ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಕಾಸ್ ದುಬೆ ಬಗ್ಗೆ ಸುಳಿವು ಕೊಟ್ಟರೆ 2.5 ಲಕ್ಷ ಬಹುಮಾನ!

|
Google Oneindia Kannada News

ನವದೆಹಲಿ, ಜುಲೈ 06 : ಉತ್ತರ ಪ್ರದೇಶ ಸರ್ಕಾರ ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆಗೆ ಬಗ್ಗೆ ಸುಳಿವು ಕೊಟ್ಟರೆ 2.5 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ. 8 ಪೊಲೀಸ್ ಸಿಬ್ಬಂದಿಗಳನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ವಿಕಾಸ್ ದುಬೆ ಪ್ರಮುಖ ಆರೋಪಿ.

Recommended Video

Bubonic Plague Says Hello China:ಚೀನಾದಲ್ಲಿ 'ಬುಬೊನಿಕ್ ಪ್ಲೇಗ್' ಮಾರಣಾಂತಿಕ ರೋಗ ಪತ್ತೆ| Oneindia Kannada

ಉತ್ತರ ಪ್ರದೇಶ ಪೊಲೀಸರು ಭಾನುವಾರ 1 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದರು. ಸೋಮವಾರ ಇದನ್ನು 2.5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ವಿಕಾಸ್ ದುಬೆಗಾಗಿ ಪೊಲೀಸರು ಸಹ ಹುಡುಕಾಟ ಮುಂದುವರೆಸಿದ್ದಾರೆ.

ಬಂಧನದ ಬಗ್ಗೆ ಪೊಲೀಸರಿಂದಲೇ ಮಾಹಿತಿ ತಿಳಿದಿದ್ದ ವಿಕಾಸ್ ದುಬೆ! ಬಂಧನದ ಬಗ್ಗೆ ಪೊಲೀಸರಿಂದಲೇ ಮಾಹಿತಿ ತಿಳಿದಿದ್ದ ವಿಕಾಸ್ ದುಬೆ!

ವಿಕಾಸ್ ದುಬೆ ಹೊರತುಪಡಿಸಿ 8 ಪೊಲೀಸರನ್ನು ಹತ್ಯೆ ಮಾಡಿದ ಪ್ರಕರಣದ ಎಫ್‌ಐಆರ್‌ನಲ್ಲಿ ಇರುವ ವ್ಯಕ್ತಿಗಳ ಕುರಿತು ಮಾಹಿತಿ ನೀಡಿದರೆ 20 ಸಾವಿರ ಬಹುಮಾನ ನೀಡುವುದಾಗಿ ಪೊಲೀಸರು ಹೇಳಿದ್ದಾರೆ. ಕಾನ್ಪುರ ಪೊಲೀಸರು ಭಾನುವಾರ ದುಬೆ ಸಹಚರ ದಯಾಶಂಕರ್ ಅಗ್ನಿಹೋತ್ರಿಯನ್ನು ಬಂಧಿಸಿದ್ದಾರೆ.

ಉತ್ತರ ಪ್ರದೇಶವನ್ನು ಬೆಚ್ಚಿ ಬೀಳಿಸಿದ ರೌಡಿ ವಿಕಾಸ್ ದುಬೆ ಯಾರು? ಉತ್ತರ ಪ್ರದೇಶವನ್ನು ಬೆಚ್ಚಿ ಬೀಳಿಸಿದ ರೌಡಿ ವಿಕಾಸ್ ದುಬೆ ಯಾರು?

UP Govt Announces Rs 2.5 Lakh Reward For Tracing Vikas Dubey

ಗುರುವಾರ ರಾತ್ರಿ ಡಿವೈಎಸ್‌ಪಿ ದೇವೇಂದ್ರ ಮಿಶ್ರಾ ಸೇರಿದಂತೆ ಮೂರು ಪೊಲೀಸ್ ಠಾಣೆಗಳ ಸಿಬ್ಬಂದಿ ವಿಕಾಸ್ ದುಬೆ ಬಂಧಿಸಲು ಹೋಗಿದ್ದರು. ಆಗ ಕಟ್ಟಡದ ಮೇಲಿನಿಂದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. 8 ಪೊಲೀಸರು ಮೃತಪಟ್ಟಿದ್ದರು.

8 ಪೊಲೀಸರನ್ನು ಹತ್ಯೆಗೈದ ರೌಡಿ ಶೀಟರ್ ವಿಕಾಸ್ ದುಬೆ ಮನೆ ನೆಲಸಮ 8 ಪೊಲೀಸರನ್ನು ಹತ್ಯೆಗೈದ ರೌಡಿ ಶೀಟರ್ ವಿಕಾಸ್ ದುಬೆ ಮನೆ ನೆಲಸಮ

ಉತ್ತರ ಪ್ರದೇಶ ಪೊಲೀಸರು ವಿಕಾಸ್ ದುಬೆ ಬಂಧಿಸಲು ಪ್ರಯತ್ನ ನಡೆಸಿದ್ದಾರೆ. ಹುಟ್ಟೂರಿನಲ್ಲಿದ್ದ ವಿಕಾಸ್ ದುಬೆ ಮನೆಯನ್ನು ಜಿಲ್ಲಾಡಳಿತ ನೆಲಸಮ ಮಾಡಿದೆ. ಆತನಿಗೆ ಸೇರಿದ ಐಷಾರಾಮಿ ಕಾರುಗಳನ್ನು ಸಹ ಜಖಂಗೊಳಿಸಲಾಗಿದೆ.

60ಕ್ಕೂ ಅಧಿಕ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿರುವ ವಿಕಾಸ್ ದುಬೆ ಉತ್ತರ ಪ್ರದೇಶದ ಕುಖ್ಯಾತ ರೌಡಿ ಶೀಟರ್. ಗುರುವಾರ ರಾತ್ರಿ ನಡೆದ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

English summary
Uttar Pradesh government increased the reward on the head of history sheeter Vikas Dubey to Rs 2.5 lakhs. He is the main accused in the case of killing 8 police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X