ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷ ಅಧಿಕಾರಕ್ಕೆ ಬಂದರೆ ಮೃತ ರೈತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ

|
Google Oneindia Kannada News

ಲಕ್ನೋ, ನವೆಂಬರ್ 30: "ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೃತ ರೈತರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು," ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ, ಮಾಜಿ ಸಿಎಂ ಅಖಿಲೇಶ್ ಯಾದವ್ ಘೋಷಿಸಿದ್ದಾರೆ.

ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನವೇ ಮತದಾರರ ಅದರಲ್ಲೂ ರೈತರ ಮನ ಗೆಲ್ಲಲು ಸಮಾಜವಾದಿ ಪಕ್ಷ ದೊಡ್ಡ ಆಶ್ವಾಸನೆಯನ್ನು ನೀಡಿದ್ದು, ಅಧಿಕಾರಕ್ಕೆ ಬಂದರೆ ಮೃತ ರೈತರ ಕುಟುಂಬಗಳಿಗೆ 25 ಲಕ್ಷ ರೂಪಾಯಿವರೆಗೆ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.

"ರೈತ ಆದಾಯವನ್ನು ದ್ವಿಗುಣಗೊಳಿಸುವುದಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಕೃಷಿ ಕಾಯಿದೆ ಜಾರಿಗೆ ತಂದಾಗ ಬಿಜೆಪಿ ನಿಲುವು ಏನಿತ್ತು? ಮತ್ತು ಕಾಯಿದೆ ಹಿಂಪಡೆದಾಗ ಅದು ರೈತರ ಪರವಾಗಿ ಹೇಗೆ ಆಯಿತು? ಎನ್ನುವುದು ಕೇಂದ್ರ ಸರ್ಕಾರ ಹೇಳಬೇಕು," ಎಂದು ಆಗ್ರಹಿಸಿದ್ದಾರೆ.

UP Elections 2022: Akhilesh Yadav Promises Rs 25 Lakhs To Deceased Farmers’ Kin If Party Voted To Power

"ಪ್ರತಿಭಟನೆ ವೇಳೆ ಮೃತ ರೈತ ಕುಟುಂಬಕ್ಕೆ ಯಾರು ಸಹಾಯ ಮಾಡಿದರು? ಹೀಗಾಗಿ ಸಮಾಜವಾದಿ ಪಕ್ಷ ನಿರ್ಧಾರ ಮಾಡಿದೆ ಉತ್ತರ ಪ್ರದೇಶದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, ರೈತ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡುತ್ತೇವೆ. ಜನರಿಗೆ ಸೂಕ್ತ ಸರ್ಕಾರ ಬೇಕು, ಯೋಗಿ ಸರ್ಕಾರವಲ್ಲ," ಎಂದು ಆಡಳಿತ ಬಿಜೆಪಿ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.

ಉತ್ತರ ಪ್ರದೇಶದಲ್ಲಿ ಮತಬ್ಯಾಂಕ್ ಲೆಕ್ಕಾಚಾರ
ಮುಂಬರಲಿರುವ ಉತ್ತರ ಪ್ರದೇಶ ವಿಧಾನಸಭೆ ಹೊಸ್ತಿಲಿನಲ್ಲಿ ಮತಬ್ಯಾಂಕ್ ಲೆಕ್ಕಾಚಾರ ಶುರುವಾಗಿದೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿಯವರ ಮತ ಬ್ಯಾಂಕ್ ಆಗಿರುವ ಜಾಟವ ಸಮುದಾಯದ ಮತಗಳ ಮೇಲೆ ಕಣ್ಣಿರಿಸಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾನುವಾರ ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್‌ರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಖಿಲೇಶ್ ಇತರೆ ಹಿಂದುಳಿದ ಸಮುದಾಯದ ಮತದಾರರ ಮೇಲೆ ಪ್ರಭಾವ ಬೀರಬಲ್ಲ ಸಣ್ಣಪುಟ್ಟ ಪಕ್ಷಗಳೊಂದಿಗೆ ಈಗಾಗಲೇ ಮೈತ್ರಿ ಗಟ್ಟಿಗೊಳಿಸಿದ್ದಾರೆ.

UP Elections 2022: Akhilesh Yadav Promises Rs 25 Lakhs To Deceased Farmers’ Kin If Party Voted To Power

ಇನ್ನು ಅಖಿಲೇಶ್ ಭೇಟಿ ಕುರಿತು ಚಂದ್ರಶೇಖರ್ ಮಾತನಾಡಿದ್ದು, ಬಿಜೆಪಿ ಸರ್ಕಾರವು ದಲಿತ ವಿರೋಧಿಯಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಚಂದ್ರಶೇಖರ್ ದಲಿತ ಮತದಾರರ ಮೇಲೆ ಅದರಲ್ಲೂ ವಿಶೇಷವಾಗಿ ಉತ್ತರಪ್ರದೇಶದ ಪಶ್ಚಿಮ ಭಾಗದ ಸಹರನ್‌ಪುರ, ಮುಜಾಫರ್‌ನಗರ, ಬುಲಂದ್‌ಶೆಹರ್ ಸೇರಿ ಹಲವು ಜಿಲ್ಲೆಗಳಲ್ಲಿ ಪ್ರಭಾವ ಬೀರಿದ್ದಾರೆ. ಕಳೆದ ವರ್ಷ ನಡೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಎಸ್‌ಪಿ ಬಹುವಾಗಿ ನಿರೀಕ್ಷೆ ಇಟ್ಟುಕೊಂಡಿದ್ದ ಕ್ಷೇತ್ರದಲ್ಲಿ ಚಂದ್ರಶೇಖರ್ ಅವರ ಸಂಘಟನೆಯ ಆಜಾದ್ ಸಮಾಜ್ ಪಕ್ಷ ಅಭ್ಯರ್ಥಿ 13,500ಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಈ ಮೂಲಕ ಬಿಜೆಪಿಗೆ ಎಚ್ಚರಿಕೆಯನ್ನೂ ರವಾನಿಸಿದ್ದರು.

UP Elections 2022: Akhilesh Yadav Promises Rs 25 Lakhs To Deceased Farmers’ Kin If Party Voted To Power

ಚಂದ್ರಶೇಖರ್ ಬಣದ ಸಖ್ಯವು, ಸಮಾಜವಾದಿ ಪಕ್ಷಕ್ಕೆ ಖಂಡಿತವಾಗಿಯೂ ಪ್ರಯೋಜನಕ್ಕೆ ಬರಲಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಬಿಎಸ್‌ಪಿಯ ಮತ ಬ್ಯಾಂಕ್ ಅನ್ನು ಕಸಿಯುವ ಸಾಮರ್ಥ್ಯವನ್ನು ಅವರು ಈಗಾಗಲೇ ಸಾಬೀತುಪಡಿಸಿದ್ದು, ದಲಿತರ ಮತಗಳು ಅಖಿಲೇಶ್‌ಗೆ ಬೋನಸ್ ಆಗಿ ಪರಿಣಮಿಸಬಲ್ಲದು ಎಂದು ಹೇಳಲಾಗಿದೆ. ಚಂದ್ರಶೇಖರ್ ಬಣವು ತಮ್ಮ ಪಕ್ಷಕ್ಕೆ ದೊಡ್ಡ ಹೊಡೆದ ಎಂಬುದನ್ನು ಬಿಎಸ್‌ಪಿ ನಾಯಕರು ಕೂಡ ಒಪ್ಪುತ್ತಾರೆ.

ಮಾಜಿ ಮುಖ್ಯಮಂತ್ರಿ ಮಾಯಾವತಿಯವರು ದಲಿತರ ಹಿತ ಕಾಯಲಿಲ್ಲ ಎಂದು ಚಂದ್ರಶೇಖರ್ ಟೀಕಿಸಿದ್ದಾರೆ. ಚಂದ್ರಶೇಖರ್ ಪ್ರವೇಶದಿಂದಾಗಿ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಗೆಲುವಿನ ನಿರೀಕ್ಷೆಯ ಕ್ಷೇತ್ರಗಳಲ್ಲಿ ಖಂಡಿತ ಹೊಡೆದ ಬೀಳುತ್ತದೆ ಎಂದು ಬಿಎಸ್‌ಪಿ ನಾಯಕರ ಅಭಿಪ್ರಾಯವಾಗಿದೆ.

English summary
Uttar Pradesh Assembly Election 2022: Samajavadi Party Chief Akhilesh Yadav promises Rs 25 Lakhs to deceased Farmers’ Kin If Party Voted To Power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X