ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ: ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೋನಿಯಾ, ಮನಮೋಹನ್, ರಾಹುಲ್, ಆಜಾದ್

|
Google Oneindia Kannada News

ಲಕ್ನೋ ಜಜನವರಿ 24: ಉತ್ತರ ಪ್ರದೇಶದಲ್ಲಿ ಚುನಾವಣೆಗೂ ಮುನ್ನ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ. ಮೊದಲ ಹಂತದ ವಿಧಾನಸಭೆಯ 30 ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಕನ್ಹಯ್ಯಾ ಕುಮಾರ್ ಮತ್ತು ಪ್ರಮುಖ ಸದಸ್ಯರ ಹೆಸರಿದೆ.

ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ಮಾಜಿ ರಾಜ್ಯಸಭಾ ಸದಸ್ಯ ರಾಜ್ ಬಬ್ಬರ್ ಜಿ-23 ನಾಯಕರನ್ನು ಸ್ಟಾರ್ ಪ್ರಚಾರಕರು ಎಂದು ಹೆಸರಿಸಲಾಗಿದೆ.

23 ಕಾಂಗ್ರೆಸ್ ನಾಯಕರ ಗುಂಪು ಈ ಹಿಂದೆ ಪಕ್ಷದ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿತ್ತು. ಜೊತೆಗೆ ಪಕ್ಷ ಸಂಘಟನೆಗೆ ಒತ್ತಾಯಿಸಿತ್ತು. ಆದರೆ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಅಶೋಕ್ ಗೆಹ್ಲೋಟ್ ನೇತೃತ್ವದ ರಾಜ್ಯದಲ್ಲಿ ತನ್ನದೇ ಆದ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದರು ಮತ್ತು ಈಗ 30 ಸ್ಟಾರ್ ಪ್ರಚಾರಕರಲ್ಲಿ ಅವರ ಹೆಸರಿದೆ. ಎಐಸಿಸಿ ಉತ್ತರ ಪ್ರದೇಶದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಸಹ ಸ್ಟಾರ್ ಪ್ರಚಾರಕರಲ್ಲಿ ಸೇರಿದ್ದಾರೆ.

UP elections: Sonia, Manmohan, Rahul, Azad among Congress star campaigners for first-phase poll

ಇನ್ನೂ ಈ ಪಟ್ಟಿಯಲ್ಲಿ ರಾಜ್ಯ ಪಕ್ಷದ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು, ವಿಧಾನಸಭೆಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಆರಾಧನಾ ಮಿಶ್ರಾ 'ಮೋನಾ', ಮಾಜಿ ಕೇಂದ್ರ ಸಚಿವರಾದ ಸಲ್ಮಾನ್ ಖುರ್ಷಿದ್ ಮತ್ತು ಆರ್‌ಪಿಎನ್ ಸಿಂಗ್ ಮತ್ತು ಮಾಜಿ ರಾಜ್ಯಸಭಾ ಸದಸ್ಯರಾದ ಪ್ರಮೋದ್ ತಿವಾರಿ ಮತ್ತು ಪಿಎಲ್ ಪುನಿಯಾ ಇದ್ದಾರೆ. ಕಾಂಗ್ರೆಸ್‌ನ 30 ಸ್ಟಾರ್ ಪ್ರಚಾರಕರಲ್ಲಿ ಪಕ್ಷದ ನಾಯಕರಾದ ದೀಪಿಂದರ್ ಸಿಂಗ್ ಹೂಡಾ, ಸುಪ್ರಿಯಾ ಶ್ರಿನಾಟೆ, ಇಮ್ರಾನ್ ಪ್ರತಾಪ್‌ಗರ್ಹಿ ಮತ್ತು ಕನ್ಹಯ್ಯಾ ಕುಮಾರ್ ಕೂಡ ಸೇರಿದ್ದಾರೆ.

UP elections: Sonia, Manmohan, Rahul, Azad among Congress star campaigners for first-phase poll

ಏಳು ಹಂತಗಳಲ್ಲಿ ಮೊದಲ ಹಂತದಲ್ಲಿ, ಫೆಬ್ರವರಿ 10 ರಂದು 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಜಿಲ್ಲೆಗಳೆಂದರೆ ಶಾಮ್ಲಿ, ಮುಜಾಫರ್‌ನಗರ, ಬಾಗ್‌ಪತ್, ಮೀರತ್, ಗಾಜಿಯಾಬಾದ್, ಗೌತಮ್ ಬುದ್ಧ ನಗರ, ಹಾಪುರ್, ಬುಲಂದ್‌ಶಹರ್, ಅಲಿಘರ್, ಮಥುರಾ ಮತ್ತು ಆಗ್ರಾ. ಮಾರ್ಚ್ 7 ರಂದು ಅಂತಿಮ ಹಂತದ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

Recommended Video

ಪಾಕ್ ಬೌಲರ್ ಶಾಹಿನ್ ಅಫ್ರಿದಿಗೆ ಗೆ ಭಾರತದ ಸೋಲಿನಿಂದ ಅನಿಸಿದ್ದೇನು? | Oneindia Kannada

English summary
Congress interim president Sonia Gandhi, former Prime Minister Manmohan Singh, former party president Rahul Gandhi, Kanhaiya Kumar and some of the G-23 members have been named in the list of 30 star campaigners for the first-phase assembly election in Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X