• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ; 18 ಸಾವು

|
Google Oneindia Kannada News

ಲಕ್ನೋ, ಜುಲೈ 28; ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಐಷಾರಾಮಿ ಖಾಸಗಿ ಬಸ್‌ಗೆ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 18 ಜನರು ಮೃತಪಟ್ಟಿದ್ದು,19 ಜನರು ಗಾಯಗೊಂಡಿದ್ದಾರೆ.

ಬಾರಬಂಕಿ ಜಿಲ್ಲೆಯ ರಾಮ್ ಸನೇಹಿ ಘಾಟ್ ಸಮೀಪ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಐಷಾರಾಮಿ ಖಾಸಗಿ ಬಸ್‌ಗೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ.

ವಿಡಿಯೋ: ಬಸ್ ನಿರ್ವಾಹಕನ ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆವಿಡಿಯೋ: ಬಸ್ ನಿರ್ವಾಹಕನ ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಅಪಘಾತದ ರಭಸಕ್ಕೆ ಬಸ್‌ನಲ್ಲಿದ್ದ 18 ಜನರು ಮೃತಪಟ್ಟಿದ್ದಾರೆ. 19 ಜನರು ಗಾಯಗೊಂಡಿದ್ದಾರೆ. ಬಸ್ ನಜ್ಜುಗುಜ್ಜಾಗಿದ್ದು, ಗಾಯಗೊಂಡವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಡಿಸಿಎಂ ಲಕ್ಷ್ಮಣ ಸವದಿ ಪುತ್ರನ ಕಾರು ಅಪಘಾತ; ಎಸ್‌ಪಿ ಸ್ಪಷ್ಟನೆಡಿಸಿಎಂ ಲಕ್ಷ್ಮಣ ಸವದಿ ಪುತ್ರನ ಕಾರು ಅಪಘಾತ; ಎಸ್‌ಪಿ ಸ್ಪಷ್ಟನೆ

ಹಲವು ಶವಗಳು ಜಖಂಗೊಂಡ ಬಸ್‌ನ ಅವಶೇಷಗಳಡಿ ಸಿಲಕಿದ್ದು ತಡರಾತ್ರಿಯೇ ಕಾರ್ಯಾಚರಣೆ ನಡೆಸಿ ಎಲ್ಲಾ ಶವಗಳನ್ನು ತೆಗೆಯಲಾಗಿದೆ. ಸ್ಥಳೀಯ ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.

ನಟ ಸಂಚಾರಿ ವಿಜಯ್ ಅಪಘಾತ ಪ್ರಕರಣ: ಬೈಕ್ ಸವಾರ ನವೀನ್ ಹೇಳಿಕೆ ದಾಖಲು ನಟ ಸಂಚಾರಿ ವಿಜಯ್ ಅಪಘಾತ ಪ್ರಕರಣ: ಬೈಕ್ ಸವಾರ ನವೀನ್ ಹೇಳಿಕೆ ದಾಖಲು

ಘಟನೆ ಬಗ್ಗೆ ಲಕ್ನೋ ವಲಯದ ಎಡಿಜಿ ಸತ್ಯನಾರಾಯಣ ಸಬತ್ ಮಾಹಿತಿ ನೀಡಿದ್ದಾರೆ. "ಲಾರಿ ಬಸ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. 18 ಜನರು ಮೃತಪಟ್ಟಿದ್ದಾರೆ. 19 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಹೇಳಿದ್ದಾರೆ.

English summary
A truck rammed into a bus near Ram Sanehi Ghat in Barabanki, Uttar Pradesh. People dead and 19 injured in the accident said Satya Narayan Sabat ADG, Lucknow zone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X