ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ ಪರೀಕ್ಷೆ, ಲಸಿಕೆ ನೀಡಿಕೆಯಲ್ಲಿ ಯುಪಿ ಟಾಪ್‌: ಆದಿತ್ಯನಾಥ್‌

|
Google Oneindia Kannada News

ಲಕ್ನೋ, ನವೆಂಬರ್‌ 09: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತನ್ನ ಸರ್ಕಾರವನ್ನು ತಾನೇ ಶ್ಲಾಘಿಸಿದ್ದಾರೆ. ಕೊರೊನಾ ವೈರಸ್‌ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರವು ಉತ್ತಮವಾಗಿ ನಿರ್ವಹಣೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಕೊರೊನಾ ನಿರ್ವಹಣೆ, ಕೋವಿಡ್‌ ಪರೀಕ್ಷೆ ಹಾಗೂ ಕೋವಿಡ್‌ ಲಸಿಕೆ ನೀಡಿಕೆ ವಿಚಾರದಲ್ಲಿ ಉತ್ತರ ಪ್ರದೇಶದ ರಾಜ್ಯವು ಟಾಪ್‌ನಲ್ಲಿ ಇದೆ," ಎಂದು ಯೋಗಿ ಆದಿತ್ಯನಾಥ್‌ ಹೇಳಿಕೊಂಡಿದ್ದಾರೆ.

ವಿಡಿಯೋ ಕಾನ್ಫೆರೆನ್ಸಿಂಗ್‌ ಮೂಲಕ ವಿಭಾಗೀಯ ಅಥವಾ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, "ನಮ್ಮ ಸಾಮೂಹಿಕ ಪ್ರಯತ್ನದ ಫಲವಾಗಿ ಉತ್ತರ ಪ್ರದೇಶ ರಾಜ್ಯವು ಇಂದು ಕೊರೊನಾ ವೈರಸ್‌ ಸೋಂಕು ನಿರ್ವಹಣೆ ವಿಚಾರದಲ್ಲಿ ಜಾಗತಿಕವಾಗಿ ಮೆಚ್ಚುಗೆಯನ್ನು ಪಡೆದಿದೆ. ಕೋವಿಡ್ ಪರೀಕ್ಷೆ ಹಾಗೂ ಕೋವಿಡ್‌ ಲಸಿಕೆ ವಿಚಾರದಲ್ಲಿ ಉತ್ತರ ಪ್ರದೇಶ ರಾಜ್ಯವು ಭಾರತದಲ್ಲಿ ಅಗ್ರ ಸ್ಥಾನದಲ್ಲಿ ಇದೆ," ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ.

ಯೋಗಿ ಸರ್ಕಾರಕ್ಕೆ ಆಘಾತ: ಕೆಟ್ಟ ಆಡಳಿತ ಹೊಂದಿರುವ ರಾಜ್ಯಗಳಲ್ಲಿ ಯುಪಿ ನಂ.1ಯೋಗಿ ಸರ್ಕಾರಕ್ಕೆ ಆಘಾತ: ಕೆಟ್ಟ ಆಡಳಿತ ಹೊಂದಿರುವ ರಾಜ್ಯಗಳಲ್ಲಿ ಯುಪಿ ನಂ.1

ಈ ವರ್ಷದ ನವೆಂಬರ್ ಅಂತ್ಯದೊಳಗೆ 100 ಪ್ರತಿಶತದಷ್ಟು ಅರ್ಹ ಕೋವಿಡ್ ಲಸಿಕೆ ಫಲಾನುಭವಿಗಳಿಗೆ ಕೋವಿಡ್‌ ಲಸಿಕೆಯ ಪ್ರಥಮ ಡೋಸ್‌ ಅನ್ನು ನೀಡುವ ಗುರಿಯನ್ನು ರಾಜ್ಯ ಸರ್ಕಾರವು ಹೊಂದಿದೆ. ಈ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಪ್ರತಿ ದಿನವು 25 ರಿಂದ 30 ಲಕ್ಷ ಕೋವಿಡ್‌ ಲಸಿಕೆಯನ್ನು ನೀಡಲಾಗುತ್ತಿದೆ. ಎಲ್ಲಾ ಜಿಲ್ಲೆಗಳಲ್ಲಿ ರಾತ್ರಿ ಹತ್ತುಗಂಟೆಯವರೆಗೂ ಕೋವಿಡ್ ಲಸಿಕೆ ನೀಡಿಕೆ ಕಾರ್ಯವು ನಡೆಯುಬೇಕು. ಈ ಕೋವಿಡ್ ಲಸಿಕೆಯ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು," ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೂಚನೆ ನೀಡಿದ್ದಾರೆ.

UP At Top Position In India For COVID-19 Testing, Vaccination says Yogi Adityanath

"ಈ ಗುರಿ ತಲುಪುವ ನಿಟ್ಟಿನಲ್ಲಿ ಯಾವುದೇ ತೃಪ್ತಿದಾಯಕವಾಗಿ ಪ್ರಗತಿಯು ಕಂಡು ಬರದಿದ್ದರೆ, ಸಂಬಂಧಪಟ್ಟ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಮುಖ್ಯ ವೈದ್ಯಾಧಿಕಾರಿಗಳ ಹೊಣೆಗಾರಿಕೆಯ ಆಗುತ್ತಾರೆ. ಅಧಿಕಾರಿಗಳು ಜನರಿಗೆ ಲಸಿಕೆ ಹಾಕಲು ಗ್ರಾಮದ ಮುಖಂಡರಿಂದ ಹಿಡಿದು ಜನಪ್ರತಿನಿಧಿಗಳವರೆಗೆ ಎಲ್ಲರ ಸಹಕಾರವನ್ನು ಅಗತ್ಯವಾಗಿ ಪಡೆಯಬೇಕು. ಜಿಲ್ಲೆಯ ಕೋವಿಡ್‌ ಲಸಿಕೆಯ ಪ್ರಗತಿಯ ಬಗ್ಗೆ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಸ್ವತಃ ಪರಿಶೀಲನೆ ನಡೆಸಬೇಕು. ಈ ಬಗ್ಗೆ ಪ್ರತಿ ದಿನ ರಾತ್ರಿ 6 ರಿಂದ 7 ಗಂಟೆಯವರೆಗೆ ಮುಖ್ಯ ವೈದ್ಯಕೀಯ ಅಧಿಕಾರಿ ಬಳಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮಾಹಿತಿ ಪಡೆಯಬೇಕು," ಎಂದು ಕೂಡಾ ತಿಳಿಸಿದರು.

ಉತ್ತರ ಪ್ರದೇಶ ಚುನಾವಣೆ; ಪ್ರತಿಪಕ್ಷಗಳ ವಿರುದ್ಧ ಯೋಗಿ ವಾಗ್ದಾಳಿಉತ್ತರ ಪ್ರದೇಶ ಚುನಾವಣೆ; ಪ್ರತಿಪಕ್ಷಗಳ ವಿರುದ್ಧ ಯೋಗಿ ವಾಗ್ದಾಳಿ

ಅತೀ ಹೆಚ್ಚು ಕೋವಿಡ್‌ ಮೊದಲ ಡೋಸ್‌ ನೀಡಿದ ಜಿಲ್ಲೆಗಳು

ಇನ್ನು ಇದೇ ಸಂದರ್ಭಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅತೀ ಹೆಚ್ಚು ಕೋವಿಡ್ ಲಸಿಕೆಯ ಮೊದಲ ಡೋಸ್‌ ನೀಡಿದ ಜಿಲ್ಲೆಗಳ ಬಗ್ಗೆ ಉಲ್ಲೇಖ ಮಾಡಿದರು. "ಗೌತಮ್ ಬುಧ್ ನಗರ, ಷಹಜಹಾನ್‌ಪುರ, ಗಾಜಿಯಾಬಾದ್, ಲಕ್ನೋ ಮತ್ತು ಝಾನ್ಸಿ ಜಿಲ್ಲೆಯಲ್ಲಿ ಶೇಕಡ 75 ಕ್ಕಿಂತ ಅಧಿಕ ಮಂದಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್‌ ಅನ್ನು ನೀಡಲಾಗಿದೆ. ಇನ್ನು ಫಿರೋಜಾಬಾದ್, ಬಲ್ಲಿಯಾ, ಮೊರಾದಾಬಾದ್, ಸಂಭಾಲ್, ರಾಮ್‌ಪುರ್, ಅಲಿಗಢ, ಸೋನ್‌ಭದ್ರ, ಅಜಂಗಢ ಮತ್ತು ಫರೂಕಾಬಾದ್ ಜಿಲ್ಲೆಗಳಲ್ಲಿ ಕೋವಿಡ್‌ ಲಸಿಕೆ ನೀಡಿಕೆ ಪರಿಸ್ಥಿತಿಯು ಸುಧಾರಿಸುವ ನಿರೀಕ್ಷೆ ಇದೆ," ಎಂದು ಪ್ರಸ್ತಾಪ ಮಾಡಿದ್ದಾರೆ. ನೋಡಲ್‌ ಅಧಿಕಾರಿಯನ್ನು ನಿಯೋಜನೆ ಮಾಡುವ ಮೂಲಕ ಕೋವಿಡ್‌ ಪರೀಕ್ಷೆ, ಕೋವಿಡ್ ನಿರ್ವಹಣೆ, ಕೋವಿಡ್ ಲಸಿಕೆ ನೀಡಿಕೆ ಪರಿಸ್ಥಿತಿಯ ಬಗ್ಗೆ ಮುತುವರ್ಜಿ ವಹಿಸಿಕೊಳ್ಳುವಂತೆ ಮಾಡಬೇಕು. ಮುಖ್ಯಮಂತ್ರಿ ಕಚೇರಿಗೆ ಪ್ರತಿ ವಾರವು ಪ್ರಗತಿ ವರದಿಯನ್ನು ನೀಡಬೇಕು ಎಂದು ಕೂಡಾ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೂಚನೆ ನೀಡಿದ್ದಾರೆ.

Recommended Video

Cricket ಪ್ರೇಮಿಗಳ ಮನ ಗೆದ್ದ Rishab Pant ! | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
UP At Top Position In India For COVID-19 Testing, Vaccination says Yogi Adityanath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X