• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಕ್ನೋ: ವಿಗ್ರಹ ಕದ್ದ ಕಳ್ಳರನ್ನು ಕಾಡಿದ ಕೆಟ್ಟ ಕನಸು, ಬದಲಾಯ್ತು ಕಳ್ಳರ ಮನಸು

|
Google Oneindia Kannada News

ಲಕ್ನೋ ಮೇ 17: ಉತ್ತರ ಪ್ರದೇಶದ 14 ಪುರಾತನ ವಿಗ್ರಹಗಳನ್ನು ರಹಸ್ಯವಾಗಿ ಕದ್ದೊಯ್ದ ಕಳ್ಳರು ಕೆಲ ದಿನಗಳ ಬಳಿಕ ಪತ್ರದಲ್ಲಿ ಕಾರಣ ಬರೆದು ಅರ್ಚಕನ ಬಳಿ ಬಿಟ್ಟು ಹೋಗಿದ್ದಾರೆ. ಕಳೆದ ಮೇ 9ರಂದು ಚಿತ್ರಕೂಟದ ಪ್ರಸಿದ್ಧ ದೇವಾಲಯದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ದೇವತಾ ವಿಗ್ರಹಗಳು ಕಳವಾಗಿದ್ದವು. ವಿಷಯ ಪೊಲೀಸರಿಗೆ ತಲುಪಿ ಕಳ್ಳರಿಗಾಗಿ ಹುಡುಕಾಟ ನಡೆದಿತ್ತು. ಆದರೆ ಭಾನುವಾರ ದೇವಸ್ಥಾನದ ಅರ್ಚಕ ಮಹಂತ ಅವರು ಕಾಣೆಯಾದ ಹೆಚ್ಚಿನ ವಿಗ್ರಹಗಳನ್ನು ಕಳ್ಳರು ಹಿಂದಿರುಗಿಸಿದ್ದಾರೆ ಮತ್ತು ಕಾರಣವನ್ನು ವಿವರಿಸುವ ಪತ್ರವನ್ನು ಇಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ಪತ್ರವನ್ನು ಓದಿ ಪೊಲೀಸರು ಆಶ್ಚರ್ಯಚಕಿತರಾಗಿದ್ದಾರೆ. ಆದರೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಉಳಿದ ವಿಗ್ರಹಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಚಿತ್ರಕೂಟದ ಬಾಲಾಜಿ ದೇವಸ್ಥಾನದಲ್ಲಿ ಅಷ್ಟಧಾತುಗಳಿಂದ ತಯಾರಿಸಿದ 16 ಪುರಾತನ ವಿಗ್ರಹಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಆದರೆ, ಈ 14 ವಿಗ್ರಹಗಳನ್ನು ಅವರು ಭಾನುವಾರ ದೇವಾಲಯದ ಪ್ರಧಾನ ಅರ್ಚಕರ ಬಳಿ ಬಿಟ್ಟು ಹೋಗಿದ್ದಾರೆ. ಈ ಮೂರ್ತಿಗಳ ಜೊತೆಗೆ ಪತ್ರವನ್ನೂ ಇಟ್ಟಿದ್ದಾರೆ. ಅದರಲ್ಲಿ ತಮ್ಮ ಮನ ಪರಿವರ್ತನೆಗೆ ಕಾರಣವನ್ನು ತಿಳಿಸಿದ್ದಾರೆ. ಇನ್ನಷ್ಟು ವಿವರ ಮುಂದೆ ಓದಿ...

ಪತ್ರದಲ್ಲಿ ಕಾರಣ ಬರೆದಿಟ್ಟ ವಿಗ್ರಹ ವಾಪಸ್

ಪತ್ರದಲ್ಲಿ ಕಾರಣ ಬರೆದಿಟ್ಟ ವಿಗ್ರಹ ವಾಪಸ್

ಚಿತ್ರಕೂಟದ ಬಾಲಾಜಿ ದೇವಸ್ಥಾನದ ವಿಗ್ರಹ ಕದ್ದಿದ್ದ ಕಳ್ಳರು ತಮ್ಮ ಮನ ಪರಿವರ್ತನೆಗೆ ಕಾರಣವನ್ನು ತಿಳಿಸಿದ್ದಾರೆ. ಈ ಕುರಿತು ಸದರ್ ಕೊತ್ವಾಲಿ ಕಾರ್ವಿಯ ಎಸ್‌ಎಚ್‌ಒ ರಾಜೀವ್‌ಕುಮಾರ್ ಸಿಂಗ್, 'ಮೇ 9 ರಂದು ತಾರೋಹಾದಲ್ಲಿರುವ ಪುರಾತನ ಬಾಲಾಜಿ ದೇವಸ್ಥಾನದಿಂದ ಹಲವು ಕೋಟಿ ಮೌಲ್ಯದ 16 ಅಷ್ಟಧಾತು ವಿಗ್ರಹಗಳನ್ನು ಕಳವು ಮಾಡಲಾಗಿದೆ. ಈ ಪ್ರಕರಣದಲ್ಲಿ ದೇವಸ್ಥಾನದ ಅರ್ಚಕ ಮಹಂತ್ ರಾಮಬಾಲಕ್ ಅಪರಿಚಿತ ಕಳ್ಳರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ವಿಚಾರಣೆ ನಡೆಸಿ ನಾಲ್ವರ ಬಂಧನದ ಬಳಿಕ ಕಳ್ಳರು ವಿಗ್ರಹಗಳನ್ನು ರಹಸ್ಯವಾಗಿ ವಾಪಸ್ ನೀಡಿದ್ದಾರೆ' ಎಂದಿದ್ದಾರೆ

300 ವರ್ಷಗಳಷ್ಟು ಹಳೆಯದಾದ ವಿಗ್ರಹಗಳು

300 ವರ್ಷಗಳಷ್ಟು ಹಳೆಯದಾದ ವಿಗ್ರಹಗಳು

ಪುರೋಹಿತರ ಪ್ರಕಾರ ಕಳ್ಳತನವಾದ ವಿಗ್ರಹಗಳೆಲ್ಲ ಸುಮಾರು 300 ವರ್ಷಗಳಷ್ಟು ಹಳೆಯವು. ಇವುಗಳಲ್ಲಿ 9 ಸಂಪೂರ್ಣವಾಗಿ ಅಷ್ಟಧಾತುಗಳು. 3 ತಾಮ್ರ ಮತ್ತು 4 ಹಿತ್ತಾಳೆಯದ್ದಾಗಿದೆ. ಇವುಗಳಲ್ಲಿ ಅರ್ಧದಷ್ಟು ವಿಗ್ರಹಗಳು ರಾಧಾ-ಕೃಷ್ಣನವು ಮತ್ತು 6 ಭಗವಾನ್ ಶಾಲಿಗ್ರಾಮದವು. ಉಳಿದವು ವಿವಿಧ ದೇವತೆಗಳ ವಿಗ್ರಹಗಳು ಎಂದು ಅರ್ಚಕರು ಹೇಳಿದ್ದರು. ಅವರ ಪ್ರಕಾರ, ವಿಗ್ರಹಗಳ ಬೆಲೆ ತುಂಬಾ ಹೆಚ್ಚಾಗಿದೆ. ಏಕೆಂದರೆ ಎಲ್ಲವನ್ನೂ ಶುದ್ಧ ಬೆಳ್ಳಿಯ ಆಭರಣಗಳಿಂದ ಅಲಂಕರಿಸಲಾಗಿದೆ.

ರಾತ್ರಿಯಲ್ಲಿ ಭಯಾನಕ ಕನಸುಗಳು

ರಾತ್ರಿಯಲ್ಲಿ ಭಯಾನಕ ಕನಸುಗಳು

ಕದ್ದ 16 ವಿಗ್ರಹಗಳ ಪೈಕಿ 14 ವಿಗ್ರಹಗಳನ್ನು ಅರ್ಚಕರಿಗೆ ವಾಪಸ್ ನೀಡಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಕದ್ದ 16 ವಿಗ್ರಹಗಳ ಪೈಕಿ 14 ವಿಗ್ರಹಗಳು ಭಾನುವಾರ ಮಾಣಿಕಪುರ ಜವಾಹರನಗರದ ಮಹಂತ್ ರಾಮಬಾಲಕ್ ಅವರ ಮನೆಯ ಬಳಿ ಗೋಣಿಚೀಲದಲ್ಲಿ ಬಿದ್ದಿರುವುದು ಪತ್ತೆಯಾಗಿದೆ ಎಂದು ಎಸ್‌ಎಚ್‌ಒ ಹೇಳಿದ್ದಾರೆ. ವಿಗ್ರಹಗಳ ಜೊತೆಗೆ ಕಳ್ಳರು ಅರ್ಚಕರಿಗೆ ಪತ್ರವನ್ನೂ ಬಿಟ್ಟು ಹೋಗಿದ್ದರು, ಅದರಲ್ಲಿ ಅವರು ಹಾಗೆ ಮಾಡಲು ಕಾರಣವನ್ನು ಬರೆದಿದ್ದಾರೆ.

ವಿಗ್ರಹಗಳನ್ನು ಕದಿಯುವುದರಿಂದ ದುಃಸ್ವಪ್ನಗಳು ಬರುತ್ತಿದ್ದು, ಭಯದಿಂದಲೇ ವಾಪಸ್ ಕೊಡುತ್ತಿದ್ದೇವೆ ಎಂದು ಕಳ್ಳರು ತಮ್ಮ ಮನ ಪರಿವರ್ತನೆಯ ಬಗ್ಗೆ ಪತ್ರದಲ್ಲಿ ಬರೆದುಕೊಂಡಿದ್ದಾರೆ. ಕಳ್ಳರು ಪತ್ರದಲ್ಲಿ, 'ನಮಗೆ ರಾತ್ರಿಯಲ್ಲಿ ಭಯಾನಕ ಕನಸುಗಳು ಬೀಳುತ್ತಿವೆ. ಮನ ಪರಿವರ್ತನೆಯಿಂದ ವಿಗ್ರಹಳನ್ನು ವಾಪಸ್ಸು ನೀಡುತ್ತಿದ್ದೇವೆ' ಎಂದು ಈ ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ.

16 ವಿಗ್ರಹಗಳ ಪೈಕಿ 14 ವಿಗ್ರಹಗಳು ಮಾತ್ರ ಪತ್ತೆ

16 ವಿಗ್ರಹಗಳ ಪೈಕಿ 14 ವಿಗ್ರಹಗಳು ಮಾತ್ರ ಪತ್ತೆ

ಇದಾದ ಬಳಿಕ ಅರ್ಚಕರು ಆ 14 ವಿಗ್ರಹಗಳನ್ನು ಪೊಲೀಸ್ ಠಾಣೆಯಲ್ಲಿ ಇಡಲು ತಂದಿದ್ದು, ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಕಾನೂನು ಕ್ರಮ ಜರುಗಿಸುತ್ತಿದ್ದಾರೆ. ಉಳಿದ ಎರಡು ವಿಗ್ರಹಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಎರಡು ವಿಗ್ರಹಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ ಸಿಕ್ಕಿಲ್ಲ. ಆದರೆ, ಕಳ್ಳರು ದೇವರಿಗೆ ಹೆದರಿ ಮೂರ್ತಿಗಳನ್ನು ಹಿಂದಿರುಗಿಸಿರುವ ರೀತಿ ಚರ್ಚೆಗೆ ಗ್ರಾಸವಾಗಿದೆ.

English summary
Thieves secretly stole the 14 ancient idols of Uttar Pradesh have left the priest after writing a letter a few days later.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X