ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ ಸರ್ಕಾರದ ಟ್ವಿಟರ್ ಹ್ಯಾಕ್: 30ಕ್ಕೂ ಹೆಚ್ಚು ನಕಲಿ ಟ್ವೀಟ್, ಡಿಪಿ ಚೇಂಜ್

|
Google Oneindia Kannada News

ಲಕ್ನೋ ಏಪ್ರಿಲ್ 11: ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಯ ಟ್ವಿಟರ್ ಖಾತೆ ಹ್ಯಾಕ್ ಆದ ಮೂರು ದಿನಗಳ ನಂತರ ಇದೀಗ ಯುಪಿ ಸರ್ಕಾರದ ಅಧಿಕೃತ ಟ್ವಿಟರ್ ಹ್ಯಾಂಡಲ್ ಕೂಡ ಹ್ಯಾಕ್ ಆಗಿದೆ. ಹ್ಯಾಕ್ ಆದ ಕೆಲವೇ ಸಮಯದಲ್ಲಿ 30 ಕ್ಕೂ ಹೆಚ್ಚು ನಕಲಿ ಟ್ವೀಟ್‌ಗಳನ್ನು ಸಹ ಮಾಡಲಾಗಿದೆ. ಹ್ಯಾಕರ್‌ಗಳು ಟ್ವಿಟರ್ ಖಾತೆಯ ಡಿಪಿಯನ್ನು ಕಾರ್ಟೂನ್‌ಗೆ ಬದಲಾಯಿಸಿದ್ದಾರೆ. ಜೊತೆಗೆ ಖಾತೆಯನ್ನೂ ಮರುಸ್ಥಾಪಿಸಲಾಗಿದೆ. ಸಿಎಂ ಕಚೇರಿ ಬಳಿಕ ಇದೀಗ ಯುಪಿ ಸರ್ಕಾರದ ಟ್ವಿಟರ್ ಖಾತೆ ಹ್ಯಾಕ್ ಆಗಿರುವ ಕಾರಣ ಅಧಿಕಾರಿಗಳಲ್ಲಿ ಸಂಚಲನ ಮೂಡಿದೆ.

ಸಿಎಂ ಕಚೇರಿಯ ಟ್ವಿಟರ್ ಖಾತೆ ಹ್ಯಾಕಿಂಗ್ ಪ್ರಕರಣದ ತನಿಖೆ ನಡೆಯುತ್ತಲೇ ಇದ್ದು, ಇದರ ಹಿಂದೆ ಯಾರಿದ್ದಾರೆನ್ನುವ ಬಗ್ಗೆ ಪತ್ತೆ ಕಾರ್ಯ ನಡೆಯುತ್ತದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಚೇರಿ @CMOfficeUP ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಶನಿವಾರ ರಾತ್ರಿ 12.43 ಕ್ಕೆ ಹ್ಯಾಕ್ ಮಾಡಲಾಗಿತ್ತು. ಹ್ಯಾಕರ್ ಸುಮಾರು 15 ನಿಮಿಷಗಳಲ್ಲಿ 500 ಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಿದ್ದಾರೆ. ಅಲ್ಲದೇ ಸುಮಾರು 5 ಸಾವಿರ ಜನರನ್ನು ಟ್ಯಾಗ್ ಮಾಡಿದ್ದಾರೆ.

ಹ್ಯಾಕಿಂಗ್ ನಂತರ, CMO ನ ಟ್ವಿಟರ್ ಹ್ಯಾಂಡಲ್‌ನ ಸ್ಕ್ರೀನ್‌ಶಾಟ್‌ಗಳನ್ನು ಹಲವಾರು ವೆಬ್‌ಸೈಟ್‌ಗಳು ಹಂಚಿಕೊಂಡವು. ಮಾಹಿತಿ ಬಂದ ತಕ್ಷಣ ಸಿಎಂ ಕಚೇರಿಯ ಸಾಮಾಜಿಕ ಜಾಲತಾಣ ತಂಡ ಸಕ್ರಿಯಗೊಂಡು ರಾತ್ರಿ ಒಂದು ಗಂಟೆ ಸುಮಾರಿಗೆ ಮತ್ತೊಮ್ಮೆ ಈ ಹ್ಯಾಂಡಲ್ ಅನ್ನು ಮರುಸ್ಥಾಪಿಸಿತು.

UP government official Twitter handle hacked

ಸೈಬರ್ ತಜ್ಞರು ಇಡೀ ವಿಷಯವನ್ನು ತನಿಖೆ ನಡೆಸುತ್ತಿದ್ದಾರೆ ಎಂದು ಯುಪಿ ಸರ್ಕಾರ ಹೇಳಿಕೆ ನೀಡಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಐಟಿ ಕಾಯ್ದೆಯಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಡಿಜಿಪಿ ಕಚೇರಿಯ ಸೈಬರ್ ತಂಡ ಇಡೀ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಹೇಳಿದೆ.

UP government official Twitter handle hacked

ಯುಪಿ ಸಿಎಂ ಕಚೇರಿಯ ಟ್ವಿಟರ್ ಹ್ಯಾಂಡಲ್‌ನಿಂದ ಹ್ಯಾಕರ್, 'ಟ್ವಿಟರ್‌ನಲ್ಲಿ ನಿಮ್ಮ BAYC/MAYC ಅನಿಮೇಟೆಡ್ ಅನ್ನು ಹೇಗೆ ತಿರುಗಿಸುವುದು' ಎಂಬ ಟ್ಯುಟೋರಿಯಲ್ ಅನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಪ್ರೊಫೈಲ್ ಚಿತ್ರವನ್ನು ಸಹ ಬದಲಾಯಿಸಿದ್ದಾರೆ. ಹ್ಯಾಕರ್‌ಗಳು ಪೋಸ್ಟ್ ಮಾಡಿದ ಪ್ರೊಫೈಲ್ ಚಿತ್ರವು ಬೋರ್ಡ್ ಏಪ್ ಯಾಚ್ ಕ್ಲಬ್ ಎನ್‌ಎಫ್‌ಟಿಯನ್ನು ಹೋಲುತ್ತದೆ. ಯುಪಿ ಮುಖ್ಯಮಂತ್ರಿ ಕಚೇರಿಯ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದ 30 ನಿಮಿಷಗಳ ನಂತರ ಮರುಪಡೆಯಲಾಗಿದೆ.

UP government official Twitter handle hacked

UP CMO (@CMOfficeUP) Twitter ಖಾತೆಯು ನಾಲ್ಕು ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ. ಕಳೆದ ಎರಡು ದಿನಗಳಲ್ಲಿ ಐಎಂಡಿ (ಭಾರತೀಯ ಹವಾಮಾನ ಇಲಾಖೆ) ಮತ್ತು ಯುಜಿಸಿ (ವಿಶ್ವವಿದ್ಯಾಲಯ ಅನುದಾನ ಆಯೋಗ) ಖಾತೆಗಳನ್ನೂ ಹ್ಯಾಕ್ ಮಾಡಲಾಗಿದೆ.UGC ಖಾತೆಯು 2,96,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದರೆ, IMD ಖಾತೆಯು 246,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ.

UP government official Twitter handle hacked

ಈ ಖಾತೆಗಳನ್ನು ಯಾರು ಹ್ಯಾಕ್ ಮಾಡಿದ್ದಾರೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಮಾತ್ರವಲ್ಲದೇ ಪಂಜಾಬ್ ಕಾಂಗ್ರೆಸ್ ಟ್ವಿಟ್ಟರ್ ಖಾತೆಯು ಕೂಡ ಒಂದು ಗಂಟೆಗೂ ಹೆಚ್ಚು ಕಾಲ ಹ್ಯಾಕ್ ಮಾಡಲಾಗಿತ್ತು ಎನ್ನಲಾಗಿದೆ.

English summary
Three days after the Uttar Pradesh Chief Minister's Twitter account was hacked, the UP government's official Twitter handle is also hacked. Over 30 fake tweets were also made shortly after the hack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X