ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವರು ನಮ್ಮನ್ನು ಲಲ್ಲಾ, ರಸಗುಲ್ಲಾ ಎಂದು ಕರೆಯುತ್ತಾರೆ.. ಬಾಲಕರ ಅಳಲು

|
Google Oneindia Kannada News

ಲಕ್ನೋ ಮೇ 11: ಶಾಲೆಗಳು ಮತ್ತು ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳು ಮಕ್ಕಳು ಜ್ಞಾನವನ್ನು ಗಳಿಸುವ ಮತ್ತು ಜೀವಿತಾವಧಿಯ ಸ್ನೇಹಿತರನ್ನು ಪಡೆಯುವ ಸ್ಥಳವಾಗಿವೆ. ಮಕ್ಕಳು ವಿದ್ಯಾಭ್ಯಾಸದ ಹೊರತಾಗಿ, ಶಾಲೆಯಲ್ಲಿ ತಮಾಷೆಯ ಮತ್ತು ವಿನೋದದ ಘಟನೆಗಳು ನಡೆಯುತ್ತವೆ. ತರಗತಿಯಲ್ಲಿನ ಹುಡುಗರು ಕುಖ್ಯಾತರಲ್ಲಿ ಕುಖ್ಯಾತರು ಆಗಿರುತ್ತಾರೆ ಮತ್ತು ಸಾಮಾನ್ಯವಾಗಿ ಇತರರನ್ನು ಗೇಲಿ ಮಾಡುವಲ್ಲಿ ಮೇಲುಗೈ ಹೊಂದಿರುವುದು ಕಂಡುಬರುತ್ತದೆ. ಆದರೆ ಉತ್ತರ ಪ್ರದೇಶದ ಔರೈಯಾದಲ್ಲಿನ ಶಾಲೆಯಲ್ಲಿ ಈ ವಿಚಾರದಲ್ಲಿ ಬಾಲಕಿಯರದ್ದೇ ಮೇಲುಗೈ.

ಇತ್ತೀಚೆಗೆ ಜವಾಹರ್ ನವೋದಯ ವಿದ್ಯಾಲಯದಲ್ಲಿ 7 ನೇ ತರಗತಿಯ ಹುಡುಗರ ಪತ್ರವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಹುಡುಗರು, ಶಾಲೆಯ ಪ್ರಾಂಶುಪಾಲರಿಗೆ ಬರೆದ ಪತ್ರದಲ್ಲಿ, ಹುಡುಗಿಯರು ತಮ್ಮ ಹೆಸರನ್ನು ಗೇಲಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ತಮ್ಮ ಹೆಸರನ್ನು ಗೇಲಿ ಮಾಡಿದ್ದಕ್ಕಾಗಿ ಹುಡುಗಿಯರು ಕ್ಷಮೆ ಕೇಳುವಂತೆ ಅವರು ಪ್ರಾಂಶುಪಾಲರನ್ನು ವಿನಂತಿಸಿದ್ದಾರೆ.

ಬೇಸಿಗೆ ರಜೆಯಲ್ಲಿ ಪ್ರಯಾಣಿಸಲು ಯೋಜಿಸುತ್ತಿದ್ದರೆ, ಉತ್ತರಾಖಂಡದ 5 ಸ್ಥಳಗಳು ಇಲ್ಲಿವೆಬೇಸಿಗೆ ರಜೆಯಲ್ಲಿ ಪ್ರಯಾಣಿಸಲು ಯೋಜಿಸುತ್ತಿದ್ದರೆ, ಉತ್ತರಾಖಂಡದ 5 ಸ್ಥಳಗಳು ಇಲ್ಲಿವೆ

ಹುಡುಗರು ತಮ್ಮನ್ನು ಹುಡುಗಿಯರು ಆಕ್ಷೇಪಾರ್ಹ ಹೆಸರುಗಳಿಂದ ಕರೆಯುತ್ತಿದ್ದಾರೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ. ಹುಡುಗಿಯರು ತರಗತಿಯಲ್ಲಿ ಹುಡುಗರನ್ನು 'ಡಮಾರ್' ಮತ್ತು ಇನ್ನೊಂದು 'ರಸ್ಗುಲ್ಲಾ' (ಬಂಗಾಲಿ ಜನಪ್ರಿಯ ಸಿಹಿತಿಂಡಿ) ಎಂದು ಕರೆಯುವ ಮೂಲಕ ತಮಾಷೆ ಮಾಡುತ್ತಿದ್ದಾರೆ. ಇದಲ್ಲದೆ, ತರಗತಿಯ ಹುಡುಗಿಯರು ಹುಡುಗರನ್ನು ತಮ್ಮ ಮಿತಿಯೊಳಗೆ ಇರುವಂತೆ ದಮ್ಕಿ ಹಾಕಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.

They call us Lalla, Rasgulla...: Class 7 boys complaint against girl students

7ನೇ ತರಗತಿಯ ಹುಡುಗರು ತಮ್ಮ ಪತ್ರದಲ್ಲಿ ಹುಡುಗಿಯರು ತರಗತಿಯಲ್ಲಿ ಸಾಕಷ್ಟು ಗಲಾಟೆ ಮಾಡುತ್ತಾರೆ. ಇದು ಅವರ ಅಧ್ಯಯನದ ಮೇಲೆ ಅವರ ಏಕಾಗ್ರತೆಗೆ ಅಡ್ಡಿಯಾಗುತ್ತದೆ ಎಂದು ಉಲ್ಲೇಖಿಸಿದ್ದಾರೆ. ಹುಡುಗಿಯರು ಹಾಡುಗಳನ್ನು ಹಾಡುವುದರಿಂದ ಮತ್ತು ಸಂಭಾಷಣೆಗಳನ್ನು ಜೋರಾಗಿ ಮಾಡುವುದರಿಂದ ಹುಡುಗರಿಗೆ ತೊಂದರೆಯಾಗಿದೆ ಎಂದು ಆರೋಪಿಸಿದ್ದಾರೆ. ತರಗತಿಗೆ ಅಡ್ಡಿಪಡಿಸುವ ಹುಡುಗಿಯರ ಹೆಸರುಗಳು ಮತ್ತು ಆಕ್ಷೇಪಾರ್ಹ ಹೆಸರುಗಳಿಂದ ಹುಡುಗರನ್ನು ಬೆದರಿಸುವ ಪದಗಳೊಂದಿಗೆ ಪತ್ರವು ಮುಕ್ತಾಯಗೊಳ್ಳುತ್ತದೆ.

ಈ ಪತ್ರವು ನೆಟಿಜನ್‌ಗಳ ಗಮನ ಸೆಳೆಯುವಂತೆ ಮಾಡಿದೆ. ಅನೇಕರು ಈ ಪತ್ರವನ್ನು ನಕಲಿ ಎಂದು ಭಾವಿಸಿದ್ದಾರೆ. ಆದರೆ, ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲ ಸಂಜೀವ್ ಅವರು ಸಂಪೂರ್ಣ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದು ಎರಡು ತಿಂಗಳ ಹಳೆಯ ಪತ್ರವಾಗಿದ್ದು ಇತ್ತೀಚೆಗೆ ಬೆಳಕಿಗೆ ಬಂದಿದೆ ಎಂದಿದ್ದಾರೆ.

They call us Lalla, Rasgulla...: Class 7 boys complaint against girl students

Recommended Video

Umran Malik ಬೆಂಕಿ ಬೌಲಿಂಗ್ ಬಗ್ಗೆ ರವಿಶಾಸ್ತ್ರಿ ಕೊಟ್ರು ವಾರ್ನಿಂಗ್ | Oneindia Kannada

ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಿಬ್ಬಂದಿ ಸಭೆ ನಡೆಸಿರುವುದಾಗಿ ಪ್ರಾಂಶುಪಾಲರು ತಿಳಿಸಿದ್ದಾರೆ. ಸಂಜೀವ್ ಅವರ ಪ್ರಕಾರ, ಪತ್ರವನ್ನು ವಾರ್ಡನ್‌ನೊಂದಿಗೆ ಹಂಚಿಕೊಳ್ಳಲಾಯಿತು ಮತ್ತು ಹುಡುಗಿಯರು ಮತ್ತು ಹುಡುಗರಿಬ್ಬರಿಗೂ ಕೌನ್ಸಿಲಿಂಗ್ ಸೆಷನ್ ಮೂಲಕ ವಿಷಯವನ್ನು ಶಾಂತಿಯುತವಾಗಿ ಪರಿಹರಿಸಲಾಗಿದೆ ಎಂದಿದ್ದಾರೆ.

English summary
'They call us Lalla, Rasgulla...': Jawahar Navodaya Vidyalaya in Auraiya, Uttar Pradesh Class 7 boys' complaint against girl students goes viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X