ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಳ್ಳು ಸುದ್ದಿ: ಅಯೋಧ್ಯೆಯ ರಾಮಮಂದಿರದ ಅಡಿಯಲ್ಲಿ ಟೈಂ ಕ್ಯಾಪ್ಸೂಲ್

|
Google Oneindia Kannada News

ಲಕ್ನೋ, ಜುಲೈ 29: ಅಯೋಧ್ಯೆಯ ಶ್ರೀ ರಾಮಮಂದಿರದ ಸಾವಿರ ಅಡಿ ಕೆಳಗೆ ತಾಮ್ರದ ಟೈಂ ಕ್ಯಾಪ್ಸೂಲ್ ಅಳವಡಿಸುವ ಸುದ್ದಿ ಕೇವಲ ವದಂತಿ ಎಂದು ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಪಷ್ಟಪಡಿಸಿದೆ.

ಇದೇ ಆಗಸ್ಟ್ 5ರಂದು ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಪ್ರಧಾನಿ ಮೋದಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದು, ಈ ಮಧ್ಯೆ ದೇವಸ್ಥಾನ ಕಟ್ಟಡದ ಕೆಳಭಾಗದಲ್ಲಿ ರಾಮ ಮಂದಿರಕ್ಕಾಗಿ ನಡೆದ ರಾಮ ಜನ್ಮಭೂಮಿ ಚಳುವಳಿಯ ಇತಿಹಾಸದ ಮಾಹಿತಿಯನ್ನೊಳಗೊಂಡ ಕ್ಯಾಪ್ಸೂಲ್‌ಗಳನ್ನು ಇಡಲು ನಿರ್ಧರಿಸಲಾಗಿದೆ ಎಂಬ ವರದಿ ಸುಳ್ಳು ಎಂದು ರಾಮ ಜನ್ಮ ಭೂಮಿ ಟ್ರಸ್ಟ್ ಅಧ್ಯಕ್ಷ ಚಂಪತ್ ರಾಯ್ ಹೇಳಿದ್ದಾರೆ.

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ 5 ಕೋಟಿ ರು ಕೊಟ್ಟ ಬಾಪುಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ 5 ಕೋಟಿ ರು ಕೊಟ್ಟ ಬಾಪು

ಉದ್ದೇಶಿತ ಭವ್ಯ ರಾಮ ಮಂದಿರದ ಅಡಿಪಾಯದಲ್ಲಿ, ರಾಮ ಜನ್ಮಭೂಮಿ ಚಳುವಳಿಯ ಇತಿಹಾಸವನ್ನು ನೆನಪಿಸುವ ಕ್ಯಾಪ್ಸೂಲ್‌ಗಳನ್ನು ಅಳವಡಿಸುವ ವರದಿಗಳನ್ನು ಟ್ರಸ್ಟ್ ಕೇವಲ ವದಂತಿ ಎಂದು ಅಲ್ಲಗಳೆದಿದೆ.

Trust Says No Time Capsule To Be Placed Below Ayodhya Temple

ಮಂದಿರದ ಮೇಲ್ಮೈಯಿಂದ 200 ಅಡಿ ಕೆಳಗೆ ರಾಮ ಜನ್ಮಭೂಮಿಗಾಗಿ ನಡೆದ ಸುದೀರ್ಘ ಚಳುವಳಿಯ ಇತಿಹಾಸನ್ನು ನೆನಪಿಸುವ ಕ್ಯಾಪ್ಸೂಲ್‌ಗಳನ್ನು ಅಳವಡಿಸಲು ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗಿತ್ತು.

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರದ ಕೆಳಗೆ ಸಾವಿರಾರು ಅಡಿ ಆಳದಲ್ಲಿ ರಾಮಮಂದಿರದ ಇತಿಹಾಸ, ಹೋರಾಟ ಹಾಗೂ ಮಾಹಿತಿ ಒಳಗೊಂಡ ರಾಮ್ರಪತ್ರದ ರಕ್ಷಣೆ ಹೊಂದಿದ ಟೈಮ್ ಕ್ಯಾಪ್ಸೂಲ್ ಇರಿಸಲು ರಾಮಜನ್ಮಭೂರ್ಮಿ ತೀರ್ಥಕ್ಷೇತ್ರ ಟ್ರಸ್ ಮುಂದಾಗಿದೆ ಎಂದು ಹೇಳಲಾಗಿತ್ತು.

ಭವಿಷ್ಯದಲ್ಲಿ ವಿವಾದ ಉದ್ಭವಿಸಿದರೆ ಈ ಪತ್ರವು ಅದನ್ನು ಬಗೆಹರಿಸುತ್ತದೆ ಎಂಬ ಕಾರಣಕ್ಕೆ 2 ಸಾವಿರ ಅಡಿ ಆಳದಲ್ಲಿ ತಾಮ್ರಪತ್ರದಿಂದ ಸುತ್ತಲಾದ ಟೈಂ ಕ್ಯಾಪ್ಸೂಲ್ ಇರಿಸಲು ಎಂದು ತಿಳಿಸಿದ್ದರು.

English summary
The general secretary of the Ram Janmabhoomi Teerth Kshetra Trust , Champat Raj, had denied reports about placing of a time capsule under the ground at Ram Temple construction site on August 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X