ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ ಬಜೆಟ್ 2022: 5 ವರ್ಷಗಳಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿ

|
Google Oneindia Kannada News

ಲಕ್ನೋ ಮೇ 26: ವಿಧಾನಸಭೆಯಲ್ಲಿಂದು 2022ರ ಯುಪಿ ಬಜೆಟ್ ಮಂಡನೆಯಾಗಿದ್ದು ಹಲವಾರು ಕ್ಷೇತ್ರಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ. ಅದರಲ್ಲೂ ಈ ಬಜೆಟ್‌ನಲ್ಲಿ ನಿರುದ್ಯೋಗವನ್ನು ನಿವಾರಿಸಲು ಯುಪಿ ಸರ್ಕಾರ ಮುಂದಾಗಿದೆ. ಈ ಮೂಲಕ ಯುಪಿ ಸರ್ಕಾರ 5 ವರ್ಷಗಳಲ್ಲಿ 5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ.

ಬಜೆಟ್ ಮಂಡನೆ ಬಳಿಕ ಮಾತನಾಡಿದ ಯುಪಿ ಹಣಕಾಸು ಸಚಿವರು ಹೂಡಿಕೆದಾರರ ಶೃಂಗಸಭೆಯಿಂದ 5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ ಎಂದು ಹೇಳಿದ್ದಾರೆ. 2018 ರಲ್ಲಿ ಆಯೋಜಿಸಲಾದ ಶೃಂಗಸಭೆಯು ಸುಮಾರು 4.68 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯ ಪ್ರಸ್ತಾಪಗಳನ್ನು ನೀಡಿದೆ. ಅದರಲ್ಲಿ 3 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯ ಪ್ರಸ್ತಾಪಗಳ ಅನುಷ್ಠಾನವು ವಿವಿಧ ಹಂತಗಳಲ್ಲಿದೆ ಎಂದು ಹಣಕಾಸು ಸಚಿವರು ಹೇಳಿದರು.

ಜೂನ್ 23ಕ್ಕೆ ಮೂರು ಲೋಕಸಭೆ, 7 ವಿಧಾನಸಭೆ ಸ್ಥಾನಕ್ಕೆ ಚುನಾವಣೆಜೂನ್ 23ಕ್ಕೆ ಮೂರು ಲೋಕಸಭೆ, 7 ವಿಧಾನಸಭೆ ಸ್ಥಾನಕ್ಕೆ ಚುನಾವಣೆ

5 ವರ್ಷಗಳಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿ

5 ವರ್ಷಗಳಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿ

ಈ ಹೂಡಿಕೆಯಿಂದ 5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಮುಂದಿನ ವಾರ ನಡೆಯುವ ಮತ್ತೊಂದು ಶೃಂಗಸಭೆಯಲ್ಲಿ ಇಂತಹ ಹೆಚ್ಚಿನ ಪ್ರಸ್ತಾಪಗಳನ್ನು ನಿರೀಕ್ಷಿಸಲಾಗಿದೆ ಎಂದಿದ್ದಾರೆ. ಜೊತೆಗೆ ಉತ್ತರ ಪ್ರದೇಶದಲ್ಲಿ ಐದು ವರ್ಷಗಳಲ್ಲಿ 10,000 ಸ್ಟಾರ್ಟಪ್‌ಗಳು, 100 ಇನ್‌ಕ್ಯುಬೇಟರ್‌ಗಳನ್ನು ಸ್ಥಾಪಿಸಲಾಗುವುದು. ಜೊತೆಗೆ ಯುವಜನರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉದ್ಯಮಶೀಲತೆ ಮತ್ತು ಆವಿಷ್ಕಾರವನ್ನು ಉತ್ತೇಜಿಸಲು, ಹೊಸ ಯುಪಿ ಸ್ಟಾರ್ಟ್‌ಅಪ್ ನೀತಿ-2020 ರ ಅಡಿಯಲ್ಲಿ, 5 ವರ್ಷಗಳಲ್ಲಿ ಒಟ್ಟು 100 ಇನ್‌ಕ್ಯುಬೇಟರ್‌ಗಳನ್ನು ಸ್ಥಾಪಿಸುವ ಗುರಿಯನ್ನು ನಿಗದಿಪಡಿಸಲಾಗಿದೆ ಎಂದಿದ್ದಾರೆ.ಚುನಾವಣೆಗೂ ಮುನ್ನ ಲೋಕ ಕಲ್ಯಾಣ ಸಂಕಲ್ಪ ಪತ್ರದಲ್ಲಿ ಹೊರಡಿಸಲಾಗಿದ್ದ 130 ಘೋಷಣೆಗಳಲ್ಲಿ 97 ನಿರ್ಣಯಗಳಿಗೆ ಹಸಿರು ನಿಶಾನೆ ಸಿಕ್ಕಿತು.

ಜೂನ್ 21 ರಂದು 'ಶ್ರೀ ರಾಮಾಯಣ ಯಾತ್ರೆ' ರೈಲು ಪ್ರಾರಂಭಜೂನ್ 21 ರಂದು 'ಶ್ರೀ ರಾಮಾಯಣ ಯಾತ್ರೆ' ರೈಲು ಪ್ರಾರಂಭ

130 ಘೋಷಣೆಗಳಲ್ಲಿ 97 ನಿರ್ಣಯಗಳಿಗೆ ಹಸಿರು ನಿಶಾನೆ

130 ಘೋಷಣೆಗಳಲ್ಲಿ 97 ನಿರ್ಣಯಗಳಿಗೆ ಹಸಿರು ನಿಶಾನೆ

ವಿಧಾನಸಭೆಯಲ್ಲಿ ಯುಪಿ ಬಜೆಟ್ ಮಂಡಿಸಿದ ನಂತರ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ, ರಾಜ್ಯದ 25 ಕೋಟಿ ಜನರ ಭಾವನೆಗಳು ಮತ್ತು ರಾಜ್ಯದ ಒಟ್ಟಾರೆ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಯುಪಿ ಬಜೆಟ್ 2022-23 ಅನ್ನು ಸಿದ್ಧಪಡಿಸಲಾಗಿದೆ ಎಂದು ಸಿಎಂ ಯೋಗಿ ಹೇಳಿದರು. ಜೊತೆಗೆ ಚುನಾವಣೆಗೂ ಮುನ್ನ ಲೋಕ ಕಲ್ಯಾಣ ಸಂಕಲ್ಪ ಪತ್ರ ಹೊರಡಿಸಲಾಗಿತ್ತು. ಇದರಲ್ಲಿ 130 ಘೋಷಣೆಗಳನ್ನು ಮಾಡಲಾಗಿದೆ. ಈ 130 ನಿರ್ಣಯಗಳಲ್ಲಿ 97 ನಿರ್ಣಯಗಳಿಗೆ 54 ಸಾವಿರದ 883 ಕೋಟಿ ರೂ. ಮೀಸಲಿಡಲಾಗಿದೆ ಎಂದಿದ್ದಾರೆ.

ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಬಜೆಟ್

ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಬಜೆಟ್

ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಸಿದ್ಧಪಡಿಸಲಾಗಿದ್ದ 'ಲೋಕ ಕಲ್ಯಾಣ ಸಂಕಲ್ಪ ಪತ್ರ'ದ ಪ್ರಕಾರ, ಈ ದಿನದ ಬಜೆಟ್ ದೇಶದ ಅತಿದೊಡ್ಡ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದ ಆಶಯಗಳನ್ನು ಪೂರೈಸುತ್ತದೆ ಮತ್ತು ಸಮಗ್ರ ಅಭಿವೃದ್ಧಿಯ ಗುರಿಯನ್ನು ಮುಟ್ಟಲು ಸಹಾಯಕವಾಗಿದೆ ಎಂದರು. ಈ ಬಜೆಟ್ ಉತ್ತರ ಪ್ರದೇಶ ಸರ್ಕಾರದ ಐದು ವರ್ಷಗಳ ದೂರದೃಷ್ಟಿಯಾಗಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಉಜ್ವಲ ಭವಿಷ್ಯಕ್ಕೆ ಮಾರ್ಗಸೂಚಿಯನ್ನೂ ಸಿದ್ಧಪಡಿಸಲಿದೆ ಎಂದಿದ್ದಾರೆ.

ಉಜ್ವಲ ಯೋಜನೆ ಅಡಿ ವರ್ಷಕ್ಕೆ 2 ಉಚಿತ ಎಲ್‌ಪಿಜಿ ಸಿಲಿಂಡರ್‌

ಉಜ್ವಲ ಯೋಜನೆ ಅಡಿ ವರ್ಷಕ್ಕೆ 2 ಉಚಿತ ಎಲ್‌ಪಿಜಿ ಸಿಲಿಂಡರ್‌

2022ರ ವಿಧಾನಸಭಾ ಚುನಾವಣೆಗೂ ಮುನ್ನ ಲೋಕಕಲ್ಯಾಣ ಪತ್ರ ಹೊರಡಿಸಲಾಗಿತ್ತು ಈ ಲೋಕ ಕಲ್ಯಾಣ ಸಂಕಲ್ಪ ಪತ್ರದಲ್ಲಿ ಒಟ್ಟು 130 ಪ್ರಕಟಣೆಗಳು ಇದ್ದವು. ಈ 130 ನಿರ್ಣಯಗಳ ಪೈಕಿ ಈಗಾಗಲೇ 97 ನಿರ್ಣಯಗಳಿಗೆ ಬಜೆಟ್‌ನಲ್ಲಿ ಸ್ಥಾನ ನೀಡಲಾಗಿದೆ ಎಂದು ಸಿಎಂ ಯೋಗಿ ಹೇಳಿದ್ದಾರೆ. ಈ ಘೋಷಣೆಗಳನ್ನು ಈಡೇರಿಸಲು 54 ಸಾವಿರದ 883 ಕೋಟಿ ರೂ. ಮೀಸಲಿಡಲಾಗಿದೆ. 130 ನಿರ್ಣಯಗಳಲ್ಲಿ ಕೆಲವು ಮೊದಲಿನವು ಮತ್ತು ಕೆಲವು ಈಗ ಹೊಸ ನಿರ್ಣಯಗಳಾಗಿವೆ ಎಂದು ಹೇಳಿದರು. ಅದರಲ್ಲಿ 97 ನಿರ್ಣಯಗಳಿಗೆ ಈ ಬಾರಿಯ ಬಜೆಟ್ ನಲ್ಲಿ ಸ್ಥಾನ ನೀಡಲಾಗಿದ್ದು, ಈ ಪೈಕಿ 44 ನಿರ್ಣಯಗಳು ಹೊಸದಾಗಿವೆ. ಉಜ್ವಲ ಯೋಜನೆಯ ಫಲಾನುಭವಿಗಳ ಕುಟುಂಬಗಳಿಗೆ ಒಂದು ವರ್ಷದಲ್ಲಿ ಎರಡು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡಲಾಗುವುದು ಎಂಬುದು ಇವುಗಳಲ್ಲಿನ ಪ್ರಮುಖ ಘೋಷಣೆಗಳಾಗಿವೆ.

ಬಡ ಮಹಿಳೆಯರ ಮದುವೆಗೆ ಬಜೆಟ್‌ನಲ್ಲಿ ಅನುದಾನ

ಬಡ ಮಹಿಳೆಯರ ಮದುವೆಗೆ ಬಜೆಟ್‌ನಲ್ಲಿ ಅನುದಾನ

ಅನ್ನದಾತ ರೈತರಿಗಾಗಿ ಹಣ ಹೊಂದಿಸಲಾಗಿದೆ ಎಂದು ಸಿಎಂ ಹೇಳಿದರು. ಲೋಕಕಲ್ಯಾಣ ಸಂಕಲ್ಪ ಪತ್ರದಲ್ಲಿ ರೈತರಿಗೆ ನೀರಾವರಿಗಾಗಿ ಉಚಿತವಾಗಿ ಸೋಲಾರ್ ಪ್ಯಾನೆಲ್ ನೀಡುವ ಕೆಲಸ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಅವರು ನೀಡಿದ ಪ್ರಸ್ತಾವನೆಗೆ ಅನುಗುಣವಾಗಿ ಎಂಎಸ್‌ಪಿ ನೀಡಲಾಗುವುದು ಎಂದು ಹೇಳಿದರು. ಇಲ್ಲಿಯವರೆಗೂ ನಿರ್ಲಕ್ಷಿಸಲಾಗಿದ್ದ ಸಂತರಿಗೆ ಸರ್ಕಾರ ಮಣೆ ಹಾಕಲು ಹೊರಟಿದೆ ಎಂದು ಸಿಎಂ ಹೇಳಿದರು.

ಬಡ ಮಹಿಳೆಯರ ಮದುವೆಗೆ ಬಜೆಟ್‌ನಲ್ಲಿ ಅನುದಾನ ನೀಡಲಾಗಿದೆ. ಯುವಕರಿಗೆ ಅಭ್ಯುದಯ ಕೋಚಿಂಗ್ ವ್ಯವಸ್ಥೆ ಮಾಡುವ ಕೆಲಸ ನಡೆದಿದೆ. ಸಕ್ಕರೆ ಕಾರ್ಖಾನೆ ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಕೆಲಸ ಮಾಡಿದೆ. ಮಹಾಮಾರಿಯಲ್ಲೂ ಸಕ್ಕರೆ ಕಾರ್ಖಾನೆಗಳು ಮುಚ್ಚಿರಲಿಲ್ಲ. ಈ ಬಾರಿಯ ಬಜೆಟ್‌ನಲ್ಲಿಯೂ ವಿಶೇಷ ಕಾಳಜಿ ವಹಿಸಲಾಗಿದೆ. ಪ್ರಯಾಗ್ರಾಜ್ ಕುಂಭವು ವಿಭಿನ್ನ ಗುರುತನ್ನು ನೀಡಿದೆ. 2025ರಲ್ಲಿ ನಡೆಯಲಿರುವ ಮಹಾಕುಂಭಕ್ಕೆ ಈಗಾಗಲೇ ಸಿದ್ಧತೆ ನಡೆದಿದೆ. ಬುಡೇಲಿ, ಭೋಜ್‌ಪುರಿ ಮತ್ತಿತರ ಭಾಷೆಗಳಿಗೆ ಕ್ರಮಕೈಗೊಳ್ಳಲಾಗಿದೆ. ಕಾಶಿಗೆ ಬರುವ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ರೋಪ್ ವೇ ಹಾಗೂ ಮೆಟ್ರೋ ಯೋಜನೆಗೆ ಹಣ ನೀಡಲಾಗಿದೆ ಎಂದು ಸಿಎಂ ಹೇಳಿದರು. ಜೊತೆಗೆ ಸರ್ಕಾರ ಬಾಬು ಜಿ ಕಲ್ಯಾಣ್ ಸಿಂಗ್ ಗ್ರಾಮ ಉನ್ನತಿ ಯೋಜನೆ ಆರಂಭಿಸಲಿದೆ. ಇದಕ್ಕಾಗಿ ಹಣದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

English summary
The UP Budget of 2022 in the Assembly has given priority to several sectors. In this budget, the UP government has come forward to alleviate unemployment. The UP government aims to create 5 lakh jobs in 5 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X