ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

23 ಮಕ್ಕಳನ್ನು ಒತ್ತೆಯಾಗಿರಿಸಿಕೊಳ್ಳುವ ಮುಂಚೆ ಕಿಡಿಗೇಡಿ ಅಧ್ಯಾಯ

|
Google Oneindia Kannada News

ಲಕ್ನೋ, ಫೆಬ್ರವರಿ 2: ಉತ್ತರ ಪ್ರದೇಶದಲ್ಲಿ 23 ಮಕ್ಕಳನ್ನು ಒತ್ತೆಯಾಗಿರಿಸಿಕೊಂಡು ಬಳಿಕ ಪೊಲೀಸರ ಗುಂಡಿಗೆ ಬಲಿಯಾದ ವ್ಯಕ್ತಿ ಅಪಹರಣಕ್ಕೆ ಸಂಬಂಧಿಸಿದಂತೆ ಹಲವು ಪುಸ್ತಕಗಳನ್ನು ಓದಿದ್ದ ಎನ್ನುವುದು ಬೆಳಕಿಗೆ ಬಂದಿದೆ.

ಹುಟ್ಟುಹಬ್ಬದ ಪಾರ್ಟಿಗೆಂದು 23 ಮಕ್ಕಳನ್ನು ಕರೆದು ಒತ್ತೆಯಾಗಿರಿಸಿಕೊಂಡಿದ್ದರು.ಸುಭಾಷ್ ಎನ್ನುವಾತ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ. ಮಕ್ಕಳನ್ನು ಒತ್ತೆಯಾಗಿರಿಸಿಕೊಂಡಿದ್ದ ಸುಭಾಷ್‌ನನ್ನು ಪೊಲೀಸರು ಗುಂಡಿಟ್ಟು ಸಾಯಿಸಿದ್ದರು.

ಒಂದು ತಿಂಗಳಿಂದ ಸಂಚು ರೂಪಿಸಿದ್ದ

ಒಂದು ತಿಂಗಳಿಂದ ಸಂಚು ರೂಪಿಸಿದ್ದ

ಉತ್ತರ ಪ್ರದೇಶದ ಫರೂಖಾಬಾದ್‌ನಲ್ಲಿ 23 ಮಕ್ಕಳನ್ನು ಒತ್ತೆಯಾಗಿರಿಸಿಕೊಂಡಿದ್ದ ಸುಭಾಷ್ ಕಳೆದ ಒಂದು ತಿಂಗಳಿನಿಂದ ಸಂಚು ರೂಪಿಸಿದ್ದ. ವ್ಯಕ್ತಿಯ ಮೊಬೈಲ್‌ನ್ನು ವಶಕ್ಕೆ ಪಡೆಯಲಾಗಿದೆ. ಮಕ್ಕಳನ್ನು ಬಿಡಬೇಕೆಂದರೆ 1 ಕೋಟಿ ನೀಡುವಂತೆ ಬೆದರಿಕೆ ಹಾಕಿದ್ದರು.

ಮಕ್ಕಳ ಒತ್ತೆ ಪ್ರಕರಣ: ಆರೋಪಿ ಹೆಂಡತಿಯನ್ನು ಕಲ್ಲು ಹೊಡೆದು ಕೊಂದ ಜನಮಕ್ಕಳ ಒತ್ತೆ ಪ್ರಕರಣ: ಆರೋಪಿ ಹೆಂಡತಿಯನ್ನು ಕಲ್ಲು ಹೊಡೆದು ಕೊಂದ ಜನ

ಅಪಹರಣಕಾರ ಬಾಂಬ್ ತಯಾರಿಸುತ್ತಿದ್ದ

ಅಪಹರಣಕಾರ ಬಾಂಬ್ ತಯಾರಿಸುತ್ತಿದ್ದ

ಆತ ಕೇವಲ ಅಪಹರಣ ಮಾತ್ರವಲ್ಲದೆ ಬಾಂಬ್ ತಯಾರಿಕೆಯ ತಂತ್ರಗಾರಿಕೆಯನ್ನು ಕಲಿಯುತ್ತಿದ್ದ ಎನ್ನುವುದು ಬೆಳಕಿಗೆ ಬಂದಿದೆ.

ರಷ್ಯಾದ ಪ್ರಕರಣವನ್ನು ಓದಿದ್ದ

ರಷ್ಯಾದ ಪ್ರಕರಣವನ್ನು ಓದಿದ್ದ

ರಷ್ಯಾದಲ್ಲಿ 2004ರಲ್ಲಿ ನಡೆದ ಮಕ್ಕಳ ಒತ್ತೆ ಪ್ರಕರಣವನ್ನು ಸಂಪೂರ್ಣವಾಗಿ ಓದಿದ್ದ. 40 ವರ್ಷದ ಸುಭಾಷ್ 10 ವರ್ಷಗಳ ಕಾಲ ಜೈಲಿನಲ್ಲಿದ್ದ . ನಾಲ್ಕು ತಿಂಗಳ ಹಿಂದೆ ದರೋಡೆ ಪ್ರಕರಣದಲ್ಲಿ ಜೈಲು ಸೇರಿದ್ದ. ಆತ ಸಹಾಯಕ್ಕಾಗಿ ಆಯುಧಗಳನ್ನು ಖರೀದಿ ಮಾಡಿದ್ದ.

ಉತ್ತರ ಪ್ರದೇಶ; 20 ಮಕ್ಕಳನ್ನು ಒತ್ತೆಯಾಗಿರಿಸಿಕೊಂಡ ವ್ಯಕ್ತಿಉತ್ತರ ಪ್ರದೇಶ; 20 ಮಕ್ಕಳನ್ನು ಒತ್ತೆಯಾಗಿರಿಸಿಕೊಂಡ ವ್ಯಕ್ತಿ

ಆತನ ಮನೆಯಲ್ಲಿ ಸಿಕ್ಕಿದ್ದೇನು?

ಆತನ ಮನೆಯಲ್ಲಿ ಸಿಕ್ಕಿದ್ದೇನು?

ಮುರಾದಾಬಾದ್‌ನಲ್ಲಿ ಬಾಂಬ್ ಸ್ಕ್ವಾಡ್‌ಗೆ .315 ರೈಫಲ್ ದೊರೆತಿದೆ. ಕಂಟ್ರಿ ಮೇಡ್ ಗನ್, 20 ಸಜೀವ ಗುಂಡುಗಳು, 11 ಖಾಲಿ ಗುಂಡುಗಳು, ಒಂದು ರೈಫಲ್ ರೌಂಡ್, 135 ಬಾಂಬ್‌ಗಳು, ಸಿಲಿಂಡರ್ ಬಾಂಬ್‌ಗಳು, ಬಾಂಬ್ ತಯಾರಿಸಲು ಬೇಕಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಪಹರಣಕಾರನ ಪತ್ನಿ ಸಾವು

ಅಪಹರಣಕಾರನ ಪತ್ನಿ ಸಾವು

ಮಕ್ಕಳನ್ನು ಆತನ ಸೆರೆಯಿಂದ ಬಿಡಿಸಿದ್ದರು. ಆತನ ಹೆಂಡತಿಯನ್ನು ಚೆನ್ನಾಗಿ ಥಳಿಸಿ ಕಲ್ಲಿನಿಂದ ಗಾಯಗೊಳಿಸಿದ್ದರು. ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಆಕೆಯು ಕೂಡ 2001ರಲ್ಲಿ ಹತ್ಯೆಯ ಆರೋಪಿಯಾಗಿದ್ದಳು ಎನ್ನುವ ವಿಚಾರ ತಿಳಿದುಬಂದಿದೆ.

English summary
The man, who had taken 23 children captive at an Uttar Pradesh , had apparently planned it over a month and studied similar cases of hostage crisis, police said on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X