ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗಿ ಸಂಪುಟದ ಏಕೈಕ ಮುಸ್ಲಿಂ ಸಚಿವರು ಇವರೇ ನೋಡಿ

|
Google Oneindia Kannada News

ಲಕ್ನೋ, ಮಾರ್ಚ್ 25: ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸಂಪುಟದಲ್ಲಿ ಕೇವಲ ಒಬ್ಬರೇ ಮುಸ್ಲಿಂ ಸಚಿವರು ಇದ್ದಾರೆ. ಆರು ವರ್ಷಗಳಿಂದ ಬಿಜೆಪಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಬಿಜೆಪಿ ಸಂಪುಟದ ಏಕೈಕ ಮುಸ್ಲಿಂ ಸಚಿವ ಡ್ಯಾನಿಶ್‌ ಆಜಾದ್‌ ಬಿಜೆಪಿಯ ಅಂಗ ಸಂಸ್ಥೆ ವಿದ್ಯಾರ್ಥಿ ಸಂಘಟನೆಯಲ್ಲಿ ಇದ್ದವರು.

ಇತ್ತೀಚೆಗೆ ನಡೆದ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. ಈ ವಿಜಯದ ನಂತರ ಯೋಗಿ ಆದಿತ್ಯನಾಥ್ ಇಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಚಿವರುಗಳು ಕೂಡಾ ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. 52 ಸಚಿವರುಗಳು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

 ನಮ್ಮ ಸರ್ಕಾರ ನಿರ್ಮಿಸಿದ ಕ್ರೀಡಾಂಗಣದಲ್ಲಿ ಯೋಗಿ ಪ್ರಮಾಣ ವಚನ: ಯುಪಿ ಸರ್ಕಾರಕ್ಕೆ ಅಭಿನಂದಿಸಿದ ಅಖಿಲೇಶ್ ನಮ್ಮ ಸರ್ಕಾರ ನಿರ್ಮಿಸಿದ ಕ್ರೀಡಾಂಗಣದಲ್ಲಿ ಯೋಗಿ ಪ್ರಮಾಣ ವಚನ: ಯುಪಿ ಸರ್ಕಾರಕ್ಕೆ ಅಭಿನಂದಿಸಿದ ಅಖಿಲೇಶ್

ಇದರಲ್ಲಿ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರಾಗಿದ್ದ ಡ್ಯಾನಿಶ್‌ 2022 ರ ಚುನಾವಣೆಯ ಮೊದಲು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಈಗ ಮೊಹ್ಸಿನ್ ರಜಾ ಬದಲಿಗೆ ಡ್ಯಾನಿಶ್‌ ಆಜಾದ್‌ರನ್ನು ಬಿಜೆಪಿಯ ನೂತನ ಸಚಿವ ಸಂಪುಟದಲ್ಲಿ ಸಚಿವರನ್ನಾಗಿ ಮಾಡಲಾಗಿದೆ. ಡ್ಯಾನಿಶ್ ಆಜಾದ್ ಬಗ್ಗೆ ಪ್ರಮುಖ ಮಾಹಿತಿಯನ್ನು ತಿಳಿಯಲು ಮುಂದೆ ಓದಿ....

UP Assembly Elections 2022: Meet Danish Azad The Muslim Face Of Yogi Adityanath Cabinet

ಡ್ಯಾನಿಶ್‌ ಆಜಾದ್‌ ಅನ್ಸಾರಿ ಯಾರು?

32 ವರ್ಷದ ಡ್ಯಾನಿಶ್‌ ಆಜಾದ್‌ ಅನ್ಸಾರಿ ಮೂಲತಃ ಬಲ್ಲಿಯಾದ ಬಸಂತ್‌ಪುರದವರು. 2006 ರಲ್ಲಿ, ಅವರು ಲಕ್ನೋ ವಿಶ್ವವಿದ್ಯಾಲಯದಿಂದ ತಮ್ಮ ಬಿಕಾಂ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಮಾಸ್ಟರ್ ಆಫ್ ಕ್ವಾಲಿಟಿ ಮ್ಯಾನೇಜ್ಮೆಂಟ್ ಮತ್ತು ನಂತರ ಮಾಸ್ಟರ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಅನ್ನು ಅಧ್ಯಯನ ಮಾಡಿದರು.

ಜನವರಿ 2011 ರಲ್ಲಿ, ಅವರು ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಗೆ ಸೇರಿದರು. ಡ್ಯಾನಿಶ್ ಯುವಕರಲ್ಲಿ ಅದರಲ್ಲೂ ಮುಸ್ಲಿಂ ಯುವಕರಲ್ಲಿ ಎಬಿವಿಪಿ ಹಾಗೂ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಹವಾ ಸೃಷ್ಟಿಯಾಗಲು ಕಾರಣವಾಗಿದ್ದಾರೆ.

ಯೋಗಿ ಆದಿತ್ಯನಾಥ್ 2.0 ಸಂಪುಟ ಸೇರಿದ ಸಚಿವರ ಪಟ್ಟಿಯೋಗಿ ಆದಿತ್ಯನಾಥ್ 2.0 ಸಂಪುಟ ಸೇರಿದ ಸಚಿವರ ಪಟ್ಟಿ

Recommended Video

Hijab ಸಮರ್ಥಿಸೋ ಭರದಲ್ಲಿ ಸ್ವಾಮೀಜಿಗಳಿಗೆ ಅವಮಾನ: ಸಿದ್ದರಾಮಯ್ಯ ಹೇಳಿದ್ದೇನು? | Oneindia Kannada

2017ರಲ್ಲಿ ಯುಪಿಯಲ್ಲಿ ಬಿಜೆಪಿ ಸರ್ಕಾರ ರಚನೆಯಾಯಿತು. ಚುನಾವಣೆಯಲ್ಲಿ ಶ್ರಮಿಸಿದವರನ್ನು ಪುರಸ್ಕರಿಸಲಾಯಿತು. ಡ್ಯಾನಿಶ್ 2018 ರಲ್ಲಿ ಫಕ್ರುದ್ದೀನ್ ಅಲಿ ಅಹ್ಮದ್ ಸ್ಮಾರಕ ಸಮಿತಿಯ ಸದಸ್ಯರಾಗಿದ್ದರು. ನಂತರ ಅವರನ್ನು ಉರ್ದು ಭಾಷಾ ಸಮಿತಿಯ ಸದಸ್ಯರನ್ನಾಗಿ ಮಾಡಲಾಯಿತು. ಈ ಬಾರಿ ಚುನಾವಣೆಗೂ ಮುನ್ನ 2021ರ ಅಕ್ಟೋಬರ್‌ನಲ್ಲಿ ಡ್ಯಾನಿಶ್‌ಗೆ ದೊಡ್ಡ ಜವಾಬ್ದಾರಿ ಸಿಕ್ಕಿದ್ದು, ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿಯನ್ನು ಬಿಜೆಪಿಯು ನೀಡಿದೆ.

English summary
UP Assembly Elections 2022: Meet Danish Azad, the Muslim face of Yogi Adityanath cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X