• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತರ ಪ್ರದೇಶದಲ್ಲಿ 24*7 ಮಹಿಳಾ ಸುರಕ್ಷತೆಗೆ "ಪಿಂಕ್ ಪ್ಯಾಟ್ರೋಲ್"

|

ಲಕ್ನೋ, ಅಕ್ಟೋಬರ್.19: ಹತ್ರಾಸ್ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರವು ಎಚ್ಚೆತ್ತುಕೊಂಡಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣ ಸಂಖ್ಯೆಯನ್ನು ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹೊಸ ಪೊಲೀಸ್ ತಂಡವೊಂದನ್ನು ರಚಿಸಿದೆ.

ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರವು "ಮಿಷನ್ ಶಕ್ತಿ" ಆಂದೋಲನವನ್ನು ಆರಂಭಿಸಿದೆ. ಇದರ ಅಂಗವಾಗಿ "ಪಿಂಕ್ ಪ್ಯಾಟ್ರೋಲ್" ಎಂಬ ವಿಶೇಷ ತಂಡವು ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ದಿನದ 24 ಗಂಟೆಗಳ ಕಾಲ ಗಸ್ತು ತಿರುಗಲಿದೆ.

ಗಾಯಕಿಯ ಅತ್ಯಾಚಾರ: ಶಾಸಕ ಮತ್ತು ಮಗನ ವಿರುದ್ಧ ಪ್ರಕರಣ

ಉತ್ತರ ಪ್ರದೇಶದಲ್ಲಿ ಕಠಿಣ ತರಬೇತಿ ಬಳಿಕ 250 ಮಹಿಳಾ ಪೊಲೀಸರನ್ನೊಳಗೊಂಡ "ಪಿಂಕ್ ಪ್ಯಾಟ್ರೋಲ್" ತಂಡವನ್ನು ರಚಿಸಲಾಗಿದೆ. ಉತ್ತರ ಪ್ರದೇಶದ ಕಾನ್ಪುರ್, ಆಗ್ರಾ, ಗೋರಖ್ ಪುರ್, ವಾರಣಾಸಿ, ಪ್ರಯಾಗ್ ರಾಜ್, ಮೀರತ್, ನೋಯ್ಡಾ, ಘಜಿಯಾಬಾದ್ ಮತ್ತು ಮೊರದಾಬಾದ್ ಜಿಲ್ಲೆಗಳಲ್ಲಿ "ಪಿಂಕ್ ಪ್ಯಾಟ್ರೋಲ್" ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಪಿಂಕ್ ಪ್ಯಾಟ್ರೋಲ್ ಸಿಬ್ಬಂದಿ ವಾಹನ:

ಮೊದಲ ಹಂತದಲ್ಲಿ ಪಿಂಕ್ ಪೆಟ್ರೋಲ್ ಸಿಬ್ಬಂದಿಗಾಗಿ 100 ಸ್ಕೂಟಿ ಮತ್ತು 10 ಎಸ್ ಯುವಿ ವಾಹನಗಳನ್ನು ನೀಡಲಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತಾ ಪ್ರಕರಣಗಳಿಗೆ ಸಂಬಂಧಿಸಿದಂತೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಈ ವಿಶೇಷ ತಂಡವನ್ನು ರಚಿಸಲಾಗಿದೆ. ಮಹಿಳೆಯರು, ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ನೆರೆಯುವ ಕಾಲೇಜು, ಮಾರುಕಟ್ಟೆ ಸೇರಿದಂತೆ ಹೆಚ್ಚಿನ ಜನದಟ್ಟಣೆ ಇರುವಂತಾ ಪ್ರದೇಶಗಳಲ್ಲಿ ಆರಂಭಿಕ ಹಂತದಲ್ಲಿ ಈ ಪೊಲೀಸ್ ವಿಶೇಷ ಪಡೆಯನ್ನು ನಿಯೋಜಿಸಲಾಗುತ್ತದೆ. ಅಲ್ಲದೇ, ಮಹಿಳೆಯರ ದೂರುಗಳು ಮತ್ತು ಸಲಹೆಗಳ ಆಧಾರದ ಮೇಲೆ ವಿಶೇಷ ಪಡೆಯು ಗಸ್ತು ತಿರುಗುತ್ತದೆ.

ಮಹಿಳೆಯರ ಸುರಕ್ಷತೆಗೆ ಸಹಾಯವಾಣಿ:

ಉತ್ತರ ಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆಗೆ 1090 ಮತ್ತು 112 ಸಹಾಯವಾಣಿಯನ್ನು ತೆರೆಯಲಾಗಿದೆ. ದಿನದ 24 ಗಂಟೆಗಳಲ್ಲಿ ಯಾವುದೇ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಮಹಿಳೆಯರು ಈ ಸಂಖ್ಯೆಗೆ ಕರೆ ಮಾಡಬಹುದು. ತಕ್ಷಣ ವಿಶೇಷ ಪಡೆಯು ಸ್ಥಳಕ್ಕೆ ಹಾಜರಾಗುತ್ತದೆ. ಅಗತ್ಯವಿದ್ದಲ್ಲಿ ಹೆಚ್ಚುವರಿ ಪೊಲೀಸರು ಕೂಡಾ ನಿಮ್ಮ ನೆರವಿಗೆ ಬರಲಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರವು ತಿಳಿಸಿದೆ.

English summary
Uttar Pradesh Govt Sets Up 24*7 ‘Pink Patrol’ Team For Women Safety And Security At State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X