ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾನೂನು ಬಾಹಿರ ಮತಾಂತರ ನಿಷೇಧ ಸುಗ್ರೀವಾಜ್ಞೆ: ಉ.ಪ್ರದೇಶ ರಾಜ್ಯಪಾಲರ ಅಂಕಿತ

|
Google Oneindia Kannada News

ಲಕ್ನೋ,ನವೆಂಬರ್ 28: ಕಾನೂನು ಬಾಹಿರ ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಒಪ್ಪಿಗೆ ನೀಡಿದ್ದಾರೆ.

ಯುಪಿ ಕಾನೂನುಬಾಹಿರ ಧಾರ್ಮಿಕ ಮತಾಂತರದ ನಿಷೇಧ 2020"ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ.

ವಿವಾಹಕ್ಕಾಗಿ ಬಲವಂತದ ಧಾರ್ಮಿಕ ಮತಾಂತರವನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕಾನೂನು ರೂಪಿಸುಲು ಉತ್ತರ ಪ್ರದೇಶ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಲು ಮಂಗಳವಾರ ಒಪ್ಪಿಗೆ ಸೂಚಿಸಿತ್ತು.

ಲವ್ ಜಿಹಾದ್: ಕಾನೂನು ರಚನೆಗೆ ಉ.ಪ್ರದೇಶ ಗೃಹ ಸಚಿವಾಲಯದಿಂದ ಪ್ರಸ್ತಾವನೆ ಲವ್ ಜಿಹಾದ್: ಕಾನೂನು ರಚನೆಗೆ ಉ.ಪ್ರದೇಶ ಗೃಹ ಸಚಿವಾಲಯದಿಂದ ಪ್ರಸ್ತಾವನೆ

ಈ ಮೂಲಕ ಉತ್ತರ ಪ್ರದೇಶದಲ್ಲಿ ಇನ್ನು ಮುಂದೆ "ಲವ್ ಜಿಹಾದ್" ಸೇರಿದಂತೆ ಬಲವಂತದ ಮತಾಂತರವು ಕಾನೂನುಬಾಹಿರ, ಶಿಕ್ಷಾರ್ಹ ಅಪರಾಧ ಎನಿಸಲಿದೆ.

UP Governor Promulgates Prohibition Of Unlawful Conversion Of Religion Ordinance

ಬಲವಂತವಾಗಿ ಮತಾಂತರ ಅಥವಾ ಮದುವೆ ಉದ್ದೇಶದಿಂದ ಮತಾಂತರ ಮಾಡುವ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ರಚನೆ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ತನ್ನ ಹೆಸರನ್ನು ಮರೆಮಾಚುವ ಮೂಲಕ ಮದುವೆಯಾದ ವ್ಯಕ್ತಿಗೆ 10ವರ್ಷ ಜೈಲು ಶಿಕ್ಷೆ ವಿಧಿಸಲು ಈ ಸುಗ್ರೀವಾಜ್ಞೆ ಅವಕಾಶ ನೀಡುತ್ತದೆ. ಇದಲ್ಲದೆ ಅಕ್ರಮ ಮತಾಂತರಕ್ಕೆ ಒಂದರಿಂದ 10 ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗುತ್ತದೆ.

ಅಲ್ಲದೆ 15 ಸಾವಿರದವರೆಗೆ ದಂಡವನ್ನು ಸಹ ವಿಧಿಸಲಾಗುತ್ತದೆ. ಇದಲ್ಲದೆ ಕಾನೂನು ಬಾಹಿರ ರೀತಿಯಲ್ಲಿ ಧರ್ಮಕ್ಕೆ ಮತಾಂತರಗೊಂಡರೆ 10 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದು 50 ಸಾವಿರದವರೆಗೂ ದಂಡ ವಿಧಿಸಲಾಗುತ್ತದೆ.

English summary
he Uttar Pradesh Governor has promulgated UP Prohibition of Unlawful Conversion of Religion Ordinance 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X