾರೀ ಪ್ರಮಾಣದ ಭೂಮಿ ಇತ್ತು. ಸ್ವಾತಂತ್ರ್ಯ ಸಂಗ್ರಾಮ ಸಂದರ್ಭದಲ್ಲಿ ಪೂರ್ವ ಉತ್ತರ ಪ್ರದೇಶದ ಪ್ರದೇಶದಲ್ಲಿ ವಾಸವಿದ್ದ ಜಾತವ ಕುಲದವರನ್ನು ಹೆಚ್ಚಾಗಿ ಬ್ರಿಟಿಷರಿಗೆ ಸೇರಿದ ಕುದುರೆಗಳ ಉಸ್ತುವಾರಿಗಳಾಗಿ ನೇಮಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಅವರಿಗೆ ಭೂಮಿಯು ಲಭಿಸಿತ್ತು.

ಸಣ್ಣ ಪಕ್ಷಗಳೊಂದಿಗೆ ಎಸ್‌ಪಿ ಮೈತ್ರಿ, ಇದು ಅಸಹಾಯಕತೆಯಲ್ಲದೇ ಮತ್ತೇನು ಎಂದ ಮಾಯಾವತಿಸಣ್ಣ ಪಕ್ಷಗಳೊಂದಿಗೆ ಎಸ್‌ಪಿ ಮೈತ್ರಿ, ಇದು ಅಸಹಾಯಕತೆಯಲ್ಲದೇ ಮತ್ತೇನು ಎಂದ ಮಾಯಾವತಿ

ತಾಯಿಯಂತೆ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ಮಗ ರಾಜೀವ್ ಪ್ರಸಿದ್ಧ ಡೂನ್ ಶಾಲೆಯಲ್ಲಿ ಹೇಗೆ ಶಿಕ್ಷಣ ಪಡೆದರು ಎಂಬುದರ ಕುರಿತು ನಾವು ಆಗಾಗ್ಗೆ ಮಾತನಾಡುತ್ತೇವೆ. ಆದರೆ ಬ್ರಿಟಿಷರು ಗಾಜಿಪುರದ ಜೈಸ್ವರ್ (ಜಾತವ ಸಾಮಾಜಿಕ ಗುಂಪಿನ ಭಾಗ) ಅನ್ನು ಈ ಶಾಲೆಯ ಟ್ರಸ್ಟಿಯನ್ನಾಗಿ ಮಾಡಿದ್ದರು ಎಂಬುದು ನಮಗೆ ತಿಳಿದಿದೆಯೇ? ಆ ಸಂದರ್ಭದಲ್ಲಿ ಟ್ರಸ್ಟಿಯ ಕುಟುಂಬ ಸದಸ್ಯರಿಗೆ ಡೂನ್ ಶಾಲೆಗೆ ಪ್ರವೇಶ ಪಡೆಯಲು ಮೀಸಲಾತಿ ಕಲ್ಪಿಸಲಾಗಿದೆ. ಹಾಗಾದರೆ ಈ ಸಮುದಾಯಕ್ಕೂ ದಲಿತ ಸಮುದಾಯ ಜಾತವ ಹಾಗೂ ಬಹುಜನ ಸಮಾನ ಪಕ್ಷಕ್ಕೂ ಇರುವ ನಂಟು ನಿಮಗೆ ತಿಳಿದಿದೆಯೇ?, ಇಲ್ಲಿದೆ ವಿವರ ಮುಂದೆ ಓದಿ..

 ಶಿಕ್ಷಣ ಹಾಗೂ ಸುಧಾರಣೆ

ಶಿಕ್ಷಣ ಹಾಗೂ ಸುಧಾರಣೆ

ಬಾಬಾಸಾಹೇಬ್ ಅಂಬೇಡ್ಕರ್‌ ಮೊದಲೇ ಉತ್ತರ ಭಾರತದ ಆದಿ-ಹಿಂದೂ ಚಳವಳಿಯ ಸಂಸ್ಥಾಪಕ ಸ್ವಾಮಿ ಅಚುತಾನಂದ್, ಜಾತವ ಕುಲದ ಜನರು ಶಿಕ್ಷಣ ಪಡೆಯಲು ಪ್ರೇರೇಪಿಸಿದರು. ಸ್ವಾಮಿ ಅಚುತಾನಂದ್‌ 1920 ರ ದಶಕದಲ್ಲಿ ಉತ್ತರ ಪ್ರದೇಶದ ಹಳ್ಳಿಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅಚುತಾನಂದ್‌ ಅನುಯಾಯಿಗಳಲ್ಲಿ ಹೆಚ್ಚಿನವರು ಜಾತವ ಕುಲದವರು ಆಗಿದ್ದರು. ''ಪ್ರತಿದಿನ ಒಂದು ಬಟ್ಟಲು ಅಕ್ಕಿಯನ್ನು ಉಳಿಸಿ, ದಿನಕ್ಕೆ ಒಂದು ಬಟ್ಟಲು ಊಟ ಮಾಡಿ, ಇನ್ನೊಂದು ಬಟ್ಟಲು ಊಟವನ್ನು ಉಳಿಸುವ ಮೂಲಕ ನಿಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ,'' ಎಂದು ಅಚುತಾನಂದ್‌ ಹೇಳಿದರು. ಸ್ವಾಮಿ ಅಚುತಾನಂದ್‌ ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ದಲಿತರಿಗಾಗಿ ಗ್ರಂಥಾಲಯಗಳನ್ನು ಸ್ಥಾಪಿಸಿದರು. ದಲಿತ ಸಾಹಿತ್ಯವನ್ನು ಪ್ರಕಟಿಸಲು ಮುದ್ರಣಾಲಯವನ್ನೂ ಸ್ಥಾಪಿಸಿದರು.

ಇನ್ನು ವಸಾಹತುಶಾಹಿ ಅವಧಿಯಲ್ಲಿ, ಆರ್ಯ ಸಮಾಜವು ಶಿಕ್ಷಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ದಲಿತರ ನಡುವೆ ಕಾರ್ಯನಿರ್ವಹಿಸಿತು. ಇತರ ದಲಿತ ಸಮುದಾಯಗಳಿಗೆ ಹೋಲಿಸಿದರೆ ಜಾತವರು ಆರ್ಥಿಕವಾಗಿ ಉತ್ತಮ ಸ್ಥಾನದಲ್ಲಿದ್ದರು. ಇದಲ್ಲದೆ, ಸ್ವಾತಂತ್ರ್ಯ ಪೂರ್ವದ ಭಾರತದಲ್ಲಿಯೂ ಸಹ, ಜಾತವರಲ್ಲಿ ವಿದ್ಯಾವಂತ ವರ್ಗವು ಇದ್ದವು. ಇತರ ದಲಿತ ಗುಂಪುಗಳಿಗೆ ಹೋಲಿಸಿದರೆ ಶಿಕ್ಷಣ ಮತ್ತು ಮೀಸಲಾತಿ ಕುರಿತು ರಾಜ್ಯ ನೀತಿಗಳ ಪ್ರಯೋಜನಗಳನ್ನು ಪಡೆಯುವಲ್ಲಿ ಜಾತವರು ಸಿದ್ದವಾಗಿದ್ದರು. ಇದರ ಪರಿಣಾಮವಾಗಿ, ಜಾತವ ಸಮುದಾಯದ ಹಲವಾರು ಯುವಕರು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಲವಾರು ಪರೀಕ್ಷೆಗಳನ್ನು ಬರೆಯಲು ಆರಂಭಿಸಿದರು.

ಮೊದಲ ಮತ್ತು ಎರಡನೆಯ ಮಹಾಯುದ್ಧದ ಸಮಯದಲ್ಲಿ ಚರ್ಮದ ವ್ಯಾಪಾರದಿಂದ ಹಣ ಸಂಪಾದಿಸಿದ ಜಾತವರು, ಜಾತಿ ಆಧಾರಿತ ಗುರುತಿಸುವಿಕೆ, ಹಿಂದುಳಿದ ವರ್ಗ ಹಾಗೂ ಧಾರ್ಮಿಕ ಸಂಘಗಳು ಹಾಗೂ ಇತರ ಸಾಮಾಜಿಕ-ರಾಜಕೀಯ ಚಟುವಟಿಕೆಗಳನ್ನು ಬೆಂಬಲಿಸಿದರು. ಇದೇ ವಿಭಾಗವು ಸ್ವಾಮಿ ಅಚುತಾನಂದ್ ಮತ್ತು ಆದಿ-ಹಿಂದೂ ಚಳವಳಿಯನ್ನು ಬೆಂಬಲಿಸಿತು. ಬಳಿಕ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾವನ್ನು ಬೆಂಬಲಿಸಿತು.

ಒವೈಸಿಗೆ ನಿರಾಶೆ, ಮೈತ್ರಿಗೆ 'ನೋ' ಎಂದ ಮಾಯಾವತಿಒವೈಸಿಗೆ ನಿರಾಶೆ, ಮೈತ್ರಿಗೆ 'ನೋ' ಎಂದ ಮಾಯಾವತಿ

 ಸ್ಥಳೀಯ ನಾಯಕತ್ವದ ಅವಶ್ಯಕತೆ

ಸ್ಥಳೀಯ ನಾಯಕತ್ವದ ಅವಶ್ಯಕತೆ

ಜಾತವ ಕುಲದವರ ರಾಜಕೀಯ ಪ್ರಯಾಣವನ್ನು ರೂಪಿಸಿದ ಮತ್ತೊಂದು ಪ್ರಮುಖ ಐತಿಹಾಸಿಕ ಘಟನೆಯೆಂದರೆ ಉತ್ತರ ಪ್ರದೇಶದ ಹಳ್ಳಿಗಳಲ್ಲಿ ಸ್ವಾತಂತ್ರ್ಯದ ನಂತರ ಪ್ರಾರಂಭವಾದ ನಾರಾ-ಮಾವೇಶಿ ಚಳುವಳಿ. ಜಾತವರು ಹಾಗೂ ಇತರ ಕೆಲವು ದಲಿತ ಗುಂಪುಗಳು ಪ್ರಾಣಿಗಳ ಶವವನ್ನು ತೆಗೆಯಲು ನಿರಾಕರಿಸಿದರು. ಮತ್ತೊಂದು ಜಾತಿ ಆಧಾರಿತ ಉದ್ಯೋಗವಾದ ನವಜಾತ ಶಿಶುಗಳ ಹೊಕ್ಕುಳಬಳ್ಳಿ ಕತ್ತರಿಸುವ ಕಾರ್ಯ ಮಾಡುವುದಿಲ್ಲ ಎಂದು ದಲಿತ ಮಹಿಳೆಯರು ಹೇಳಿದರು. 1950 ಮತ್ತು 1980 ರ ನಡುವೆ ಈ ಚಳುವಳಿ ಉತ್ತರ ಪ್ರದೇಶದಾದ್ಯಂತ ಹರಡಿತು.

ಇದಕ್ಕೆ ಪ್ರತೀಕಾರವಾಗಿ, ಜಾತವರು ವಿವಿಧ ಜಾತಾವೇತರ ಪ್ರಬಲ ಮೇಲ್ಜಾತಿಗಳು ಮತ್ತು ಒಬಿಸಿಗಳ ದಬ್ಬಾಳಿಕೆಗೆ ಒಳಗಾಗಬೇಕಾಯಿತು. ಭಾರತೀಯ ಸಂವಿಧಾನದಲ್ಲಿನ ಪ್ರಗತಿಪರ, ಅಸ್ಪೃಶ್ಯತೆ ವಿರೋಧಿ ಕಾನೂನುಗಳು ಮತ್ತು ಸುಧಾರಣಾ ಪರ ಆಡಳಿತದ ಒಂದು ವಿಭಾಗದ ಸಹಾಯದಿಂದ ಜಾತವರು ದಬ್ಬಾಳಿಕೆಯ ತಂತ್ರಗಳ ವಿರುದ್ದ ಹೋರಾಡಿದರು. ಹಾಗೆಯೇ ಬಳಿಕ ತಮ್ಮ ಆಯ್ಕೆಯ ಉದ್ಯೋಗವನ್ನು ಪಡೆಯುವ ಸ್ವಾತಂತ್ರ್ಯವನ್ನು ಗೆದ್ದರು. ಈ ಪ್ರಕ್ರಿಯೆಯಲ್ಲಿ, ಉತ್ತರ ಪ್ರದೇಶದ ವಿವಿಧ ಹಳ್ಳಿಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಜಾತವ ಕುಲದವರು ನಾಯಕತ್ವವನ್ನು ವಹಿಸಲು ಸಾಧ್ಯವಾದ ಉತ್ತಮ ಬೆಳವಣಿಗೆಯಾಯಿತು.

ಈ ಬಳಿಕ ಕಾನ್ಶಿರಾಮ್ ಉತ್ತರ ಪ್ರದೇಶದಲ್ಲಿ ತನ್ನ ಬಹುಜನ ಪಕ್ಷ ಸ್ಥಾಪನೆ ಮಾಡವ ಚಿಂತನೆ ಆರಂಭಿಸಿದರು. ಈ ವೇಳೆ ಹಳ್ಳಿಗಳಲ್ಲಿನ ಈ ಗ್ರಾಮೀಣ ನಾಯಕರು ರಾಜ್ಯದಲ್ಲಿ ಬಹುಜನ ಚಳವಳಿಯ ನೆಲೆಯನ್ನು ರೂಪಿಸಿದರು.
ಉತ್ತರ ಭಾರತದಲ್ಲಿ ಬಹುಜನ ರಾಜಕೀಯ ಹೇಗೆ ಅಸ್ತಿತ್ವಕ್ಕೆ ಬಂದಿತು ಎಂಬ ಸಂಪೂರ್ಣ ವಿವರವು ಬದ್ರಿ ನಾರಾಯಣರ 'Kanshiram: Bahujanon ke Nayak', ಪುಸ್ತಕದಲ್ಲಿ ಉಲ್ಲೇಖ ಮಾಡಲಾಗಿದೆ.

 ಅಧಿಕಾರ ಹಾಗೂ ಜಾತವರು

ಅಧಿಕಾರ ಹಾಗೂ ಜಾತವರು

ರಾಜ್ಯದ ಅತಿದೊಡ್ಡ ದಲಿತ ಸಮುದಾಯ ಮಾತ್ರವಲ್ಲದೆ ವಿದ್ಯಾವಂತರೂ ಆಗಿರುವ ಉತ್ತರ ಪ್ರದೇಶದ ಜಾತವರ ಮಹತ್ವವನ್ನು ಕಾನ್ಶಿರಾಮ್ ಅರಿತುಕೊಂಡರು. ಸ್ಥಳೀಯ ಮಟ್ಟದ ನಾಯಕತ್ವವನ್ನು ಹೊಂದಿರುವ ಹಾಗೂ ಘನತೆ, ಅಧಿಕಾರ, ರಾಜಕೀಯದಲ್ಲಿ ಪಾಲು ಬಯಸುವ ಈ ಸಮುದಾಯವು ಅತೀ ಮುಖ್ಯ ಎಂಬುದು ಕಾನ್ಶಿರಾಮ್‌ಗೆ ಮನವರಿಕೆಯಾಯಿತು. ''ಉತ್ತರಪ್ರದೇಶದಲ್ಲಿ ಜಾತವರು ಬ್ರಾಹ್ಮಣರ ನಂತರ ಹೆಚ್ಚು ವಿದ್ಯಾವಂತ ಸಮುದಾಯವಾಗಿದ್ದು, ವಿದ್ಯಾವಂತ ಜಾತವ ಯುವಕರು ಬಹುಜನ ಚಳವಳಿಯ ಮುಂದಾಳತ್ವವನ್ನು ವಹಿಸಿಕೊಂಡರು,'' ಎಂದು ಆಗಾಗ್ಗೆ ಕಾನ್ಶಿರಾಮ್ ಹೇಳಿದ್ದಾರೆ.

ಕಾನ್ಶಿರಾಮ್ ನೇತೃತ್ವದ ಬಹುಜನ ಚಳವಳಿಗೂ ಮೊದಲು, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ದಲಿತ ಪ್ರಾಬಲ್ಯದ ರಾಜಕೀಯ ಗುಂಪಾಗಿ ಹೊರಹೊಮ್ಮಿತು. 1960 ಮತ್ತು 1970 ರ ದಶಕಗಳಲ್ಲಿ ಉತ್ತರ ಪ್ರದೇಶದ ಪಶ್ಚಿಮ ಮತ್ತು ಮಧ್ಯ ಭಾಗಗಳಲ್ಲಿ ಹೆಚ್ಚಾಗಿ ಸಕ್ರಿಯವಾಗಿತ್ತು. ಆದರೆ ಅದರ ಚುನಾವಣಾ ನೆಲೆಗೆ ನಿಧಾನವಾಗಿ ಕಾಂಗ್ರೆಸ್ ನುಸುಳಿತು. ಸ್ವಾತಂತ್ರ್ಯಾನಂತರ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಹೊರಹೊಮ್ಮುವವರೆಗೂ, ಜಾತವ ಸಮುದಾಯದ ಹೆಚ್ಚಿನ ಭಾಗವು ಕಾಂಗ್ರೆಸ್ ಜನರಿಗೆ ಬೆಂಬಲಿಸಿತು. ಬಾಬು ಜಗ್‌ಜೀವನ್‌ ರಾಮ್‌ ಉತ್ತರಪ್ರದೇಶದ ಜಾತವರ ಐಕಾನ್ ಎಂದು ಪರಿಗಣಿಸಲಾಗಿತ್ತು. ಆದರೆ ಬಹುಜನ ಸಮಾಜ ಪಕ್ಷವು ಹೊರಹೊಮ್ಮಿದಾಗ, ಜಾತವರು ಅಧಿಕಾರದ ಹೆಚ್ಚಿನ ಪಾಲನ್ನು ಪಡೆದುಕೊಳ್ಳುವ ಸಾಧ್ಯತೆಯನ್ನು ಕಂಡುಕೊಂಡು ಬಿಎಸ್‌ಪಿಯತ್ತ ಮುಖ ಮಾಡಿದರು.

 ಬಿಎಸ್‌ಪಿಯ ಪ್ರಸ್ತುತ ಸ್ಥಿತಿಗತಿ

ಬಿಎಸ್‌ಪಿಯ ಪ್ರಸ್ತುತ ಸ್ಥಿತಿಗತಿ

ಪ್ರಸ್ತುತ ಬಿಎಸ್‌ಪಿ ಈ ಹಿಂದೆ ಹೊಂದಿದ್ದ ರಾಜಕೀಯ ಸ್ಥಾನಮಾನವನ್ನು ಹೊಂದಿಲ್ಲ ಎಂಬುವುದು ನಿಜ. ಆದರೆ ಜಾತವ ಸಮುದಾಯದಲ್ಲಿನ ಬಿಎಸ್‌ಪಿಯ ನೆಲೆಯು ಇನ್ನೂ ಛಿದ್ರಗೊಂಡಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಪ್ರಾರಂಭಿಸಿರುವ ವಿವಿಧ ಕಲ್ಯಾಣ ಮತ್ತು ಬೆಂಬಲ ಯೋಜನೆಗಳಿಂದ ಒಂದು ಸಣ್ಣ ಲಾಭ ಪಡೆದ ವಿದ್ಯಾವಂತ ನಗರ ಮತ್ತು ಗ್ರಾಮೀಣ ಬಡವರ ಒಂದು ಭಾಗವು ಬಿಜೆಪಿಯತ್ತ ಸಾಗಿರಬಹುದು. ಆದರೆ ಬಿಎಸ್‌ಪಿಯ ಭವಿಷ್ಯದ ಬಗ್ಗೆ, ಮಾಯಾವತಿಯ ಬಗ್ಗೆ ಜಾತವರು ಟೀಸುತ್ತಿದ್ದರೂ ಹೆಚ್ಚಿನ ಜಾತವ ಸಮುದಾಯವು ಇನ್ನೂ ಬಿಎಸ್‌ಪಿಯ ಚುನಾವಣಾ ಮಡಿಲಿನಿಂದ ಜಾರಿಲ್ಲ ಎಂಬುವುದು ಸ್ಪಷ್ಟ.

ಕೊರೊನಾದ ಈ ಸಂದರ್ಭದಲ್ಲಿ ಬಿಎಸ್‌ಪಿಗೆ 2022 ರ ಚುನಾವಣೆಗಳು ಮಾಡು ಇಲ್ಲವೇ ಮಡಿ ಎಂಬ ಯುದ್ದವಾಗಿದೆ. ಪಕ್ಷವು ತನ್ನ ಗೆಲುವನ್ನು ಮತ್ತೆ ಸಾಬೀತುಪಡಿಸಲು ವಿಫಲವಾದರೆ, ಮುಂದೆ ಖಂಡಿತವಾಗಿಯೂ ಜಾತವ ಮತಗಳ ವಿಭಜನೆಯಾಗುತ್ತದೆ. ಆದರೆ ಪ್ರಸ್ತುತ ಮಾಯಾವತಿ ನೇತೃತ್ವದ ಬಿಎಸ್‌ಪಿ ತನ್ನ ಅತಿದೊಡ್ಡ ಬೆಂಬಲ ನೆಲೆಯ ಭರವಸೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾದರೆ, 2024 ರಲ್ಲಿ ಹೆಚ್ಚಿನ ಜಾತವರು ಮಾಯಾವತಿಯನ್ನು ಬೆಂಬಲಿಸುವುದು ನಿಶ್ಚಿತ. ಈಗಾಗಲೇ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಯಾವ ಪ್ರಮುಖ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತಿಳಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
UP Next: In BSP, Jatavs Saw an Opportunity to Acquire Power, To know more Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X