ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್‌ ನಡುವೆ ಜನಜಂಗುಳಿ ಕ್ರಿಯೇಟ್ ಮಾಡಿದ ಯುಪಿ ಸರ್ಕಾರ!

|
Google Oneindia Kannada News

ಲಕ್ನೋ, ಮಾರ್ಚ್ 28: ದೇಶದಲ್ಲಿ ಕೊರೊನಾ ಭಯದಿಂದ ಸಂಪೂರ್ಣ ಲಾಕ್‌ಡೌನ್ ಆಚರಣೆಯಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಉತ್ತರ ಪ್ರದೇಶ ಸರ್ಕಾರ ಎಡವಟ್ಟನ್ನು ಮಾಡಿರುವುದು ವೈರಲ್ ಆಗಿದೆ.

ದೆಹಲಿ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳಲ್ಲಿಗೆ ಉತ್ತರ ಪ್ರದೇಶದಲ್ಲಿನ ಕಾರ್ಮಿಕರನ್ನು ಅವರವರ ಮೂಲ ಸ್ಥಳಗಳಿಗೆ ತಲುಪಿಸಲು ಉತ್ತರ ಪ್ರದೇಶ ಸರ್ಕಾರ ಬಸ್‌ಗಳ ವ್ಯವಸ್ಥೆ ಮಾಡಿದ್ದು, ಲಾಕ್‌ಡೌನ್ ಆಚರಣೆಯನ್ನು ಅಣುಕಿಸುವಂತೆ ಮಾಡಿದೆ.

ಮೂರನೇ ಹಂತ ತಲುಪುತ್ತಿದೆ ಕೊರೊನಾ; ಆಸ್ಪತ್ರೆ ಆದವು ರೈಲ್ವೆ ಬೋಗಿ!ಮೂರನೇ ಹಂತ ತಲುಪುತ್ತಿದೆ ಕೊರೊನಾ; ಆಸ್ಪತ್ರೆ ಆದವು ರೈಲ್ವೆ ಬೋಗಿ!

ವಲಸಿಗರನ್ನು ಅವರವರ ಊರುಗಳಿಗೆ ತಲುಪಿಸಲು 1000 ಕ್ಕೂ ಹೆಚ್ಚು ಬಸ್‌ಗಳನ್ನು ನಿಯೋಜಿಸಿದೆ. ಅಕ್ಕ-ಪಕ್ಕದ ರಾಜ್ಯಗಳಿಗೆ ವಲಸೆ ಹೋಗಿರುವ ಕಾರ್ಮಿಕರು ಊರು ಸೇರಲಾರದೆ ಗಡಿ ಭಾಗಗಳಲ್ಲಿ ಸಿಲುಕಿದ್ದು, ಅವರು ರಾಜ್ಯಕ್ಕೆ ಮರಳಲು ಅನುವಾಗುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರ ಬಸ್‌ಗಳನ್ನು ಕಳುಹಿಸಿಕೊಟ್ಟಿದೆ. ಇದರಿಂದ ಉತ್ತರ ಪ್ರದೇಶದ ಅನೇಕ ಪ್ರಮುಖ ನಗರಗಳ ಬಸ್‌ ನಿಲ್ದಾಣಗಳಲ್ಲಿ ಜನಜಂಗುಳಿ ನಿರ್ಮಾಣವಾಗಿತ್ತು.

UP Government Sets Government Transport For Migrants People

ಕೊರೊನಾ ಲಾಕ್‌ಡೌನ್‌ ಪರಿಣಾಮ ನೆರೆ ರಾಜ್ಯಗಳಿಂದ ವಲಸೆ ಬಂದಿದ್ದ ಕಾರ್ಮಿಕರೆಲ್ಲರೂ ಉತ್ತರ ಪ್ರದೇಶದಲ್ಲೇ ಸಿಲುಕಿಕೊಂಡಿದ್ದರು. ಕೆಲಸವೂ ಇಲ್ಲದೆ, ಊಟವೂ ಇಲ್ಲದ ಪರಿಸ್ಥಿತಿಯಲ್ಲಿ ಈ ಕಾರ್ಮಿಕರು ನಡೆದೇ ತಮ್ಮ ತಮ್ಮ ಊರುಗಳಿಗೆ ನಡೆದುಕೊಂಡೇ ತೆರಳಿದ್ದರು. ಇದೀಗ ಸರಕಾರವೇ ಅವರನ್ನು ಊರುಗಳಿಗೆ ತಲುಪಿಸಲು ಮುಂದಾಗಿದೆ.

ನೋಯ್ಡಾ, ಘಾಜಿಯಾಬಾದ್‌, ಬುಲಂದ್‌ಷಹರ್‌, ಅಲಿಗಢ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅತಂತ್ರರಾಗಿರುವ ಕಾರ್ಮಿಕರನ್ನು ರಾಜ್ಯಕ್ಕೆ ಕರೆ ತರಲು ಸಾರಿಗೆ ಇಲಾಖೆಯ ಅಧಿಕಾರಿಗಳು, ಬಸ್‌ ಚಾಲಕರು ಹಾಗೂ ನಿರ್ವಾಹಕರನ್ನು ಶುಕ್ರವಾರ ರಾತ್ರಿ ಸಂಪರ್ಕಿಸಿದ್ದಾರೆ.

English summary
UP Government Sets Government Transport For Migrants People. this is vailation of corona lockdown. photos viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X