ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉ.ಪ್ರ, ಪಶ್ಚಿಮ ಬಂಗಾಳದಲ್ಲಿ ಐಎಸ್‌ಐಎಸ್ ಉಗ್ರರ ಸಂಚಾರ

|
Google Oneindia Kannada News

ಕೋಲ್ಕತ್ತಾ, ಜನವರಿ 06 : ಉತ್ತರ ಪ್ರದೇಶದಲ್ಲಿ ಇಬ್ಬರು ಐಎಸ್‌ಐಎಸ್ ಉಗ್ರರಿಗಾಗಿ ಹುಡುಕಾಟ ನಡೆಯುತ್ತಿದೆ. ಈ ಇಬ್ಬರೂ ಪಶ್ಚಿಮ ಬಂಗಾಳದಲ್ಲಿಯೂ ಕಾಣಿಸಿಕೊಂಡಿದ್ದರು ಎಂಬ ಮಾಹಿತಿ ಈಗ ಲಭ್ಯವಾಗಿದೆ.

ಅಬ್ದುಲ್ ಮತ್ತು ಇಲಿಯಾಸ್ ಎಂಬ ಇಬ್ಬರು ಉಗ್ರರು ಉತ್ತರ ಪ್ರದೇಶ ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ. ನೇಪಾಳಕ್ಕೆ ಪರಾರಿಯಾಗಲು ಇಬ್ಬರೂ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದರು.

ಪ.ಬಂಗಾಲ ಮೂಲದ ಆರು ಕಾರ್ಮಿಕರನ್ನು ಕುಲ್ಗಾಂನಲ್ಲಿ ಹತ್ಯೆ ಮಾಡಿದ ಉಗ್ರರುಪ.ಬಂಗಾಲ ಮೂಲದ ಆರು ಕಾರ್ಮಿಕರನ್ನು ಕುಲ್ಗಾಂನಲ್ಲಿ ಹತ್ಯೆ ಮಾಡಿದ ಉಗ್ರರು

ಭಾರತ ನೇಪಾಳ ಗಡಿ ಭಾಗದಲ್ಲಿ ಐಎಸ್‌ಐಎಸ್ ವಿದ್ಯಾರ್ಥಿಗಳ ತಂಡ ಕಟ್ಟಲು ಪ್ರಯತ್ನ ನಡೆಸಿದೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿತ್ತು. ಇಬ್ಬರು ಉಗ್ರರು ಸಿಲಿಗುರಿಯಲ್ಲಿ ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಐಎಸ್‌ಐಎಸ್ ಚಟುವಟಿಕೆ ಸಕ್ರಿಯವಾಗಿದೆಯೇ? ಎಂಬ ಪ್ರಶ್ನೆ ಹುಟ್ಟು ಹಾಕಿದೆ.

ಐಎಸ್ ಉಗ್ರ ಸಂಘಟನೆ ಹೊಸ ವಕ್ತಾರನ ಬಗ್ಗೆ ನಮಗೆ ಗೊತ್ತು: ಟ್ರಂಪ್ ಐಎಸ್ ಉಗ್ರ ಸಂಘಟನೆ ಹೊಸ ವಕ್ತಾರನ ಬಗ್ಗೆ ನಮಗೆ ಗೊತ್ತು: ಟ್ರಂಪ್

Two Islamic State Terrorists Spotted in UP, West Bengal

ಉಗ್ರರನ್ನು ಪತ್ತೆ ಹಚ್ಚಲು ಪೊಲೀಸರು ಮೂರು ತಂಡಗಳನ್ನು ರಚನೆ ಮಾಡಿದ್ದಾರೆ. ಪಶ್ಚಿಮ ಬಂಗಾಳದ ವಿವಿಧ ಪ್ರದೇಶದಲ್ಲಿ ತಂಡ ಉಗ್ರರ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಮತ್ತೊಂದು ಕಡೆ ಉತ್ತರ ಪ್ರದೇಶದಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದೆ.

ಭಟ್ಕಳ ಮೂಲದ ಐಎಸ್‌ಐಎಸ್ ಉಗ್ರ ಶಫಿ ಅರ್ಮರ್ ಸಾವು ಭಟ್ಕಳ ಮೂಲದ ಐಎಸ್‌ಐಎಸ್ ಉಗ್ರ ಶಫಿ ಅರ್ಮರ್ ಸಾವು

ಭಾರತ ಮತ್ತು ನೇಪಾಳ 1,751 ಕಿ. ಮೀ. ಗಡಿ ಪ್ರದೇಶವನ್ನು ಹಂಚಿಕೊಂಡಿವೆ. ಈ ಭಾಗದಲ್ಲಿ ಐಎಸ್‌ಐಎಸ್ ತನ್ನ ವಿದ್ಯಾರ್ಥಿ ನೆಲೆ ಸ್ಥಾಪನೆ ಮಾಡಲು ಪ್ರಯತ್ನ ನಡೆಸಿದೆ ಎಂಬುದು ಗುಪ್ತಚರ ಇಲಾಖೆ ಮಾಹಿತಿಯಾಗಿದೆ. ಉತ್ತರ ಪ್ರದೇಶ ಸಹ ಏಳು ಜಿಲ್ಲೆಗಳಲ್ಲಿ ನೇಪಾಳ ಜೊತೆ ಗಡಿ ಹಂಚಿಕೊಂಡಿದೆ.

ಇಬ್ಬರೂ ಉಗ್ರರ ಭಾವಚಿತ್ರಗಳನ್ನು ಈಗಾಗಲೇ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಳಿಸಲಾಗಿದೆ. ಎರಡೂ ರಾಜ್ಯಗಳ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.

English summary
Uttar Pradesh police announced high alert after reports that two ISIS terrorists entered the state. Same persons had been spotted in West Bengal as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X