ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬ್ಬಬ್ಬಾ ಆಶ್ಚರ್ಯ: ಎಣ್ಣೆ ಖರೀದಿಗೆ ಕೊರೊನಾ ಲಸಿಕೆ ಪ್ರಮಾಣಪತ್ರ ಕಡ್ಡಾಯ!

|
Google Oneindia Kannada News

ಲಕ್ನೋ, ಮೇ 31: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಕೆಲವು ಜನರು ಲಸಿಕೆ ಇಲ್ಲದಿದ್ದರೂ ಬದುಕಿ ಬಿಡುತ್ತಾರೆ. ಆದರೆ ಎಣ್ಣೆ ಇಲ್ಲದೇ ಒಂದೇ ಒಂದು ದಿನವನ್ನೂ ಕಳೆಯೋದಕ್ಕೆ ಸಾಧ್ಯವಿಲ್ಲ ಎನ್ನುವುದು ಈ ಹಿಂದೆ ಎಣ್ಣೆ ಅಂಗಡಿಗಳ ಮುಂದಿನ ಸಾಲನ್ನು ನೋಡಿದಾಗ ಅರ್ಥವಾಗುತ್ತದೆ.

ಮದ್ಯಪ್ರಿಯರ ಈ ವೀಕ್ ನೆಸ್ ಅನ್ನು ಅರಿತುಕೊಂಡಿರುವ ಉತ್ತರ ಪ್ರದೇಶ ಎತವಃ ಉಪ ವಿಭಾಗದ ನ್ಯಾಯಾದೀಶರು ಮಹತ್ವದ ಸೂಚನೆ ನೀಡಿದ್ದಾರೆ. ಕೋರ್ಟ್ ಸೂಚನೆ ಪ್ರಕಾರ, ಎಣ್ಣೆ ಖರೀದಿಸುವುದಕ್ಕೆ ಕೊರೊನಾವೈರಸ್ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ ಎಂದು ಎಣ್ಣೆ ಅಂಗಡಿ ಮಾಲೀಕ ಸೈಫಿ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಕೊರೊನಾ ರೋಗಿ ದೇಹವನ್ನು ನದಿಗೆ ಎಸೆದ ಇಬ್ಬರ ಬಂಧನಉತ್ತರ ಪ್ರದೇಶದಲ್ಲಿ ಕೊರೊನಾ ರೋಗಿ ದೇಹವನ್ನು ನದಿಗೆ ಎಸೆದ ಇಬ್ಬರ ಬಂಧನ

ಕೊವಿಡ್-19 ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ನಮ್ಮ ಅಂಗಡಿಯಲ್ಲಿ ಎಣ್ಣೆ ಮಾರಾಟ ಮಾಡುತ್ತೇವೆ. ಎಣ್ಣೆ ಖರೀದಿಸುವುದಕ್ಕೂ ಮೊದಲು ಗ್ರಾಹಕರು ತಾವು ಲಸಿಕೆ ಹಾಕಿಸಿಕೊಂಡಿರುವ ಪ್ರಮಾಣಪತ್ರವನ್ನು ತೋರಿಸುವುದು ಕಡ್ಡಾಯ ಎಂದು ಮದ್ಯದ ಅಂಗಡಿ ಮಾಲೀಕರು ಹೇಳಿದ್ದಾರೆ. ಎಣ್ಣೆ ಖರೀದಿಗೆ ಕೊರೊನಾವೈರಸ್ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ ಎಂಬ ಬಗ್ಗೆ ಅಂಗಡಿ ಎದುರು ಪೋಸ್ಟರ್ ಅನ್ನು ಕೂಡ ಹಾಕಲಾಗಿದೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲೂ ಸಖತ್ ವೈರಲ್ ಆಗುತ್ತಿದೆ.

UP: Coronavirus Vaccinated Certificate Compulsory To Purchase Liquor At This District Shop

ಉತ್ತರ ಪ್ರದೇಶದಲ್ಲಿ ಕೊರೊನಾವೈರಸ್ ಕಥೆ:

ರಾಜ್ಯದಲ್ಲಿ ಒಂದೇ ದಿನ 1864 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. 24 ಗಂಟೆಗಳಲ್ಲಿ ಮಹಾಮಾರಿಗೆ 138 ಜನ ಪ್ರಾಣ ಬಿಟ್ಟಿದ್ದು, 6713 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಈವರೆಗೂ 16,90,016 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

English summary
We Will Not Sell Liquor To Those Who Are Not Vaccinated Against COVID-19, Says Shop Owner In Etawah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X