ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್‌ ಗಾಂಧಿ ನಿಯೋಗದಿಂದ ಹತ್ರಾಸ್ ಸಂತ್ರಸ್ತೆಯ ಕುಟುಂಬದವರ ಭೇಟಿ

|
Google Oneindia Kannada News

ಲಕ್ನೋ, ಅಕ್ಟೋಬರ್ 03: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿರುವ ಯುವತಿ ಮೇಲಿನ ಅತ್ಯಾಚಾರ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದ ನಿಯೋಗ ಇಂದು ಸಂತ್ರಸ್ಥೆಯ ಕುಟುಂಬವನ್ನು ಭೇಟಿ ಮಾಡಲಿದೆ.

ಪಕ್ಷದ ಸಂಸದರೊಂದಿಗೆ ರಾಹುಲ್ ಗಾಂಧಿ ಇಂದು ಮಧ್ಯಾಹ್ನ ಹತ್ರಾಸ್ ಗೆ ಭೇಟಿ ನೀಡಲಿದ್ದು, ಬರ್ಬರ ರೀತಿಯಲ್ಲಿ ಹಲ್ಲೆಗೊಳಗಾಗಿ ಮೃತಪಟ್ಟಿರುವ 19 ವರ್ಷದ ಹೆಣ್ಣುಮಗಳ ಕುಟುಂಬ ಸದಸ್ಯರನ್ನು ಭೇಟಿ ಮಾಡುವುದಾಗಿ ಕಾಂಗ್ರೆಸ್ ಮುಖಂಡ ಕೆ. ಸಿ. ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.

ಅಸತ್ಯ, ಅನ್ಯಾಯಕ್ಕೆ ಎಂದಿಗೂ ತಲೆ ಬಾಗಲ್ಲ ಎಂದ ರಾಹುಲ್ ಗಾಂಧಿಅಸತ್ಯ, ಅನ್ಯಾಯಕ್ಕೆ ಎಂದಿಗೂ ತಲೆ ಬಾಗಲ್ಲ ಎಂದ ರಾಹುಲ್ ಗಾಂಧಿ

ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದರಾದ ಡೆರೆಕ್​ ಒಬ್ರಾಯ್​, ಕಕೊಲಿ ಗೋಶ್​ ದಸ್ತಿದರ್​, ಪ್ರತಿಮಾ, ಮಾಜಿ ಸಂಸದೆ ಮಮತಾ ಠಾಕೂರ್​ ಅವರ ಸಂತ್ರಸ್ತ ಯುವತಿ ಕುಟುಂಬ ಭೇಟಿಯಾಗಿ ಸಾಂತ್ವನ ನೀಡಲು ಮುಂದಾಗಿದ್ದರು. ಉತ್ತರ ಪ್ರದೇಶ ಪೊಲೀಸರು ತೃಣಮೂಲ ಕಾಂಗ್ರೆಸ್ ಪಕ್ಷದ ನಿಯೋಗವನ್ನು ತಡೆದಿದ್ದರು.

ಹತ್ರಾಸ್‌ನಲ್ಲಿ 144 ಸೆಕ್ಷನ್ ಜಾರಿ

ಹತ್ರಾಸ್‌ನಲ್ಲಿ 144 ಸೆಕ್ಷನ್ ಜಾರಿ

ಈ ಮಧ್ಯೆ ಹತ್ರಾಸ್ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಗ್ರಾಮವನ್ನು ಬ್ಲಾಕ್ ಮಾಡಿರುವ ಪೊಲೀಸರು, ಮಾಧ್ಯಮಗಳಿಗೂ ಅವಕಾಶ ನೀಡುತ್ತಿಲ್ಲ.ಆದಾಗ್ಯೂ, ಖಾಸಗಿ ಚಾನೆಲ್ ವೊಂದು ಸಂತ್ರಸ್ಥೆಯ ಕುಟುಂಬ ಸದಸ್ಯರೊಬ್ಬರನ್ನು ಭೇಟಿ ಮಾಡಿದ್ದು, ತಮ್ಮನ್ನು ಭಾರೀ ಪೊಲೀಸ್ ಭದ್ರತೆಯಲ್ಲಿ ಇಡಲಾಗಿದೆ. ಅಧಿಕ ಒತ್ತಡ ಹಾಗೂ ಭಯದಲ್ಲಿ ಬದುಕುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ರಾಹುಲ್, ಪ್ರಿಯಾಂಕಾರನ್ನು ವಶಕ್ಕೆ ಪಡೆದಿದ್ದ ಪೊಲೀಸರು

ರಾಹುಲ್, ಪ್ರಿಯಾಂಕಾರನ್ನು ವಶಕ್ಕೆ ಪಡೆದಿದ್ದ ಪೊಲೀಸರು

ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಸಂತ್ರಸ್ಥ ಯುವತಿಯ ಕುಟುಂಬಸ್ಥರನ್ನು ಭೇಟಿ ಮಾಡಲು ಉತ್ತರ ಪ್ರದೇಶದ ಹತ್ರಾಸ್ ಗೆ ತೆರಳುತ್ತಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಒಂದು ವರ್ಷ ಕಳೆದರೂ ಯುಪಿ ಪರಿಸ್ಥಿತಿ ಬದಲಾಗಿಲ್ಲ

ಒಂದು ವರ್ಷ ಕಳೆದರೂ ಯುಪಿ ಪರಿಸ್ಥಿತಿ ಬದಲಾಗಿಲ್ಲ

ಹತ್ರಾಸ್ ಗೆ ತೆರಳುತ್ತಿದ್ದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಕಾರನ್ನು ಗ್ರೇಟರ್ ನೋಯ್ಡಾದಲ್ಲಿಯೇ ಉತ್ತರ ಪ್ರದೇಶ ಪೊಲೀಸರು ತಡೆದರು. ಬಳಿಕ ಸಂತ್ರಸ್ಥ ಯುವತಿಯ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಕಾಲ್ನಡಿಯಲ್ಲಿ ತೆರಳುತ್ತಿದ್ದ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ರು.

ಕಳೆದ ವರ್ಷ ಇದೇ ಸಮಯದಲ್ಲಿ ನಾವು ಉನ್ನಾವೊ ಮಗಳಿಗಾಗಿ ಹೋರಾಡುತ್ತಿದ್ದೆವು. ಒಂದು ವರ್ಷದಲ್ಲಿ ಯುಪಿಯ ಪರಿಸ್ಥಿತಿ ಬದಲಾಗಿಲ್ಲ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಹಿಳೆಯರ ಸುರಕ್ಷತೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಒತ್ತಾಯಿಸಿದರು.
ಯಾವ ಶಕ್ತಿಯೂ ನನ್ನನ್ನು ತಡೆಯಲು ಆಗಲ್ಲ

ಯಾವ ಶಕ್ತಿಯೂ ನನ್ನನ್ನು ತಡೆಯಲು ಆಗಲ್ಲ

ಉತ್ತರ ಪ್ರದೇಶದ ಹತ್ರಾಸ್ ಎಂಬ ಹಳ್ಳಿಯಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರಗೈದು ಬಳಿಕ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು. ಆಕೆ 15 ದಿನಗಳ ಕಾಲ ಚಿಕಿತ್ಸೆ ಪಡೆದು ಬಳಿಕ ಸಾವನ್ನಪ್ಪಿದ್ದಳು. ಆ ಹತ್ರಾಸ್ ಹಳ್ಳಿಗೆ ಇಂದು ಮತ್ತೊಮ್ಮೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೆರಳಲಿದ್ದಾರೆ. ಆದರೂ ಅತ್ಯಾಚಾರಕ್ಕೆ ಒಳಗಾಗಿದ್ದ ಕುಟುಂಬವನ್ನು ಭೇಟಿ ಮಾಡೇ ಮಾಡುತ್ತೇವೆ, ಆ ಕುಟುಂಬದ ಜೊತೆಗೆ ನಿಲ್ಲುತ್ತೇವೆ, ಅವರಿಗೆ ಸಾಂತ್ವನ ಹೇಳುತ್ತೇವೆ. ಕಡೆ ಪಕ್ಷ ಕಾರ್ಯಕರ್ತರೆಲ್ಲರನ್ನು ಬಿಟ್ಟು ನಮಗಿಬ್ಬರಿಗೆ ಅವಕಾಶ ಕೊಡಿ ಎಂದು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮನವಿ ಮಾಡಿದ್ದರು.

English summary
Congress MP Rahul Gandhi will make another attempt this afternoon to travel to Hathras in Uttar Pradesh and speak to the family of the 20-year-old Dalit woman who was gang raped and murdered, and whose body was then cremated by the police in a secretive ceremony at 2.30 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X