ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದಿಂದ ಐಎಸ್‌ಐಗೆ ಮಾಹಿತಿ; ಎನ್‌ಐಎ ದಾಳಿ

|
Google Oneindia Kannada News

ಲಕ್ನೋ, ಜೂನ್ 29 : ಉತ್ತರ ಪ್ರದೇಶದ ವಿವಿಧ ಪ್ರದೇಶಗಳಲ್ಲಿ ಎನ್‌ಐಎ ದಾಳಿ ನಡೆಸಿದೆ. ಚಂಡೋಲಿಯ ವ್ಯಕ್ತಿಯೊಬ್ಬನಿಗೆ ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕ ಇರುವ ಕುರಿತು ಎನ್‌ಐಎ ತನಿಖೆ ಕೈಗೊಂಡಿದೆ.

ಚಂಡೋಲಿಯ ನಿವಾಸಿ ಮೊಹಮ್ಮದ್‌ ರಶೀದ್‌ಗೆ ಸೇರಿದ ಮನೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಎನ್‌ಐಎ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. 2020ರ ಜನವರಿ 19ರಂದು ದಾಖಲಾಗಿದ್ದ ಎಫ್‌ಐಆರ್‌ ಅನ್ವಯ ತನಿಖೆ ನಡೆದಿದೆ.

12 ಮಂದಿ ಐಎಸ್‌ಐಎಸ್ ಶಂಕಿತ ಉಗ್ರರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್12 ಮಂದಿ ಐಎಸ್‌ಐಎಸ್ ಶಂಕಿತ ಉಗ್ರರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್

ಎಫ್‌ಐಆರ್ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದ ಎನ್‌ಐಎಗೆ ಮೊಹಮ್ಮದ್‌ ರಶೀದ್ ಪಾಕಿಸ್ತಾನದ ಐಎಸ್ಐನಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಜೊತೆ ಸಂಪರ್ಕದಲ್ಲಿ ಇದ್ದ ಮಾಹಿತಿ ಸಿಕ್ಕಿತ್ತು. ಎರಡು ಬಾರಿ ಈತ ಪಾಕಿಸ್ತಾನಕ್ಕೆ ಭೇಟಿ ಕೊಟ್ಟಿದ್ದ.

ಬೆಂಗಳೂರಲ್ಲಿ ಐಎಸ್‌ಐಎಸ್‌ ಶಂಕಿತ ಉಗ್ರನ ಬಂಧನಬೆಂಗಳೂರಲ್ಲಿ ಐಎಸ್‌ಐಎಸ್‌ ಶಂಕಿತ ಉಗ್ರನ ಬಂಧನ

UP Man Connection With ISI NIA Raids On House

ಭಾರತದಲ್ಲಿನ ಕೆಲವು ಸೂಕ್ಷ್ಮ ಮತ್ತು ನಿಷೇಧಿತ ಪ್ರದೇಶದ ಫೋಟೋಗಳನ್ನು ತೆಗೆದು ಮೊಹಮ್ಮದ್ ರಶೀದ್ ಪಾಕಿಸ್ತಾನಕ್ಕೆ ಕಳಿಸಿರುವುದು ಪತ್ತೆಯಾಗಿದೆ. ಆದ್ದರಿಂದ, ಆತನ ಮನೆ, ಸೇರಿದಂತೆ ವಿವಿಧ ಪ್ರದೇಶಗಳ ಮೇಲೆ ದಾಳಿ ನಡೆಸಲಾಗಿದೆ.

ಪುಲ್ವಾಮಾ ದಾಳಿ ಬಗ್ಗೆ ಜೈಷ್ ಉಗ್ರನಿಂದ ಹೊರಬಿತ್ತು ಸ್ಫೋಟಕ ಮಾಹಿತಿಪುಲ್ವಾಮಾ ದಾಳಿ ಬಗ್ಗೆ ಜೈಷ್ ಉಗ್ರನಿಂದ ಹೊರಬಿತ್ತು ಸ್ಫೋಟಕ ಮಾಹಿತಿ

ಭಾರತೀಯ ಯೋಧರ ಸಂಚಾರ, ಪಡೆಗಳ ಜಮಾವಣೆ ಕುರಿತು ಪಾಕಿಸ್ತಾನಕ್ಕೆ ಮಾಹಿತಿ ಕಳಿಸುತ್ತಿದ್ದ. ದಾಳಿಯ ವೇಳೆ ಹಲವು ಮೊಬೈಲ್ ಫೋನ್, ಕೆಲವು ದಾಖಲೆಗಳನ್ನು ಎನ್‌ಐಎ ವಶಕ್ಕೆ ಪಡೆದಿದೆ. ಈ ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಹೇಳಿದೆ.

English summary
National Investigation Agency conducted raids in Chandoli, Uttar Pradesh. NIA probing the case of connection with a Uttar Pradesh based Mohammad Rashid and ISI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X