ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆಯ ಮರ್ಯಾದಾ ಪುರುಷೋತ್ತಮ ಶ್ರೀರಾಮ ವಿಮಾನ ನಿಲ್ದಾಣಕ್ಕೆ 101 ಕೋಟಿ ರೂ ಮೀಸಲು

|
Google Oneindia Kannada News

ಅಯೋಧ್ಯೆ,ಫೆಬ್ರವರಿ 22: ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಮರ್ಯಾದಾ ಪುರುಷೋತ್ತಮ ವಿಮಾನ ನಿಲ್ದಾಣಕ್ಕೆ ಬಜೆಟ್‌ನಲ್ಲಿ ಉತ್ತರ ಪ್ರದೇಶ ಸರ್ಕಾರವು 101 ಕೋಟಿ ರೂ. ಮೀಸಲಿರಿಸಿದೆ.

ವಿಶೇಷ ಪ್ರದೇಶ ಕಾರ್ಯಕ್ರಮದಡಿಯಲ್ಲಿ ಪುರ್ವಾಂಚಲದ ವಿಶೇಷ ಯೋಜನೆಗಳಿಗಾಗಿ 300 ಕೋಟಿಯನ್ನು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ.

ಹೊಸ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮಾಡಲಾಗುತ್ತಿದ್ದು, ಜಿವಾರು ವಿಮಾನ ನಿಲ್ದಾಣದಲ್ಲಿ ವಾಯುನೆಲೆಗಳ ಸಂಖ್ಯೆಯಲ್ಲಿ 2ರಿಂದ 6ಕ್ಕೆ ಹೆಚ್ಚಿಸಲು 2 ಸಾವಿರ ಕೋಟಿ ರೂಪಾಯಿಯನ್ನು ನೀಡಲಾಗುತ್ತಿದೆ.

airport

ಅಲಿಗಢ, ಮೊರಾದಾಬಾದ್, ಮೀರತ್ ನಂತಹ ನಗರಗಳನ್ನು ಶೀಘ್ರದಲ್ಲಿಯೇ ವಿಮಾನ ಸೇವೆಗೆ ಸೇರಿಸಲಾಗುವುದು ಎಂದು ಬಜೆಟ್ ಮಂಡನೆ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸುದ್ದಿಗಾರರಿಗೆ ತಿಳಿಸಿದರು.

ಅಯೋಧ್ಯೆ ಏರ್‌ಪೋರ್ಟ್‌ಗೆ ಶ್ರೀರಾಮನ ಹೆಸರಿಡಲು ಮುಂದಾಗಿದ್ದಾರೆ. ವಿಮಾನ ನಿಲ್ದಾಣಕ್ಕೆ 101 ಕೋಟಿ ರೂ ಮೀಸಲಿಡಲು ಯೋಗಿ ಆದಿತ್ಯನಾಥ್ ನಿರ್ಧರಿಸಿದ್ದಾರೆ.

ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ ಪೇಪರ್ ರಹಿತ ಬಜೆಟ್ ಮಂಡನೆ ಮಾಡಲಾಗಿದೆ. ಹಸಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಅವರು 27,598.40 ಕೋಟಿ ರೂಪಾಯಿಯ ಬಜೆಟ್ ಮಂಡಿಸಿದ್ದಾರೆ.ಪ್ರಧಾನಿ ಮೋದಿಯವರು ಆತ್ಮನಿರ್ಭರ ಭಾರತಕ್ಕೆ ಪೂರಕವಾಗಿ ಬಜೆಟ್ ಮಂಡಿಸಿರುವುದಾಗಿ ಹೇಳಲಾಗಿದೆ.

ಪ್ರತಿ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು,ನೀರು ಪೂರೈಕೆ, ರಸ್ತೆ ಅಭಿವೃದ್ಧಿ ಸೇರಿ ನೇಕ ಕ್ಷೇತ್ರ್ಗಳಿಗೆ ಹೆಚ್ಚಿನ ಒತ್ತು ನೀಡುವ ಬಜೆಟ್ ಇದಾಗಿದೆ. ಸಬ್ ಕಾ ಸಾಥ್ ಸಬ್‌ ಕಾ ವಿಕಾಸ್ ಹೆಸರಿಗೆ ಸೂಕ್ತವಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಹೇಳಿದ್ದಾರೆ.

English summary
The under construction airport in Ayodhya will be named Maryada Purushottam Sriram Airport, Ayodhya after Lord Ram and a provision of Rs 101 crore has been made for it in the budget presented in the Uttar Pradesh Assembly on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X