ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತ್ರಸ್ತೆಯ ಜೀವವೇ ಹೋದ ಮೇಲೆ ಮನೆಗೆ ಭದ್ರತೆ, ಆಯುಧ

|
Google Oneindia Kannada News

ಲಕ್ನೋ, ಡಿಸೆಂಬರ್ 10: ಸಂತ್ರಸ್ತೆಯ ಜೀವವೇ ಹೋದ ಮೇಲೆ ಅವ ಮನೆಗೆ ಭದ್ರತೆ, ಆಯುಧವನ್ನು ಉತ್ತರ ಪ್ರದೇಶದ ಪೊಲೀಸರು ನೀಡಿದ್ದಾರೆ.

ಈ ಕೆಲಸವನ್ನು ಪೊಲೀಸರು ಮೊದಲೇ ಮಾಡಿದ್ದರೆ ಆಕೆಯ ಜೀವ ಉಳಿಯುತ್ತಿತ್ತೇನೋ ಎನ್ನುವ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದೆ.

ಬೆಂಕಿಯಲ್ಲಿ ಬೆಂದ ಉನ್ನಾವೊ ರೇಪ್ ಸಂತ್ರಸ್ತೆ ದುರ್ಮರಣಬೆಂಕಿಯಲ್ಲಿ ಬೆಂದ ಉನ್ನಾವೊ ರೇಪ್ ಸಂತ್ರಸ್ತೆ ದುರ್ಮರಣ

ಉನ್ನಾವೋ ಸಂತ್ರಸ್ತೆಯ ಕುಟುಂಬ ವರ್ಗಕ್ಕೆ ದಿನದ 24 ಗಂಟೆ ಭದ್ರತೆ ಹಾಗೂ ಪರವಾನಗಿ ಹೊಂದಿರುವ ಆಯುಧ ತಮ್ಮ ಬಳಿ ಇಟ್ಟುಕೊಳ್ಳಲು ಉತ್ತರ ಪ್ರದೇಶ ಪೊಲೀಸರು ಅನುಮತಿ ನೀಡಿದ್ದಾರೆ.

ಇದಲ್ಲದೆ ಸಂತ್ರಸ್ತೆಯ ಕುಟುಂಬದವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ಒದಗಿಸಲಾಗುವುದು ಎಂದೂ ಹೇಳಿದ್ದಾರೆ. ಉತ್ತರಪ್ರದೇಶದ ಉನ್ನಾವೋದಲ್ಲಿ ನಡೆದ ಅತ್ಯಾಚಾರ ಸಂತ್ರಸ್ತೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.

ಅತ್ಯಾಚಾರ ಸಂತ್ರಸ್ತೆ ಸ್ಥಿತಿ ಗಂಭೀರ: ಆ ಪಾಪಿಗಳು ನೇಣಿಗೇರುವುದನ್ನು ನೋಡಬೇಕು ಎಂದ ಯುವತಿಅತ್ಯಾಚಾರ ಸಂತ್ರಸ್ತೆ ಸ್ಥಿತಿ ಗಂಭೀರ: ಆ ಪಾಪಿಗಳು ನೇಣಿಗೇರುವುದನ್ನು ನೋಡಬೇಕು ಎಂದ ಯುವತಿ

ಈಕೆಯನ್ನು ವಿಚಾರಣೆ ವೇಳೆ ಕೋರ್ಟ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಐವರು ತಂಡ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದರು. ಶೇ.90 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಸಂತ್ರಸ್ತೆಯನ್ನು ದಿಲ್ಲಿಯ ಸಫ್ದರ್ ಜಂಗ್ ಆಸ್ಪತ್ರೆ ದಾಖಲಿಸಲಾಗಿತ್ತು.

ಆರೋಪಿಗಳ ಕಡೆಯವರಿಂದ ತೊಂದರೆಯಾಗದಂತೆ ಭದ್ರತೆ

ಆರೋಪಿಗಳ ಕಡೆಯವರಿಂದ ತೊಂದರೆಯಾಗದಂತೆ ಭದ್ರತೆ

ಆರೋಪಿಗಳ ಕಡೆಯವರಿಂದ ಮತ್ತೆ ತೊಂದರೆಯಾಗದಂತೆ ಸಂತ್ರಸ್ತೆಯ ಸಹೋದರಿ ಮತ್ತು ಇತರ ಕುಟುಂಬ ಸದಸ್ಯರಿಗೆ ಭದ್ರತೆ ಹಾಗೂ ಪರವಾನಗಿ ಸಹಿತ ಆಯುಧ ಒದಗಿಸುವುದಾಗಿ ಪೊಲೀಸ್ ಮುಖ್ಯಸ್ಥ ವಿಕ್ರಮ್ ವೀರ್ ಹೇಳಿದ್ದಾರೆ.

ಕೇಸು ವಾಪಸ್ ಪಡೆಯುವಂತೆ ಬಲವಂತ

ಕೇಸು ವಾಪಸ್ ಪಡೆಯುವಂತೆ ಬಲವಂತ

ಆರೋಪಿ ಕಡೆಯಿಂದ ಪದೇ ಪದೇ ಕೇಸ್ ವಾಪಾಸ್ ತೆಗೆದುಕೊಳ್ಳುವಂತೆ ಒತ್ತಡವಿತ್ತು, ಕಳೆದ ವಾರ ಕೂಡ ಕೇಸ್ ವಾಪಸ್ ಪಡೆಯುವಂತೆ ಸಂತ್ರಸ್ತೆಗೆ ಬಲವಂತ ಮಾಡಲಾಗಿತ್ತು, ಆದರೆ ಅದಕ್ಕೆ ಒಪ್ಪದ ಕಾರಣ ಆಕೆಗೆ ಜೀವಂತವಾಗಿ ಬೆಂಕಿ ಹಚ್ಚಲಾಗಿತ್ತು.

ಸಂತ್ರಸ್ತೆ ಕುಟುಂಬದವರಿಗೆ ಮನೆ

ಸಂತ್ರಸ್ತೆ ಕುಟುಂಬದವರಿಗೆ ಮನೆ

ಪ್ರಕರಣದ ಐದು ಆರೋಪಿಗಳ್ನು ಕೊಲೆ ಕೇಸ್ ನಲ್ಲಿ ಬುಕ್ ಮಾಡಲಾಗಿದೆ. ಇನ್ನು ಇಬ್ಬರು ಅತ್ಯಾಚಾರ ಆರೋಪ ಎದುರಿಸುತ್ತಿದ್ದಾರೆ.

ಸಂತ್ರಸ್ತೆಯನ್ನು ಬೆಂಕಿ ಹಚ್ಚಿ ಕೊಂದಿದ್ದ ಆರೋಪಿಗಳು

ಸಂತ್ರಸ್ತೆಯನ್ನು ಬೆಂಕಿ ಹಚ್ಚಿ ಕೊಂದಿದ್ದ ಆರೋಪಿಗಳು

ಉನ್ನಾವೋದಲ್ಲಿ ಐದು ಮಂದಿ ಕಾಮುಕರು ನಡೆಸಿದ ಅತ್ಯಾಚಾರದಲ್ಲಿ 20 ವರ್ಷದ ಯುವತಿ ಬದುಕುಳಿದಿದ್ದಳು. ಈ ಪ್ರಕರಣದ ವಿಚಾರಣೆಗೆಂದು ನ್ಯಾಯಾಲಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಆಕೆ ಮೇಲೆ ಹಲ್ಲೇ ನಡೆಸಿದ ದುಷ್ಕರ್ಮಿಗಳು ಬೆಂಕಿ ಹಚ್ಚಿ ಕೊಲೆ ಯತ್ನಿಸಿದ್ದರು. ಬಳಿಕ ಆಸ್ಪತ್ರೆಯಲ್ಲಿ ಆಕೆ ಕೊನೆಯುಸಿರೆಳೆದಿದ್ದಳು.

English summary
Uttar Pradesh police on Monday deployed round-the-clock protection and promised a weapons licence to the family of an alleged rape victim who died after being set on fire on the way to testify in court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X