ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ ಚುನಾವಣೆ 2022: ಕಾಂಗ್ರೆಸ್‌ನ ಅದಿತಿ ಸಿಂಗ್, ಬಿಎಸ್‌ಪಿಯ ವಂದನಾ ಸಿಂಗ್ ಬಿಜೆಪಿ ಸೇರ್ಪಡೆ

|
Google Oneindia Kannada News

ಲಕ್ನೋ, ನವೆಂಬರ್ 24: ಉತ್ತರ ಪ್ರದೇಶದಲ್ಲಿ ರಾಜಕೀಯ ಪಕ್ಷಗಳು ಮುಂಬರುವ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿವೆ. ಈ ಮಧ್ಯೆ ಕಾಂಗ್ರೆಸ್ ಶಾಸಕಿ ಬಿಜೆಪಿ ಸೇರುವ ಮೂಲಕ ಬಿಗ್ ಶಾಕ್ ಕೊಟ್ಟಿದ್ದಾರೆ. ರಾಯ್ ಬರೇಲಿಯ ಬಂಡಾಯ ಕಾಂಗ್ರೆಸ್ ಶಾಸಕಿ ಸದರ್ ಅದಿತಿ ಸಿಂಗ್ ಬಿಜೆಪಿ ಸೇರಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರ ಸಮ್ಮುಖದಲ್ಲಿ ಅದಿತಿ ಸಿಂಗ್ ಬುಧವಾರ ಬಿಜೆಪಿ ರಾಜ್ಯ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಅದಿತಿ ಸಿಂಗ್ ಅಲ್ಲದೆ ಬಿಎಸ್ಪಿ ಶಾಸಕಿ ವಂದನಾ ಸಿಂಗ್ ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅದಿತಿ ಸಿಂಗ್ ಬಿಜೆಪಿ ಸೇರುವ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೆಯುತ್ತಿತ್ತು. ಅದಿತಿ ಸಿಂಗ್ ಅವರ ಬಂಡಾಯ ಧೋರಣೆ ನೋಡಿ ಅವರು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳು ನಿರಂತರವಾಗಿ ಹಬ್ಬಿದ್ದವು. ಅಂತಿಮವಾಗಿ ಅವರು ಬಿಜೆಪಿ ಪಕ್ಷಕ್ಕೆ ಸೇರಿದರು.

ಅದಿತಿ ಸಿಂಗ್ ಯಾರು?

ಅದಿತಿ ಸಿಂಗ್ ಉತ್ತರ ಪ್ರದೇಶದ ರಾಯ್ ಬರೇಲಿ ಸದರ್ ಕ್ಷೇತ್ರದ ಶಾಸಕಿ. ಅವರು ರಾಜಕೀಯ ಕುಟುಂಬಕ್ಕೆ ಸೇರಿದವರು. ಅವರ ತಂದೆ ಅಖಿಲೇಶ್ ಸಿಂಗ್ ಕೂಡ ಶಾಸಕರಾಗಿದ್ದರು. ಅದಿತಿ ಸಿಂಗ್ 2017 ರಲ್ಲಿ ರಾಜಕೀಯ ಪ್ರವೇಶಿಸಿದರು ಮತ್ತು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಅದಿತಿ ಸಿಂಗ್ ಅವರು 2017 ರ ವಿಧಾನಸಭಾ ಚುನಾವಣೆಯಲ್ಲಿ ರಾಯ್ ಬರೇಲಿ ಸದರ್ ಕ್ಷೇತ್ರದಿಂದ ಗೆದ್ದಿದ್ದರು. ಅವರ ಪತಿ ಅಂಗದ್ ಸೈನಿ ಕೂಡ 2017 ರಲ್ಲಿ ರಾಜಕೀಯ ಪ್ರವೇಶಿಸಿ ಚುನಾವಣೆಯಲ್ಲಿ ಗೆದ್ದಿದ್ದರು.

ಕಾಂಗ್ರೆಸ್ ನಿಂದ ನೋಟಿಸ್

ಕಾಂಗ್ರೆಸ್ ನಿಂದ ನೋಟಿಸ್

ರಾಯ್‌ಬರೇಲಿಯ ಕಾಂಗ್ರೆಸ್‌ ಶಾಸಕಿ ಸದರ್‌ ಅದಿತಿ ಸಿಂಗ್‌ ಕಾಂಗ್ರೆಸ್‌ ವಿರುದ್ಧ ಬಂಡಾಯವೆದ್ದರು. ಇದೇ ಸಮಯದಲ್ಲಿ ಅನೇಕ ಸಂದರ್ಭಗಳಲ್ಲಿ ಅವರು ಬಿಜೆಪಿ ಸರ್ಕಾರದ ನೀತಿಗಳು ಸಹ ಪ್ರಶಂಸಿಸಿದರು. ಇದಕ್ಕಾಗಿ ಕಾಂಗ್ರೆಸ್ ಪಕ್ಷವು ಅದಿತಿ ಸಿಂಗ್ ಅವರಿಗೆ ನೋಟಿಸ್ ಕೂಡ ನೀಡಿತ್ತು. ಇತ್ತೀಚೆಗೆ, ಅದಿತಿ ಸಿಂಗ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಂಡದ ಭಾಗವಾಗಲು ಬಯಸುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದರು. ಯೋಗಿ ಆದಿತ್ಯನಾಥ್ ಅವರು ಅತ್ಯಂತ ಜನಪ್ರಿಯ ಮುಖ್ಯಮಂತ್ರಿಯಾಗಿದ್ದು, ಅವರ ತಂಡದ ಭಾಗವಾಗಿರುವುದರಿಂದ ನಾನು ವಿಧಾನಸಭೆ ಚುನಾವಣೆಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದರು.

ವಂದನಾ ಸಿಂಗ್ ಯಾರು?

ವಂದನಾ ಸಿಂಗ್ ಯಾರು?

ವಂದನಾ ಸಿಂಗ್ ಅವರು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಟಿಕೆಟ್‌ನಲ್ಲಿ ಅಜಂಗಢ ಜಿಲ್ಲೆಯ ಸಿಗ್ರಿಯಿಂದ ಯುಪಿ ಅಸೆಂಬ್ಲಿಗೆ ಆಯ್ಕೆಯಾದ ಮಾಜಿ ಶಾಸಕಿ.ಕಳೆದ ವರ್ಷ ವಂದನಾ ಸಿಂಗ್ ಅವರನ್ನು ಬಿಎಸ್‌ಪಿಯಿಂದ ಅಮಾನತುಗೊಳಿಸಲಾಗಿತ್ತು. ಅಮಾನತುಗೊಂಡಿರುವ ಹೆಚ್ಚಿನ ಬಿಎಸ್‌ಪಿ ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಾಗ, ವಂದನಾ ಸಿಂಗ್ ಯುಪಿ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ಬಿಜೆಪಿ ಸೇರಲು ನಿರ್ಧರಿಸಿದರು.

 ರಾಕೇಶ್ ಪ್ರತಾಪ್ ಕೂಡ ಬಿಜೆಪಿಗೆ ಸೇರ್ಪಡೆ

ರಾಕೇಶ್ ಪ್ರತಾಪ್ ಕೂಡ ಬಿಜೆಪಿಗೆ ಸೇರ್ಪಡೆ

ಬುಧವಾರ ಲಕ್ನೋದಲ್ಲಿ ನಡೆದ ಸಮಾರಂಭದಲ್ಲಿ ಇಬ್ಬರನ್ನು ಬಿಜೆಪಿ ಸ್ವಾಗತಿಸಿತು. ಅದಿತಿ ಸಿಂಗ್ ಜೊತೆಗೆ ಬಿಎಸ್‌ಪಿಯ ಅಜಂಗಢ ಶಾಸಕರಾದ ವಂದನಾ ಸಿಂಗ್ ಮತ್ತು ರಾಕೇಶ್ ಪ್ರತಾಪ್ ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಯುಪಿ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್, "ಇಂದು ಬಿಜೆಪಿಗೆ ಸೇರುವ ನಾಯಕರಲ್ಲಿ ಒಬ್ಬರು [ವಂದನಾ ಸಿಂಗ್] ಅಜಂಗಢದಲ್ಲಿ ಅಖಿಲೇಶ್-ಡಿಂಪಲ್ [ಅಖಿಲೇಶ್ ಯಾದವ್, ಡಿಂಪಲ್ ಯಾದವ್] ಮತ್ತು ಇನ್ನೊಬ್ಬರು [ಅದಿತಿ ಸಿಂಗ್] ಸೋನಿಯಾ-ಪ್ರಿಯಾಂಕಾ [ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ] ಗೆ ಪೈಪೋಟಿ ನೀಡಲಿದ್ದಾರೆ" ಎಂದರು.

English summary
Before the upcoming assembly elections in Uttar Pradesh, the Congress may face a major setback. Rebel Congress MLA from Rae Bareli Sadar Aditi Singh has joined BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X