• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇನ್ನು ನಾಲ್ಕೇ ನಾಲ್ಕು ದಿನ: ಉತ್ತರ ಪ್ರದೇಶ ಸಿಎಂ ಯೋಗಿಗೆ ಕೊಲೆ ಬೆದರಿಕೆ

|

ಲಕ್ನೋ, ಮೇ 04: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಕೊಲೆ ಬೆದರಿಕೆ ಸಂದೇಶವೊಂದು ಬಂದಿದೆ.

ಕೇವಲ ನಾಲ್ಕು ದಿನ ಮಾತ್ರ ಉಳಿದಿವೆ ಎಂದು ಎಚ್ಚರಿಕೆ ನೀಡಿದ್ದಾರೆ. ಉತ್ತರ ಪ್ರದೇಶ ಪೊಲೀಸರ ವಾಟ್ಸಾಪ್ ತುರ್ತು ಡಯಲ್ ಸಂಖ್ಯೆ 112ರಲ್ಲಿ ಬೆದರಿಕೆ ಬಂದಿದೆ.

18 ವರ್ಷ ಮೇಲ್ಪಟ್ಟವರೆಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ: ಯೋಗಿ18 ವರ್ಷ ಮೇಲ್ಪಟ್ಟವರೆಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ: ಯೋಗಿ

ವ್ಯಕ್ತಿಯನ್ನು ಪತ್ತೆ ಹಚ್ಚಲು ಪೊಲೀಸರು ಕಣ್ಗಾವಲು ತಂಡವನ್ನು ನಿಯೋಜಿಸಿದ್ದಾರೆ. ವ್ಯಕ್ತಿಯನ್ನು ಬಂಧಿಸಲು ತಂಡವನ್ನು ರಚಿಸಲಾಗಿದೆ. ಏಪ್ರಿಲ್ 29ರ ಸಂಜೆ ಬೆದರಿಕೆಗಳನ್ನು ಸ್ವೀಕರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯಾವ ಸಂಖ್ಯೆಯಿಂದ ಬೆದರಿಕೆ ಬಂದಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಯುಪಿ ಸಿಎಂಗೆ ಬೆದರಿಕೆ ಕರೆ ಬಂದಿರುವುದು ಇದೇ ಮೊದಲಲ್ಲ, ಕಳೆದ ವರ್ಷ ಸೆಪ್ಟೆಂಬರ್, ನವೆಂಬರ್ ಹಾಗೂ ಡೆಸೆಂಬರ್‌ನಲ್ಲಿ ಬೆದರಿಕೆ ಕರೆಗಳು ಬಂದಿತ್ತು.

ನವೆಂಬರ್ ತಿಂಗಳಲ್ಲಿ 15 ವರ್ಷದ ಬಾಲಕ ಉತ್ತರ ಪ್ರದೇಶ ಪೊಲೀಸರ 112 ಸಹಾಯವಾಣಿಯಲ್ಲಿ ಸಂದೇಶ ಕಳುಹಿಸಿದ್ದ. ಪೊಲೀಸರು ಮೊಬೈಲ್ ಸಂಖ್ಯೆಯನ್ನು ಪತ್ತೆ ಹಚ್ಚಿ ಬಾಲಕನನ್ನು ಬಂಧಿಸಿ ಬಾಲಾಪರಾಧಿ ಜೈಲಿಗೆ ಕಳುಹಿಸಿದ್ದರು.

ಉತ್ತರ ಪ್ರದೇಶ ಮುಖ್ಯಮಂತ್ರಿಗೆ 2017 ರಲ್ಲಿ Z+, VVIP ಸಶಸ್ತ್ರ ಭದ್ರತಾ ಸುರಕ್ಷತೆ ನೀಡಲಾಗಿತ್ತು. ಮುಖ್ಯಮಂತ್ರಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

English summary
Uttar Pradesh Chief Minister Yogi Adityanath has reportedly received death threats from an unknown person, who warned that he has 'only four days left'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X