ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉ.ಪ್ರ.ದ ಮೊಹ್ಮದ್ ಷರೀಫ್ ಗೆ 3 ಹೆಂಡತಿಯರು, 15 ಮಕ್ಕಳು, ಒಂದೇ ಕಡೆ ವಾಸ

|
Google Oneindia Kannada News

ಲಖಿಂಪುರ್ (ಉತ್ತರಪ್ರದೇಶ), ಸೆಪ್ಟೆಂಬರ್ 23: ಆರು ಸಾವಿರ ಜನಸಂಖ್ಯೆ ಇರುವ ಬೌಧಿಯಾನ್ ಕಲ್ಯಾಣ್ ಗ್ರಾಮದಲ್ಲಿ ಅದೊಂದು ಕುಟುಂಬದಲ್ಲೇ ಅತಿ ಹೆಚ್ಚು ಜನರಿದ್ದಾರೆ. ಬರೀ ಆ ಹಳ್ಳಿಗೆ ಮಾತ್ರ ಅಲ್ಲ, ಉತ್ತರಪ್ರದೇಶದ ಆ ಜಿಲ್ಲೆಗೇ ಅತಿ ದೊಡ್ಡ ಕುಟುಂಬ ಮೊಹ್ಮದ್ ಷರೀಫ್ ನದು. ಆತನಿಗೆ ಮೂವರು ಹೆಂಡತಿಯರು, ಹದಿನೈದು ಮಕ್ಕಳು. ಎಲ್ಲರೂ ಬೌಧಿಯಾನ್ ಕಲ್ಯಾಣ್ ಗ್ರಾಮದಲ್ಲಿ ಒಟ್ಟಾಗಿಯೇ ವಾಸಿಸುತ್ತಿದ್ದಾರೆ.

ಷರೀಫ್ ಹೇಳುವ ಪ್ರಕಾರ, ಆತ ಮೊದಲ ಮದುವೆ ಆಗಿದ್ದು 1987ರಲ್ಲಿ. ಆಗ ಆತನಿಗೆ 14 ವರ್ಷ ವಯಸ್ಸು. ಜತ್ತಾ ಬೇಗಂ ಎಂಬುವರ ಜತೆ ಮದುವೆಯಾದ ಆತನಿಗೆ, ಆಕೆಯಿಂದ ಮೂವರು ಗಂಡುಮಕ್ಕಳು, ಐವರು ಹೆಣ್ಣುಮಕ್ಕಳು. ಇನ್ನು ಆ ನಂತರ ನೂರ್ ಎಂಬಾಕೆಯನ್ನು ಮದುವೆಯಾಗಿದ್ದು, ಆಕೆಗೆ ನಾಲ್ವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ.

20 ನೇ ಬಾರಿಗೆ ಗರ್ಭಿಣಿಯಾದ ಮಹಾರಾಷ್ಟ್ರದ 38 ರ ಮಹಿಳೆ!20 ನೇ ಬಾರಿಗೆ ಗರ್ಭಿಣಿಯಾದ ಮಹಾರಾಷ್ಟ್ರದ 38 ರ ಮಹಿಳೆ!

2000ನೇ ಇಸವಿಯಲ್ಲಿ ತರನ್ನುಂ ಬೇಗಂ ಎಂಬ ನೇಪಾಳಿಯನ್ನು ಮದುವೆ ಆಗಿದ್ದು, ಆಕೆಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಇದೆ. ಆಸಕ್ತಿಕರ ಸಂಗತಿ ಏನೆಂದರೆ, ತನ್ನ ಮಕ್ಕಳೆಲ್ಲರ ಹೆಸರನ್ನು ಒಟ್ಟಿಗೆ ಹೇಳುವುದು ಸ್ವತಃ ಷರೀಫ್ ಗೂ ಸಾಧ್ಯವಿಲ್ಲ ಎಂದು ತಪ್ಪೊಪ್ಪಿಕೊಳ್ಳುತ್ತಾನೆ.

U. P. Man Has Three Wives, 15 Kids And Cannot Remember Their Names

ಸಂಜೆ ಎಲ್ಲರೂ ಮನೆಗೆ ಬಂದರು ಎಂಬುದನ್ನು ಖಾತ್ರಿ ಮಾಡಿಕೊಳ್ಳುವುದಕ್ಕೆ ನಾನು ಎಲ್ಲರ ಲೆಕ್ಕ ಹಾಕುತ್ತೇನೆ, ಅಷ್ಟೇ ಎನ್ನುತ್ತಾನೆ ಷರೀಫ್. ಆತನ ದೊಡ್ಡ ಮಗನಿಗೆ ಇಪ್ಪತ್ನಾಲ್ಕು ವರ್ಷವಾದರೆ, ಕೊನೆಯ ಮಗಳಿಗೆ ಎರಡು ವರ್ಷ ವಯಸ್ಸು.

"ಇಂಥ ಪ್ರೀತಿ ತುಂಬಿದ ಕುಟುಂಬ ಇರುವುದಕ್ಕೆ ನಾನು ಅದೃಷ್ಟ ಮಾಡಿದ್ದೀನಿ. ಹೆಂಡತಿಯರು ಸಹಿತ ಎಲ್ಲರೂ ಒಟ್ಟಿಗೆ ಇದ್ದೀವಿ. ಇದುವರೆಗೆ ನನ್ನ ಮಕ್ಕಳಾಗಲೀ ಅಥವಾ ಹೆಂಡತಿಯರಾಗಲೀ ಒಬ್ಬರು ಮತ್ತೊಬ್ಬರ ಜತೆ ಜಗಳ ಮಾಡಿದ ಸನ್ನಿವೇಶ ಎದುರಿಸಿಲ್ಲ" ಎಂದು ಷರೀಫ್ ಹೇಳುತ್ತಾನೆ.

ವೃತ್ತಿಯಿಂದ ಷರೀಫ್ ಕೃಷಿ ಕೂಲಿ ಕಾರ್ಮಿಕ. "ಆ ಅಲ್ಲಾ ನಮ್ಮನ್ನು ಈ ಭೂಮಿಗೆ ಕಳುಹಿಸಿದ್ದಾನೆ ಅಂದರೆ ಯಾರೂ ಖಾಲಿ ಹೊಟ್ಟೆಯಲ್ಲಿ ಮಲಗದಿರುವಂತೆ ನೋಡಿಕೊಳ್ಳುತ್ತಾನೆ" ಎನ್ನುತ್ತಾರೆ ಷರೀಫ್ ಕುಟುಂಬದವರು. ಕೆಲವು ಸಲ ಕೂಲಿ ಹಣದ ಬದಲಿಗೆ ಆಹಾರ ಧಾನ್ಯಗಳನ್ನು ನೀಡುತ್ತಾರೆ. ಆದ್ದರಿಂದ ಕುಟುಂಬ ನಡೆಸುತ್ತಿದ್ದೇನೆ ಎನ್ನುತ್ತಾನೆ ಷರೀಫ್.

ಪ್ರಧಾನಮಂತ್ರಿ ಆವಾಸ ಯೋಜನೆ ಅಡಿಯಲ್ಲಿ ಈಚೆಗಷ್ಟೇ ಮೂವರು ಹೆಂಡತಿಯರಿಗೆ ಮೂರು ವಸತಿಗೆ ಅರ್ಜಿ ಹಾಕಿದ್ದಾನೆ ಷರೀಫ್. ಕುಟುಂಬ ಯೋಜನೆ ಬಗ್ಗೆ ಗೊತ್ತಿಲ್ಲದ ಆತ, ಮಕ್ಕಳು ಆ ದೇವರ ಉಡುಗೊರೆ. ಇನ್ನಷ್ಟು ಮಕ್ಕಳಾದರೂ ನನಗೆ ಸಂತೋಷವೇ ಎನ್ನುತ್ತಾನೆ ಷರೀಫ್.

English summary
Mohammad Sharif, agriculture labor by profession from Lakhimpur, U. P., has 3 wives and 15 kids. He even cannot remember their names.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X