ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಪ್ರದೇಶ ವಿಧಾನಸಭೆ ಚುನಾವಣೆ 2022: ಬಿಜೆಪಿಯಿಂದ 'ಮನೆ-ಮನೆಗೆ' ಪ್ರಚಾರ

|
Google Oneindia Kannada News

ಲಕ್ನೋ ಜನವರಿ 10: 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಚುನಾವಣಾ ಆಯೋಗವು ಚುನಾವಣಾ ರ್‍ಯಾಲಿಗಳನ್ನು ನಿಷೇಧಿಸಿರುವುದರಿಂದ ಭಾರತೀಯ ಜನತಾ ಪಕ್ಷ (ಬಿಜೆಪಿ) ಮಂಗಳವಾರ ಮತದಾರರನ್ನು ತಲುಪಲು ತನ್ನ ಮನೆ-ಮನೆ ಪ್ರಚಾರವನ್ನು ಪ್ರಾರಂಭಿಸಿದೆ.

ಯುಪಿ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಅವರು ಲಕ್ನೋದ ಬಲ್ಲು ಅಡ್ಡಾ ಪ್ರದೇಶದಲ್ಲಿ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು. ಜೊತೆಗೆ ಮನೆಗಳ ಹೊರಗೆ ಪೋಸ್ಟರ್‌ಗಳನ್ನು ಅಂಟಿಸಿದರು. 'ಪೂರೆ ಹುಯಿ ಆಸ್, ಘರ್ ಘರ್ ಹುವಾ ವಿಕಾಸ್' (ಆಕಾಂಕ್ಷೆಗಳು ಈಡೇರಿವೆ, ಅಭಿವೃದ್ಧಿ ಮನೆಗಳಿಗೆ ತಲುಪಿದೆ) ಎಂದು ಘೋಷಣೆಯೊಂದಿಗೆ ಮನೆ ಮನೆ ಪ್ರಚಾರ ಮಾಡಿದರು. ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಐದು ಸದಸ್ಯರು ಮಾತ್ರ ಮನೆ-ಮನೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಬಹುದು. 'ಚುನಾವಣಾ ಆಯೋಗದ ಮಾರ್ಗಸೂಚಿಯಂತೆ, ಬಿಜೆಪಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳು ಫಲಾನುಭವಿಗಳಿಗೆ ತಲುಪಿರುವ ಬಗ್ಗೆ ವಿಚಾರಿಸಲಾಗುತ್ತಿದೆ. ನಾವು ಸಾರ್ವಜನಿಕರಿಗೆ ನಮ್ಮ ರಿಪೋರ್ಟ್ ಕಾರ್ಡ್ ನೀಡುತ್ತಿದ್ದೇವೆ ಮತ್ತು ಅವರಿಂದಲೂ ಸಲಹೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಇದು ಮೊದಲ ಸರ್ಕಾರವಾಗಿದೆ. ಹೀಗಾಗಿ ಇದು ಮನೆ-ಮನೆಗೆ ಹೋಗುತ್ತಿದೆ" ಎಂದು ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

ಯುಪಿಯಾದ್ಯಂತ ಜನರನ್ನು ತಲುಪಿ ಕೇಂದ್ರ ಮತ್ತು ಯೋಗಿ ಆದಿತ್ಯನಾಥ್ ಸರ್ಕಾರ ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಯುವಕರಿಗಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸುವ ಗುರಿಯನ್ನು ಆಡಳಿತ ಪಕ್ಷ ಹೊಂದಿದೆ ಎಂದು ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥರು ಹೇಳಿದ್ದಾರೆ. "ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಕೋವಿಡ್ ಪ್ರೋಟೋಕಾಲ್‌ಗೆ ಬದ್ಧವಾಗಿ ಎಲ್ಲಾ 403 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1.74 ಲಕ್ಷ ಮತಗಟ್ಟೆಗಳ ಅಡಿಯಲ್ಲಿ ಬರುವ ಪ್ರತಿ ಮನೆಯನ್ನು ನಾಲ್ಕರಿಂದ ಐದು ಜನರ ಗುಂಪುಗಳಲ್ಲಿ ತಲುಪುತ್ತಾರೆ" ಎಂದು ಸಿಂಗ್ ಹೇಳಿದರು.

UP elections 2022: BJP launches door-to-door campaign

ಜನವರಿ 8 ರಂದು ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ಮತ್ತು ಪಂಜಾಬ್‌ನಲ್ಲಿ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದ ಚುನಾವಣಾ ಆಯೋಗ, ಕೋವಿಡ್-19 ಉಲ್ಬಣದಿಂದಾಗಿ ಐದು ಚುನಾವಣೆಗೆ ಒಳಪಟ್ಟ ರಾಜ್ಯಗಳಲ್ಲಿ ಜನವರಿ 15 ರವರೆಗೆ ಸಾರ್ವಜನಿಕ ರ್‍ಯಾಲಿಗಳು, ರೋಡ್‌ಶೋಗಳು ಮತ್ತು ಕಾರ್ನರ್ ಸಭೆಗಳನ್ನು ನಿಷೇಧಿಸಿದೆ.

ಏಳು ಹಂತಗಳಲ್ಲಿ ಯುಪಿ ಚುನಾವಣೆ

2022 ರ ಯುಪಿ ಚುನಾವಣೆಯನ್ನು ಏಳು ಹಂತಗಳಲ್ಲಿ ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿದೆ. ಉತ್ತರ ಪ್ರದೇಶದಲ್ಲಿ ಮತದಾನ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ನಡೆಯಲಿದೆ. ಉತ್ತರ ಪ್ರದೇಶ ಚುನಾವಣೆ 2022 ಫಲಿತಾಂಶವನ್ನು ಮಾರ್ಚ್ 10 ರಂದು ಪ್ರಕಟಿಸಲಾಗುವುದು.

UP elections 2022: BJP launches door-to-door campaign

Recommended Video

South Africa ವಿರುದ್ಧ ಮಿಂಚಿನ ಪ್ರದರ್ಶನ ತೋರಿದ Virat Kohli | Oneindia Kannada
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಸಂಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಲಕ್ನೋದಲ್ಲಿ ನಡೆದ ಪಂಚಾಯತ್ ಆಜ್ ತಕ್ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯದಲ್ಲಿ ರೈತರು ಹಾಗೂ ಬ್ರಾಹ್ಮಣ ಸಮುದಾಯದ ಮತದಾರರು ಬಿಜೆಪಿ ವಿರುದ್ಧ ಕೋಪಗೊಂಡಿಲ್ಲ ಎಂದು ಹೇಳಿದರು.

ದೇಶದಲ್ಲಿ ಅತಿಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ ಚುನಾವಣೆಯು ಪಂಚರಾಜ್ಯ ಚುನಾವಣೆಗಳಲ್ಲೇ ಅತಿಹೆಚ್ಚು ಕುತೂಹಲ ಕೆರಳಿಸಿದೆ. ಬಿಜೆಪಿ ಪಾಲಿಗೆ ಭದ್ರಕೋಟೆ ಎನಿಸಿರುವ ಈ ರಾಜ್ಯದಲ್ಲಿ ಮತದಾರರು ಯಾರಿಗೆ ಅಧಿಕಾರದ ಕುರ್ಚಿ ನೀಡುತ್ತಾರೆ ಎಂಬುದು ಸಾಕಷ್ಟು ಇನ್ನಷ್ಟೇ ತಿಳಿದು ಬರಬೇಕಿದೆ. ಇದರ ಮಧ್ಯೆ ಪಂಚಾಯತ್ ಆಜ್ ತಕ್‌ನಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಬಾರಿ ಉತ್ತರಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವುದು ಪಕ್ಕಾ ಎಂದಿದ್ದಾರೆ.

English summary
With Election Commission banning poll rallies ahead of Uttar Pradesh Assembly elections 2022, the Bharatiya Janata Party (BJP) on Tuesday kickstarted its door-to-door campaign to reach out to the electorate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X