ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ: ಶೌಚಾಲಯದೊಳಗೆ ಆಟಗಾರರಿಗೆ ಆಹಾರ ವಿತರಣೆ: ವಿಡಿಯೋ ವೈರಲ್

|
Google Oneindia Kannada News

ಸಹರಾನ್ಪುರ್ ಸೆಪ್ಟೆಂಬರ್ 20: ಉತ್ತರ ಪ್ರದೇಶದ ಈ ಸುದ್ದಿಯಿಂದ ದೇಶದ ಕ್ರೀಡೆ ಮತ್ತು ಆಟಗಾರರ ಸ್ಥಿತಿಯನ್ನು ಖಂಡಿತಾ ಅಳೆಯಬಹುದು. ಉತ್ತರಪ್ರದೇಶದ ಸಹರಾನ್‌ಪುರದಲ್ಲಿರುವ ಕ್ರೀಡಾಂಗಣದಲ್ಲಿ ಆಟಗಾರರಿಗೆ ಆಹಾರ ನೀಡುತ್ತಿರುವ ರೀತಿ ಬಹುಶಃ ಪ್ರಾಣಿಗಳಿಗೂ ನೀಡಲ್ಲವೆನೋ. ಈ ಕ್ರೀಡಾ ಸ್ಟೇಡಿಯಂನ ವಿಡಿಯೊವು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇದರಲ್ಲಿ ಆಟಗಾರರಿಗೆ ಶೌಚಾಲಯದಲ್ಲಿ ಆಹಾರವನ್ನು ನೀಡುತ್ತಿರುವುದನ್ನು ಕಾಣಬಹುದು.

ಉತ್ತರಪ್ರದೇಶದ ಸಹರಾನ್‌ಪುರದಲ್ಲಿರುವ ಕ್ರೀಡಾಂಗಣದ ಈ ಚಿತ್ರವನ್ನು ನೋಡಿದರೆ ನಾಚಿಕೆಯಿಂದ ತಲೆ ತಗ್ಗಿಸುವಂತಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆಟಗಾರರ ಆಹಾರವನ್ನು ಶೌಚಾಲಯದಲ್ಲಿಯೇ ಇರಿಸಿರುವುದು ಕಂಡು ಬಂದಿದೆ. ಶೌಚಾಲಯದ ಕೊಳಕು ಮಹಡಿಯಲ್ಲಿ ಆಹಾರವನ್ನು ಇಡಲಾಗಿರುವ ದೃಶ್ಯ ವೈರಲ್ ಆಗಿದೆ. ಆಟಗಾರರು ಆಹಾರಕ್ಕಾಗಿ ಶೌಚಾಲಯದ ಒಳಗೆ ಬರುತ್ತಿರುವುದು ಕಂಡು ಬಂದಿದೆ. ಈ ವಿಡಿಯೋ ನೋಡಿದ ಮೇಲೆ ನಿಮ್ಮ ಮನಸ್ಸು ಬೇಸರವಾಗುತ್ತದೆ. ಆದರೆ ಈ ವಿಡಿಯೋ ಹೊರಬಿದ್ದಿದ್ದರೂ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಜೊತೆಗೆ ಅದನ್ನು ಅವರು ಸಮರ್ಥಿಸಿಕೊಂಡಿರುವುದು ದುರಾದೃಷ್ಟಕರ.

UP: Food distributed to players inside toilets: Video goes viral

200 ಆಟಗಾರರಿಗೆ ಶೌಚಾಲಯದಲ್ಲಿ ಇರಿಸಿ ಊಟ ವಿತರಣೆ

ಶೌಚಾಲಯದೊಳಗೆ ಆಹಾರವನ್ನು ಇಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಶೌಚಾಲಯದ ನೆಲದ ಮೇಲೆ ಅನ್ನದ ಪಾತ್ರೆ, ಪುರಿ ಇತ್ಯಾದಿಗಳನ್ನು ಇಡಲಾಗಿದೆ. ಆಟಗಾರರು ಶೌಚಾಲಯಕ್ಕೆ ಬಂದು ಆಹಾರವನ್ನು ತೆಗೆದುಕೊಳ್ಳುತ್ತಿದ್ದಾರೆ. ಇಲ್ಲಿನ ಆಟಗಾರರು ಶೌಚಾಲಯದ ನೆಲದ ಮೇಲೆ ಇಟ್ಟಿದ್ದ ಆಹಾರವನ್ನು ತಿಂದಿದ್ದಾರೆ. 200 ಆಟಗಾರರು ಈ ಆಹಾರವನ್ನು ತಿನ್ನಲು ಒತ್ತಾಯಿಸಲಾಯಿತು. ಮೂರು ದಿನಗಳ ರಾಜ್ಯ ಮಟ್ಟದ 17 ವರ್ಷದೊಳಗಿನವರ ಕಬಡ್ಡಿ ಮಹಿಳೆಯರ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಹರಾನ್‌ಪುರಕ್ಕೆ ಆಟಗಾರರು ಬಂದಿದ್ದರು. ಈ ಟೂರ್ನಿ ಶುಕ್ರವಾರ ಸಹರಾನ್‌ಪುರದಲ್ಲಿ ಆರಂಭವಾಗಿದೆ. ಶೌಚಾಲಯದ ನೆಲದ ಮೇಲೆ ಇರಿಸಲಾಗಿದ್ದ ಈ ಅನ್ನವನ್ನು ತಮಗೆ ಬಡಿಸಲಾಗಿದೆ ಎಂದು ಜೂನಿಯರ್ ಆಟಗಾರರೊಬ್ಬರು ಹೇಳಿದ್ದಾರೆ.

'ಆಹಾರದ ಗುಣಮಟ್ಟ ಉತ್ತಮವಾಗಿದೆ' ಅಧಿಕಾರಿ ಸಮರ್ಥನೆ

ಈ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ, ಸಹರಾನ್‌ಪುರ ಕ್ರೀಡಾ ಅಧಿಕಾರಿ ಅನಿಮೇಶ್ ಸಕ್ಸೇನಾ ಈ ಆರೋಪಗಳು ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರ ರಹಿತವಾಗಿವೆ ಎಂದು ಹೇಳಿದ್ದಾರೆ. ಟೂರ್ನಿಯಲ್ಲಿ ಆಟಗಾರರಿಗೆ ನೀಡುವ ಆಹಾರ ಉತ್ತಮ ಗುಣಮಟ್ಟದ್ದಾಗಿದೆ. ಸಾಂಪ್ರದಾಯಿಕ ಪಾತ್ರೆಯಲ್ಲಿ ಹೆಚ್ಚಿನ ಪ್ರಮಾಣದ ಬೇಳೆಕಾಳುಗಳು, ಅಕ್ಕಿ, ತರಕಾರಿಗಳನ್ನು ಒಲೆಯ ಮೇಲೆ ತಯಾರಿಸಲಾಗುತ್ತದೆ ಎಂದು ಹೇಳಿದರು. ಈಜುಕೊಳದ ಸಮೀಪವೇ ಆಹಾರ ತಯಾರಿಸಲಾಗಿತ್ತು. ಬಾಣಲೆಯಿಂದ ಅನ್ನವನ್ನು ತೆಗೆದ ನಂತರ ಅದನ್ನು ದೊಡ್ಡ ತಟ್ಟೆಯಲ್ಲಿ ಶೌಚಾಲಯದ ನೆಲದ ಮೇಲೆ ಇರಿಸಲಾಯಿತು ಎಂದು ಹೇಳಿದ್ದಾರೆ.

English summary
The players were given food in the toilet at the stadium in Saharanpur, Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X