ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಲವ್ ಜಿಹಾದ್ ' ವಿರುದ್ಧ ಉತ್ತರಪ್ರದೇಶದಲ್ಲಿ ಕಠಿಣ ಕಾನೂನು

|
Google Oneindia Kannada News

ಲಕ್ನೋ, ನ. 24: ಕಾನೂನು ರಹಿತ ಮತಾಂತರ, ಬಲವಂತವಾಗಿ ಮತಾಂತರ ಅಥವಾ ಮದುವೆ ಉದ್ದೇಶದಿಂದ ಮತಾಂತರ ಮಾಡುವ 'ಲವ್ ಜಿಹಾದ್ ' ವಿರುದ್ಧ ಕಠಿಣ ಕಾನೂನು ರಚನೆ ಕುರಿತು ಯೋಗಿ ಆದಿತ್ಯನಾಥ್ ಸರ್ಕಾರ ಪ್ರಮುಖ ನಿರ್ಧಾರ ಕೈಗೊಂಡಿದೆ.

ಬಲವಂತವಾಗಿ ಮತಾಂತರದ ವಿರುದ್ಧ ಸುಗ್ರೀವಾಜ್ಞೆ ಹೊರಡಿಸುವ ಕಾನೂನು ರೂಪಿಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಹೇಳಿದರು.

UP Cabinet decides to introduce an ordinance against unlawful religious conversions

'ಲವ್ ಜಿಹಾದ್' ವಿರುದ್ಧ ಮಧ್ಯಪ್ರದೇಶದಲ್ಲಿ ಕಾನೂನು ಜಾರಿ 'ಲವ್ ಜಿಹಾದ್' ವಿರುದ್ಧ ಮಧ್ಯಪ್ರದೇಶದಲ್ಲಿ ಕಾನೂನು ಜಾರಿ

ಕಾನೂನು ಮೀರಿ ಮತಾಂತರಕ್ಕೆ ಮುಂದಾದವರಿಗೆ 1 ರಿಂದ 5 ವರ್ಷ ಜೈಲುಶಿಕ್ಷೆ, 15,000 ರು ದಂಡ ವಿಧಿಸಲಾಗುವುದು. ಅಪ್ರಾಪ್ತರು ಹಾಗೂ ಎಸ್ ಸಿ, ಎಸ್ಟಿ ಸಮುದಾಯದ ಮಹಿಳೆಯರನ್ನು ಬಲವಂತವಾಗಿ ಮತಾಂತರ ಮಾಡಿದರೆ 3 ರಿಂದ 10 ವರ್ಷ ಜೈಲುಶಿಕ್ಷೆ ಹಾಗೂ 25,000 ರು ದಂಡ ವಿಧಿಸಲಾಗುವುದು ಎಂದು ಸಿದ್ಧಾರ್ಥ್ ನಾಥ್ ಸಿಂಗ್ ತಿಳಿಸಿದರು.

ಉತ್ತರ ಪ್ರದೇಶದ ಗೃಹ ಇಲಾಖೆಯು ಬಲವಂತ ಮತಾಂತರ ಕುರಿತಂತೆ ಕಾನೂನು ಇಲಾಖೆಗೆ ಪ್ರಸ್ತಾವನೆ ಕಳುಹಿಸಿತ್ತು. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿದ್ಧಾರ್ಥ್ ನಾಥ್ ಸಿಂಗ್ ಹೇಳಿದರು.

English summary
UP Cabinet decides to introduce an ordinance against unlawful religious conversions said Siddharth Nath Singh, State Cabinet Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X