ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಯೋಗಿ ವಿರುದ್ಧ ಪ್ರಚಾರಕ್ಕೆ ಮುಂದಾದ ರೈತ ಸಂಘಟನೆಗಳು

|
Google Oneindia Kannada News

ಲಕ್ನೋ, ಸೆಪ್ಟೆಂಬರ್ 23: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಮುಂದಿನ ವರ್ಷ ನಡೆಯಲಿದ್ದು, ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿ ಪ್ರಯತ್ನ ನಡೆಸಿದೆ. ಆದರೆ ಇನ್ನೊಂದೆಡೆ ರೈತ ಸಂಘಟನೆಗಳು ಯೋಗಿ ವಿರುದ್ಧ ಪ್ರಚಾರ ನಡೆಸಲು ಮುಂದಾಗಿವೆ.

ಸಂಯುಕ್ತ ಕಿಸಾನ್ ಮೋರ್ಚಾ ಮಂಗಳವಾರ ಸಭೆ ನಡೆಸಿದ್ದು, ಸೆಪ್ಟೆಂಬರ್ 27 ರಂದು ಭಾರತ ಬಂದ್‌ಗೆ ಕರೆ ನೀಡಿದ್ದಾರೆ. ಚುನಾವಣೆಗೂ ಮುನ್ನ ರೈತ ಸಂಘಟನೆಗಳು ಮನೆಮನೆಗೂ ತೆರಳಿ ಮೂರು ವಿವಾದಿತ ಕೃಷಿ ಕಾನೂನುಗಳ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದಾರೆ. ಈ ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಬಿಜೆಪಿಯು ಕೃಷಿಯಲ್ಲಿ ಖಾಸಗೀಕರಣವನ್ನು ತರಲು ಪ್ರಯತ್ನಿಸುತ್ತಿದೆ.

ಉತ್ತರ ಪ್ರದೇಶ: ರೈತರ ವಿರುದ್ಧದ ಕೇಸ್ ಹಿಂಪಡೆಯಲು ಸರ್ಕಾರ ನಿರ್ಧಾರಉತ್ತರ ಪ್ರದೇಶ: ರೈತರ ವಿರುದ್ಧದ ಕೇಸ್ ಹಿಂಪಡೆಯಲು ಸರ್ಕಾರ ನಿರ್ಧಾರ

ಸಣ್ಣ ಹಾಗೂ ಮಧ್ಯಮ ರೈತರು ರೈತ ಸಮುದಾಯದ ಶೇ.82ರಷ್ಟಿದ್ದಾರೆ ಹಾಗೂ ಕೃಷಿಯನ್ನು ಖಾಸಗೀಕರಣಗೊಳಿಸುವ ಮೂಲಕ ಮುಂದಿನ ಐದು ವರ್ಷಗಳಲ್ಲಿ ಸಣ್ಣ ರೈತರನ್ನು ಬದಿಗೊತ್ತಲಾಗುತ್ತದೆ ಎಂದು ಅಖಿಲ ಭಾರತೀಯ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಅತುಲ್ ಅಂಜನ್ ಹೇಳಿದ್ದಾರೆ.

The Samyukta Kisan Morcha Hold A Panchayat At Gorakhpur, Which Is the Bastion Of Yogi

ಅಂತಹ ಸಣ್ಣ ರೈತರ ಭೂಮಿಗಳು ಅಂತಿಮವಾಗಿ ದೊಡ್ಡ ಕಂಪನಿಗಳಿಗೆ ಹೋಗುತ್ತದೆ, ರೈತರು ಕಾರ್ಪೊರೇಟ್ ದಾಸರಾಗುತ್ತಾರೆ ದೇಶದಲ್ಲಿ ಶೇ.70ರಷ್ಟು ಯುವಕರು ಕೃಷಿಗೆ ಸಂಬಂಧಿಸಿದ ವ್ಯಾಪಾರವನ್ನು ಅವಲಂಬಿಸಿದ್ದಾರೆ, ಇದು ಕೇವಲ ರೈತರಿಗೆ ಮಾತ್ರವಲ್ಲ ದೇಶಕ್ಕೂ ದುರಂತವಾಗಲಿದೆ ಎಂದು ಹೇಳಿದ್ದಾರೆ. ರೈತ ಸಂಘಟನೆಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ಬಿಜೆಪಿಗೆ ಮತವನ್ನು ನೀಡದಂತೆ ಕೇಳಿಕೊಂಡಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೇಶದ ರೈತರು ಕಳೆದ ಒಂದು ವರ್ಷಗಳಿಂದ ಸತತವಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೂ ಕೇಂದ್ರ ಸರ್ಕಾರ ಮಾತ್ರ ಈ ಕಾಯ್ದೆಗಳನ್ನು ಹಿಂಪಡೆಯುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ.

ಈ ನಡುವೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಸೆಡ್ಡು ಹೊಡೆದಿರುವ ಸಂಯುಕ್ತ ಕಿಸಾನ್ ಮೋರ್ಚಾ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಕಿಸಾನ್ ಮಹಾಪಂಚಾಯತ್ ಆಯೋಜಿಸಿದೆ. ಒಕ್ಕೂಟ ಸರ್ಕಾರದ ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆ ತೀವ್ರಗೊಂಡಿದೆ. ಬಿಗಿ ಭದ್ರತೆ ನಡುವೆ ನಡೆಯುತ್ತಿರುವ ಕಿಸಾನ್ ಮಹಾಪಂಚಾಯತ್‌ಗೆ ಉತ್ತರ ಪ್ರದೇಶದ ಪೊಲೀಸರು ಮುಜಾಫರ್‌ನಗರದಲ್ಲಿ ಭಾರಿ ಭದ್ರತೆ ಹೆಚ್ಚಿಸಿದ್ದಾರೆ.

ವಿಧಾನಸಭಾ ಚುನಾವಣೆಗೆ ಸಜ್ಜುಗೊಳ್ಳುತ್ತಿರುವ ಉತ್ತರಪ್ರದೇಶಕ್ಕೆ ಈ ಕಿಸಾನ್ ಮಹಾಪಂಚಾಯತ್‌ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಈ ಹಿಂದೆ ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ವ್ಯಂಗ್ಯಚಿತ್ರವನ್ನು ಪೋಸ್ಟ್ ಮಾಡಿ ಖಂಡನೆಗೆ ಒಳಗಾಗಿತ್ತು.

ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದು ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಬೃಹತ್ ಸಭೆ ನಡೆಸಿದರು.

ಅಲ್ಲಿ ಅವರು ಮುಂಬರುವ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ ಮತ್ತು ಚಳವಳಿ ಮುಂದುವರಿಸುವ ತಮ್ಮ ನಿರ್ಧಾರವನ್ನು ಪುನರುಚ್ಚರಿಸಿದರು. ಬೆರಳೆಣಿಕೆಯಷ್ಟು ರೈತರು ಮಾತ್ರ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕೇಂದ್ರ ಹೇಳುತ್ತಿದೆ.

ಆ ಕೆಲವೇ ಕೆಲವು ರೈತರು ಹೇಗೆ ಪ್ರತಿಭಟಿಸುತ್ತಿದ್ದಾರೆ ಎಂಬುದನ್ನು ನೋಡೋಣ. ನಾವು ಧ್ವನಿ ಎತ್ತೋಣ ಆದ್ದರಿಂದ ಸಂಸತ್ತಿನಲ್ಲಿ ಕುಳಿತವರ ಕಿವಿಗೆ ಅದು ತಲುಪುತ್ತದೆ" ರೈತರು ಹೇಳಿದ್ದಾರೆ.

ರಾಕೇಶ್ ಟಿಕಾಯತ್ ಮತ್ತು ಇತರ ರೈತ ಮುಖಂಡರು ಭಾಗವಹಿಸಿದ ಈ ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸುಮಾರು 8,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೂಟ ನಡೆಯುತ್ತಿರುವ ಐತಿಹಾಸಿಕ ಜಿಐಸಿ ಮೈದಾನದಲ್ಲಿ ರೈತರಿಂದ ಸ್ಥಳ ಕಿಕ್ಕಿರಿದು ತುಂಬಿದೆ.

ಸರ್ಕಾರ ಏನನ್ನಾದರೂ ಅರ್ಥಮಾಡಿಕೊಂಡರೆ ಒಳ್ಳೆಯದು. ಇಂತಹ ಸಭೆಗಳನ್ನು ದೇಶಾದ್ಯಂತ ನಡೆಸಲಾಗುವುದು. ನಾವು ದೇಶವನ್ನು ಮಾರಾಟ ಮಾಡದಂತೆ ಉಳಿಸಬೇಕಾಗಿದೆ. ರೈತರು, ಕಾರ್ಮಿಕರು ಮತ್ತು ಯುವಕರಿಗೆ ಬದುಕಲು ಅವಕಾಶ ನೀಡಬೇಕು ಎಂದು ಮಹೇಂದ್ರ ಸಿಂಗ್ ಟಿಕಾಯತ್ ಪುತ್ರ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ರಾಜ್ಯದಾದ್ಯಂತ ಇಂತಹ ಪ್ರತಿಭಟನೆಗಳನ್ನು ಮುಂದುವರಿಸಲು ರೈತರು ನಿರ್ಧರಿಸಿದ್ದಾರೆ. ಅಲ್ಲಿ ಅವರು ಮುಂದಿನ ವರ್ಷದ ಚುನಾವಣೆಗೆ ಮುನ್ನ ಆಡಳಿತಾರೂಢ ಯೋಗಿ ಆದಿತ್ಯನಾಥ ಸರ್ಕಾರದ ವಿರುದ್ಧ ಪ್ರಚಾರ ನಡೆಸಲಿದ್ದಾರೆ.

ಅವರು ತಮ್ಮ ಸಂದೇಶವನ್ನು ರಾಜ್ಯದ ಪ್ರತಿಯೊಂದು ಗ್ರಾಮಕ್ಕೂ ತಲುಪಿಸಲು ಯೋಜಿಸಿದ್ದಾರೆ. ಅವರು ಸೆಪ್ಟೆಂಬರ್ 27 ರಂದು ಅಖಿಲ ಭಾರತ ಮುಷ್ಕರವನ್ನು ನಡೆಸಲು ಯೋಜಿಸಿದ್ದಾರೆ.

English summary
Ahead of next year's Uttar Pradesh Assembly election, farmer unions are trying to penetrate into the Purvanchal area with the aim to sensitise the locals about the three contentious farm laws and campaign against the ruling Bharatiya Janata Party (BJP).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X