• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುಪಿ: ಎಸ್‌ಪಿ-ಬಿಜೆಪಿಯಿಂದ ಜಾತಿ ರಾಜಕಾರಣ-ಮಾಯಾವತಿ ಎಚ್ಚರಿಕೆ

|
Google Oneindia Kannada News

ಲಕ್ನೋ ಜನವರಿ 28: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಬಿಜಿಯಾಗಿವೆ. ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸುತ್ತಿವೆ. ಇದೇ ವೇಳೆ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳ ಸುತ್ತು ಕೂಡ ನಡೆಯುತ್ತಿದೆ. ಈ ನಡುವೆ ಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರು ಬಿಜೆಪಿ ಮತ್ತು ಎಸ್‌ಪಿ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಯುಪಿ ಚುನಾವಣೆಗೆ ದ್ವೇಷದ ಬಣ್ಣ ನೀಡಲು ಇಬ್ಬರೂ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾಯಾವತಿ ಅವರು ಶುಕ್ರವಾರ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ, 'ಯುಪಿ ವಿಧಾನಸಭಾ ಚುನಾವಣೆಯಲ್ಲಿ ಧರ್ಮ ಮತ್ತು ಜಾತಿ ರಾಜಕೀಯದ ಪ್ರಾಬಲ್ಯ ಮತ್ತು ಮಾಧ್ಯಮಗಳಲ್ಲಿ ಅಂತಹ ಸುದ್ದಿಗಳು ತುಂಬಿವೆ. ಇದೆಲ್ಲವೂ ಎಸ್‌ಪಿ ಮತ್ತು ಬಿಜೆಪಿಯ ಆಂತರಿಕ ಘರ್ಷಣೆಯಿಂದಾಗಿ ನಡೆಯುತ್ತಿದೆ. ಅವರು ಚುನಾವಣೆಗೆ ಹಿಂದೂ-ಮುಸ್ಲಿಂ ಮತ್ತು ಜಾತಿ ದ್ವೇಷದ ಬಣ್ಣವನ್ನು ನೀಡಲು ಬಯಸುತ್ತಾರೆ. ಜನರೇ ಜಾಗರೂಕರಾಗಿರಿ' ಎಂದರು.

53 ಅಭ್ಯರ್ಥಿಗಳ ಪಟ್ಟಿ

53 ಅಭ್ಯರ್ಥಿಗಳ ಪಟ್ಟಿ

ಇದಕ್ಕೂ ಮುನ್ನ ಬಿಎಸ್‌ಪಿ ಯುಪಿ ಚುನಾವಣೆಗೆ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 53 ಅಭ್ಯರ್ಥಿಗಳ ಹೆಸರನ್ನು ಸೇರಿಸಲಾಗಿದೆ. ಇದರೊಂದಿಗೆ ಮಾಯಾವತಿ ನಾಲ್ಕನೇ ಹಂತದ ಬಹುತೇಕ ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ಇದಕ್ಕೂ ಮುನ್ನ ಮಾಯಾವತಿ ಅವರು ಗುರುವಾರ 59 ಹೊಸ ಟಿಕೆಟ್‌ಗಳನ್ನು ಘೋಷಿಸಿದ್ದು, ಅದರಲ್ಲಿ ಇಬ್ಬರು ಹಳೆಯ ಅಭ್ಯರ್ಥಿಗಳನ್ನು ಬದಲಿಸಿ ಇಬ್ಬರು ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ.

ಬಿಎಸ್‌ಪಿಯ ಚುನಾವಣಾ ಪ್ರಚಾರ

ಬಿಎಸ್‌ಪಿಯ ಚುನಾವಣಾ ಪ್ರಚಾರ

ಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರು ಫೆಬ್ರವರಿ 2 ರಂದು ಆಗ್ರಾದಲ್ಲಿ ರ್‍ಯಾಲಿ ಮಾಡುವ ಮೂಲಕ ಬಿಎಸ್‌ಪಿಯ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಲಿದ್ದಾರೆ. ಜನವರಿ 25 ರಂದು ಈ ಮಾಹಿತಿಯನ್ನು ನೀಡುತ್ತಾ, ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಅವರು ಕು. ಮಾಯಾವತಿ ಕೋವಿಡ್ ನಿಯಮಗಳನ್ನು ಅನುಸರಿಸಿ ಆಗ್ರಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮುಂಬರುವ ಸಾರ್ವಜನಿಕ ಸಭೆಗಳ ಸಮಯ, ಸ್ಥಳ ಮತ್ತು ಮಾಹಿತಿಯನ್ನು ಮಾಧ್ಯಮ ಬಂಧುಗಳಿಗೆ ಶೀಘ್ರದಲ್ಲೇ ಲಭ್ಯವಾಗುವಂತೆ ಮಾಡಲಾಗುವುದು ಎಂದರು.

ಮಾಯಾವತಿ ಭರವಸೆ

ಮಾಯಾವತಿ ಭರವಸೆ

ಉತ್ತರ ಪ್ರದೇಶದಲ್ಲಿ ಜನರು ಬಿಎಸ್‌ಪಿಯ ಹಿಂದಿನ ಸಾಧನೆಯ ಆಧಾರದ ಮೇಲೆ ಮತ ಚಲಾಯಿಸಿ ಅಧಿಕಾರಕ್ಕೆ ತರುತ್ತಾರೆ. ಈ ಬಾರಿ ರಾಜ್ಯದಲ್ಲಿ ತಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮಾಯಾವತಿ ವಿಶ್ವಾಸ ವ್ಯಕ್ತಪಡಿಸಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರು ನಮ್ಮ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುತ್ತಾರೆ. ಈ ಬಾರಿ ಅಧಿಕಾರಕ್ಕೆ ಬಂದ ನಂತರ ತನ್ನ ಹಿಂದಿನ ಆಡಳಿತದಂತೆಯೇ ಎಲ್ಲಾ ವಿಷಯಗಳಲ್ಲಿ ಸರ್ಕಾರವನ್ನು ಮುನ್ನೆಡೆಸುವ ಬಗ್ಗೆ ಭರವಸೆ ನೀಡಲು ಬಯಸುತ್ತೇನೆ ಎಂದು ಮಾಯಾವತಿ ಹೇಳಿದ್ದಾರೆ.

ಮಾರ್ಚ್ 10ಕ್ಕೆ ಮತಎಣಿಕೆ

ಮಾರ್ಚ್ 10ಕ್ಕೆ ಮತಎಣಿಕೆ

ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 11 ಜಿಲ್ಲೆಗಳಲ್ಲಿ ಒಟ್ಟು 58 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 10 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

English summary
BSP supremo Mayawati has accused the BJP and the SP of colluding, accusing both of trying to give a hateful color to the UP elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X