ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಯಲ್ಲಿ 1000 ಬಸ್ ರಾಜಕೀಯ: ಕಾಂಗ್ರೆಸ್ ಅಧ್ಯಕ್ಷನ ಎಳೆದೊಯ್ದ ಪೊಲೀಸರು

|
Google Oneindia Kannada News

ಲಕ್ನೌ, ಮೇ 20: ಉತ್ತರ ಪ್ರದೇಶದಲ್ಲಿ ಗಡಿಭಾಗದಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರನ್ನು ಊರುಗಳಿಗೆ ಕರೆದುಕೊಂಡು ಹೋಗಲು ಕಾಂಗ್ರೆಸ್ ಪಕ್ಷ ನಿಯೋಜಿಸಿರುವ 1000 ಬಸ್‌ಗಳಿಗೆ ಯುಪಿ ಸರ್ಕಾರ ಇನ್ನು ಅನುಮತಿ ನೀಡಿಲ್ಲ ಎಂಬ ಆರೋಪವನ್ನು ಕಾಂಗ್ರೆಸ್ ಪಕ್ಷ ಮಾಡಿದೆ.

Recommended Video

KSRTC ಬಸ್ ಹತ್ತಿ ಸಂಪೂರ್ಣ ಪರಿಶೀಲನೆ ನಡೆಸಿದ ಸಿದ್ದರಾಮಯ್ಯ | Siddaramaiah | Oneindia Kannada

ಈ ವಿಚಾರದಲ್ಲಿ ಮಂಗಳವಾರ ಮತ್ತಷ್ಟು ಬೆಳವಣಿಗೆ ನಡೆದಿದೆ. ಪ್ರಿಯಾಂಕಾ ಗಾಂಧಿ ಕಚೇರಿಯಿಂದ ಅನುಮತಿಗಾಗಿ ಪತ್ರ ಬರೆದಿದ್ದು, ನಂತರ ಯುಪಿ ಸರ್ಕಾರ ಒಪ್ಪಿಗೆ ಕೊಟ್ಟಿದ್ದು ಎಲ್ಲವೂ ವಾಸ್ತವ. ಆದರೆ, ಅದರೊಳಗೂ ಪ್ರತಿಷ್ಠೆಯ ರಾಜಕೀಯ ನಡೆಯುತ್ತಿದೆ ಎನ್ನುವುದು ದುರಂತ.

ಯುಪಿಯಲ್ಲಿ 'ಚೀಪ್ ಪಾಲಿಟಿಕ್ಸ್': ಅನುಮತಿ ಕೊಟ್ಟಿಲ್ಲ, ಬಸ್ ಬಿಡ್ತಿಲ್ಲ - ಕಾಂಗ್ರೆಸ್ ಟೀಕೆಯುಪಿಯಲ್ಲಿ 'ಚೀಪ್ ಪಾಲಿಟಿಕ್ಸ್': ಅನುಮತಿ ಕೊಟ್ಟಿಲ್ಲ, ಬಸ್ ಬಿಡ್ತಿಲ್ಲ - ಕಾಂಗ್ರೆಸ್ ಟೀಕೆ

ಬಸ್‌ಗಳಿಗೆ ಅನುಮತಿ ಕೊಡೋವರೆಗೂ ನಾವು ಇಲ್ಲೇ ಇರ್ತೀವಿ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಧರಣಿ ನಡೆಸಿದ್ದು, ನಂತರ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮುಂದೆ ಓದಿ...

ಮೇ 20, ಸಂಜೆ 4ರವರೆಗೂ ಕಾಯುತ್ತೇವೆ

ಮೇ 20, ಸಂಜೆ 4ರವರೆಗೂ ಕಾಯುತ್ತೇವೆ

ವಲಸೆ ಕಾರ್ಮಿಕರನ್ನು ಕರೆದುಕೊಂಡು ಹೋಗಲು ಕಾಂಗ್ರೆಸ್ ಕರೆತಂದಿರುವ 1000 ಬಸ್‌ಗಳಿಗೆ ಅನುಮತಿ ಸಿಗುವವರೆಗೂ ಗಡಿಭಾಗದಲ್ಲಿ ಕಾಯುತ್ತೇವೆ ಎಂದು ಯುಪಿ ಕಾಂಗ್ರೆಸ್ ಅಧ್ಯಕ್ಷ ಮತ್ತು ಕಾರ್ಯಕರ್ತರು ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಯಾವ ಕ್ರಮ ಜರುಗಿಸುತ್ತೇ ಎಂದು ಮೇ 20, ಸಂಜೆ 4ರವರೆಗೂ ಕಾಯುತ್ತೇವೆ ಎಂದು ತಿಳಿಸಿದ್ದಾರೆ.

ಗಡಿಯೊಳಗೆ ಪೊಲೀಸರು ಬಿಡುತ್ತಿಲ್ಲ

ಗಡಿಯೊಳಗೆ ಪೊಲೀಸರು ಬಿಡುತ್ತಿಲ್ಲ

"ನಾವು ಮೇ 19 ರ ಬೆಳಿಗ್ಗೆಯಿಂದ ಬಸ್ಸುಗಳೊಂದಿಗೆ ಉತ್ತರ ಪ್ರದೇಶ ಗಡಿಯಲ್ಲಿದ್ದೇವೆ ಮತ್ತು ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಾವು ನೋಯ್ಡಾ ಮತ್ತು ಗಾಜಿಯಾಬಾದ್ ಕಡೆಗೆ ಹೋಗಲು ಪ್ರಯತ್ನಿಸಿದಾಗ ಉತ್ತರ ಪ್ರದೇಶ ಪೊಲೀಸರು ಆಗ್ರಾ ಗಡಿಯಲ್ಲಿ ನಮ್ಮನ್ನು ತಡೆದರು. ನಾವು ಮೇ 20, ಸಂಜೆ 4 ರವರೆಗೆ ಇಲ್ಲಿಯೇ ಇರುತ್ತೇವೆ" ಎಂದು ಪ್ರಿಯಾಂಕಾ ಗಾಂಧಿಯ ಕಾರ್ಯದರ್ಶಿ ಸಂದೀಪ್ ಸಿಂಗ್ ಮಂಗಳವಾರ ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನಿಶ್ ಅವಸ್ಥಿಗೆ ಪತ್ರ ಬರೆದಿದ್ದಾರೆ.

ವಲಸೆ ಕಾರ್ಮಿಕರ ಸಂಕಷ್ಟ: ಪ್ರಿಯಾಂಕಾ ಗಾಂಧಿ ಮನವಿಗೆ 'ಓಕೆ' ಎಂದ ಸಿಎಂ ಯೋಗಿವಲಸೆ ಕಾರ್ಮಿಕರ ಸಂಕಷ್ಟ: ಪ್ರಿಯಾಂಕಾ ಗಾಂಧಿ ಮನವಿಗೆ 'ಓಕೆ' ಎಂದ ಸಿಎಂ ಯೋಗಿ

ಕಾಂಗ್ರೆಸ್ ಅಧ್ಯಕ್ಷನನ್ನು ಎಳೆದೊಯ್ದ ಪೊಲೀಸರು

ಕಾಂಗ್ರೆಸ್ ಅಧ್ಯಕ್ಷನನ್ನು ಎಳೆದೊಯ್ದ ಪೊಲೀಸರು

ಬಸ್‌ಗಳಿಗೆ ಅನುಮತಿ ನೀಡಿ ಎಂದು ಗಡಿಭಾಗದಲ್ಲಿ ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಮತ್ತು ಕಾರ್ಯಕರ್ತರು ಧರಣಿ ಮಾಡಿದರು. ಈ ವೇಳೆ ಪೊಲೀಸರು ಅವರನ್ನು ಎಳೆದೊಯ್ದು ಘಟನೆಯೂ ನಡೆಯಿತು. ಈ ಬಗ್ಗೆಯೂ ಪ್ರಿಯಾಂಕಾ ಗಾಂಧಿಯ ಕಾರ್ಯದರ್ಶಿ ಸಂದೀಪ್ ಸಿಂಗ್ ಖಂಡಿಸಿದ್ದಾರೆ. ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಟೀಕಿಸಿದ್ದಾರೆ.

ವಾಹನಗಳಿಗೆ ಪರವಾನಗಿ ಇಲ್ಲ

ವಾಹನಗಳಿಗೆ ಪರವಾನಗಿ ಇಲ್ಲ

''ಉತ್ತರಪ್ರದೇಶ ಹಾಗೂ ರಾಜಸ್ಥಾನ ಗಡಿಭಾಗದಲ್ಲಿ ಸಿಲುಕಿಕೊಂಡಿರುವ ವಲಸಿಗರನ್ನು ತಮ್ಮ ಮನೆಗಳಿಗೆ ಕರೆದೊಯ್ಯಲು ಕಾಂಗ್ರೆಸ್ ಪಕ್ಷ ನಿಯೋಜಿಸಿರುವ ಬಸ್‌ಗಳಿಗೆ ಯಾವುದೇ ಪರವಾನಗಿ ಇರಲಿಲ್ಲ, ಪ್ರಸ್ತುತ ಅಂತರರಾಜ್ಯ ಸಂಚಾರಕ್ಕೆ ಅನುಮತಿ ಬೇಕಾಗಿದೆ. ಹಾಗಾಗಿ ತಡೆಯಲಾಗಿದೆ'' ಎಂದು ಉತ್ತರ ಪ್ರದೇಶದ ಪೊಲೀಸರು ಹೇಳುತ್ತಿದ್ದಾರೆ.

ಲಲ್ಲು ಅವರನ್ನು ಬಂಧಿಸಿಲ್ಲ

ಲಲ್ಲು ಅವರನ್ನು ಬಂಧಿಸಿಲ್ಲ

ಗಡಿಭಾಗದಲ್ಲಿ ಧರಣಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷರನ್ನು ಬಂಧಿಸಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. "ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಅಂತರ ರಾಜ್ಯ ಬಸ್ ಸಂಚಾರ ಅನುಮತಿಗಾಗಿ ಅರ್ಜಿ ಸಲ್ಲಿಸಬೇಕಾಗಿದೆ. ನಂತರ ಪಾಸ್ ನೀಡಲಾಗುತ್ತದೆ. ಆದರೆ, ಅವರು ಅರ್ಜಿ ಸಲ್ಲಿಸಿರಲಿಲ್ಲ ಮತ್ತು ಪಾಸ್ ಪಡೆದಿಲ್ಲ. ಆದ್ದರಿಂದ ಅವರಿಗೆ ಪ್ರವೇಶಿಸಲು ಅವಕಾಶವಿರಲಿಲ್ಲ'' ಎಂದು ಆಗ್ರಾ, ಎಸ್ಪಿ ಗ್ರಾಮೀಣ (ಪಶ್ಚಿಮ) ರವಿ ಕುಮಾರ್ ತಿಳಿಸಿದ್ದಾರೆ.

English summary
Uttar Pradesh Congress president ajay kumar lallu protested at Agra border to seeking permission for buses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X