ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2500 ರೂಪಾಯಿಗೆ ನಕಲಿ ಕೊವಿಡ್ ನೆಗಿಟಿವ್ ಪ್ರಮಾಣ ಪತ್ರ!

|
Google Oneindia Kannada News

ಲಕ್ನೌ, ಜುಲೈ 6: ಕೊರೊನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ವೈದ್ಯರು, ಆಸ್ಪತ್ರೆಗಳು ಪ್ರಯತ್ನ ಮೀರಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಉತ್ತರ ಪ್ರದೇಶದಲ್ಲೊಂದು ಆಸ್ಪತ್ರೆ ಇಂತಹ ಕಷ್ಟ ಸಮಯದಲ್ಲೂ ಹಣಕ್ಕಾಗಿ ನಕಲಿ ವರದಿ ನೀಡುತ್ತಿದೆ.

2500 ರೂಪಾಯಿ ಕೊಟ್ಟರೆ ಕೊರೊನಾ ವೈರಸ್ ನೆಗಿಟಿವ್ ಎಂದು ನಕಲಿ ಪ್ರಮಾಣಪತ್ರ ಅಥವಾ ವರದಿ ನೀಡುವುದಾಗಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಹೇಳುತ್ತಿರುವ ವಿಡಿಯೋ ವೈರಲ್ ಆಗಿತ್ತು.

60 ವಯಸ್ಸಿಗಿಂತ ಮೇಲ್ಪಟ್ಟ ಹಿರಿಯರಿಗೆ ಹೋಂ ಐಸೋಲೇಷನ್60 ವಯಸ್ಸಿಗಿಂತ ಮೇಲ್ಪಟ್ಟ ಹಿರಿಯರಿಗೆ ಹೋಂ ಐಸೋಲೇಷನ್

ಈ ವಿಡಿಯೋ ಹೆಚ್ಚು ಸುದ್ದಿಯಾದ ಬಳಿಕ ಆ ಆಸ್ಪತ್ರೆಯ ಪರವಾನಗಿಯನ್ನು ರದ್ದು ಮಾಡಲಾಗಿದೆ. ಮೀರತ್‌ನಲ್ಲಿ ಈ ಘಟನೆ ನಡೆದಿದ್ದು, ಜಿಲ್ಲಾಧಿಕಾರಿ ಈ ಕುರಿತು ಸ್ಪಷ್ಟನೆ ಸಹ ನೀಡಿದ್ದಾರೆ.

Up Hospital Offers Coronavirus Negitive Certificate For 2500 Rs

"ಮೀರತ್‌ನಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಈ ನಿಟ್ಟಿನಲ್ಲಿ ನಾವು ಪ್ರಕರಣ ದಾಖಲಿಸಿದ್ದೇವೆ. ನಾವು ನರ್ಸಿಂಗ್ ಹೋಂನ ಪರವಾನಗಿಯನ್ನು ಅಮಾನತುಗೊಳಿಸಿದ್ದೇವೆ. ಇಂದು, ನಾವು ಅದನ್ನು ಮೊಹರು ಮಾಡಿದ್ದೇವೆ. ಈ ಬಿಕ್ಕಟ್ಟಿನ ಸಮಯದಲ್ಲಿ ಈ ರೀತಿ ಏನಾದರೂ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು "ಎಂದು ಜಿಲ್ಲಾಧಿಕಾರಿ ಅನಿಲ್ ಧಿಂಗ್ರಾ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ನಿನ್ನೆ 1153 ಜನರಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 27,707ಕ್ಕೆ ಏರಿಕೆಯಾಗಿದೆ.

English summary
One of the UP Hospital offers coronavirus Negitive certificate For 2500 rupees. after reported licence has suspended.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X