ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರೀಂಕೋರ್ಟ್ ಅಯೋಧ್ಯೆ ತೀರ್ಪನ್ನು ಏಕಾಏಕಿ ಪ್ರಕಟಿಸಲು ಕಾರಣವೇನು?

|
Google Oneindia Kannada News

ಲಕ್ನೋ, ನವೆಂಬರ್ 10: ಅಯೋಧ್ಯೆ ತೀರ್ಪನ್ನು ಏಕಾಏಕಿ ಪ್ರಕಟಿಸಲು ಕಾರಣವೇನು? ನವೆಂಬರ್ 17ರ ಒಳಗೆ ತೀರ್ಪು ಪ್ರಕಟವಾಗಲಿದೆ ಎಂದು ಅಂದುಕೊಳ್ಳುತ್ತಿರುವಾಗಲೇ ನಾಳೆಯೇ ತೀರ್ಪು ಪ್ರಕಟ ಎಂದು ಹೇಳಿದ್ಯಾಕೆ?

ಸುಪ್ರೀಂಕೋರ್ಟ್ ತೀರ್ಪು ನೀಡಲು ಸಿದ್ಧವಿದ್ದರೂ ಕೂಡ ಉತ್ತರ ಪ್ರದೇಶದಲ್ಲಿ ಜನರ ಭದ್ರತೆಯೂ ಕೂಡ ಕೋರ್ಟ್‌ಗೆ ಮುಖ್ಯವಾದ ವಿಚಾರವಾಗಿತ್ತು. ಹಾಗಾಗಿ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಯೋಗಿ ಸರ್ಕಾರ ಸಿದ್ಧವಿದೆ. ಸಂಪೂರ್ಣ ಬಂದೋಬಸ್ತ್ ಮಾಡಲಾಗಿದೆ ಎಂದು ಹೇಳಿದ ಬಳಿಕವೇ ತೀರ್ಪನ್ನು ಪ್ರಕಟಿಸಿತು.

ಕಳೆದ ಎರಡು ವಾರಗಳಿಂದ ಉತ್ತರ ಪ್ರದೇಶದ ರೈಲ್ವೆ ನಿಲ್ದಾಣಗಳು, ಮಂದಿರ, ಮಸೀದಿ ಇನ್ನಿತರೆ ಧಾರ್ಮಿಕ ಸ್ಥಳಗಳು, ಶಾಲೆ, ಕಾಲೇಜು ಸೇರಿದಂತೆ ಎಲ್ಲಾ ಕಡೆಗಳನ್ನು ಭದ್ರತೆಯನ್ನು ಹೆಚ್ಚಿಸಲಾಗಿದೆ.

ಯಾವುದೇ ಸಂದರ್ಭದಲ್ಲೂ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಉತ್ತರ ಪ್ರದೇಶದ ಸನ್ನದ್ಧವಾಗಿದೆ ಅಧಿಕಾರಿಗಳು ಸಿದ್ಧರಾಗಿದ್ದಾರೆ ಎನ್ನುವ ಅಭಯ ಸುಪ್ರೀಂಕೋರ್ಟ್‌ಗೆ ತಲುಪಿದ ಬಳಿಕ ತೀರ್ಪನ್ನು ನೀಡುವ ದಿನಾಂಕವನ್ನು ಪ್ರಕಟಿಸಲಾಯಿತು.

ರಾಮ ಮಂದಿರ-ಬಾಬ್ರಿ ಮಸೀದಿ ಭೂ ವಿವಾದದ ಅಯೋಧ್ಯೆಯ ತೀರ್ಪಿನ ದೃಷ್ಟಿಯಿಂದ ಇಡೀ ರಾಷ್ಟ್ರಕ್ಕೆ, ವಿಶೇಷವಾಗಿ ಉತ್ತರ ಪ್ರದೇಶಕ್ಕೆ ಇದು ಒಂದು ದೊಡ್ಡ ದಿನವಾಗಿತ್ತು. ರಾಜ್ಯದಲ್ಲಿ ಭದ್ರತೆ ಖಾತ್ರಿಪಡಿಸಿಕೊಳ್ಳಲು ಉತ್ತರ ಪ್ರದೇಶ ಸರ್ಕಾರ ಮತ್ತು ಅಧಿಕಾರಿಗಳು ಕ್ರಮ ಕೈಗೊಂಡಿದ್ದರು.

ಅಯೋಧ್ಯಾ ತೀರ್ಪು: ಗಮನಿಸಬೇಕಾದ ಕುತೂಹಲಕಾರಿ 10 ಸಂಗತಿಗಳುಅಯೋಧ್ಯಾ ತೀರ್ಪು: ಗಮನಿಸಬೇಕಾದ ಕುತೂಹಲಕಾರಿ 10 ಸಂಗತಿಗಳು

ತೀರ್ಪಿನ ಮೊದಲು ಮತ್ತು ನಂತರ ಯಾವುದೇ ಘಟನೆಯನ್ನು ನಿಭಾಯಿಸಲು ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಎಲ್ಲರೂ ಸಿದ್ಧರಾಗಿದ್ದರು.

ಜನರ ಸುರಕ್ಷತೆಗಾಗಿ ಒಂದು ವಾರದಿಂದ ಸಿದ್ಧತೆ

ಜನರ ಸುರಕ್ಷತೆಗಾಗಿ ಒಂದು ವಾರದಿಂದ ಸಿದ್ಧತೆ

ಜನರ ಸುರಕ್ಷತೆ ಮತ್ತು ಸಮಾಜದಲ್ಲಿ ಸಾಮರಸ್ಯವನ್ನು ಖಚಿತಪಡಿಸಿಕೊಳ್ಳಲು ಕಳೆದ ಕೆಲವು ವಾರಗಳಿಂದ ದೊಡ್ಡ ಪ್ರಮಾಣದಲ್ಲಿ ಸಿದ್ಧತೆ ನಡೆಸುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ, ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಡಿಜಿಪಿಯನ್ನು ಭೇಟಿಯಾದ ನಂತರ ಶನಿವಾರ ಬೆಳಿಗ್ಗೆ ತೀರ್ಪು ಪ್ರಕಟಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿತ್ತು.

ಉತ್ತರ ಪ್ರದೇಶ ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧವಾಗಿತ್ತು

ಉತ್ತರ ಪ್ರದೇಶ ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧವಾಗಿತ್ತು

ಸರ್ಕಾರದ ಮೂಲಗಳ ಪ್ರಕಾರ, ಯಾವುದೇ ಪರಿಸ್ಥಿತಿಗೆ ಸಿದ್ಧವಾಗಿದೆ ಎಂದು ಯುಪಿ ಸರ್ಕಾರದ ಭರವಸೆ ನೀಡಿದ ನಂತರ ಸುಪ್ರೀಂ ಕೋರ್ಟ್ ಶನಿವಾರ ತೀರ್ಪು ನೀಡಲು ನಿರ್ಧರಿಸಿತ್ತು.

ಭದ್ರತೆಯ ವಿಷಯ ಮುನ್ನೆಲೆಗೆ ಬಂದಿತ್ತು

ಭದ್ರತೆಯ ವಿಷಯ ಮುನ್ನೆಲೆಗೆ ಬಂದಿತ್ತು

ಮುಖ್ಯ ನ್ಯಾಯಮೂರ್ತಿಯಿಂದ ಅನುಮೋದನೆ ಪಡೆದ ನಂತರ, ಯುಪಿ ಸರ್ಕಾರವು ಭದ್ರತೆಗೆ ವಿಷಯ ಮುನ್ನಲೆಗೆ ಬಂದಿತ್ತು.

ಆದಿತ್ಯನಾಥ್ ಅವರು ಲಕ್ನೋದ ಹಿರಿಯ ಅಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ಸಭೆಯನ್ನು ಕರೆದು, ಪ್ರತಿ ಸೂಕ್ಷ್ಮ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದರು. ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಸೂಕ್ಷ್ಮ ನಗರಗಳಲ್ಲಿ ಉಳಿಯಲು ನಿರ್ದೇಶಿಸಿದರು.

ಸೋಶಿಯಲ್ ಮೀಡಿಯಾದಲ್ಲಿ ವದಂತಿ

ಸೋಶಿಯಲ್ ಮೀಡಿಯಾದಲ್ಲಿ ವದಂತಿ

ದಾಖಲೆಗಳ ಪ್ರಕಾರ, ಸೋಶಿಯಲ್ ಮೀಡಿಯಾದಲ್ಲಿ ವದಂತಿಗಳು ಮತ್ತು ದ್ವೇಷ ಸಂದೇಶಗಳನ್ನು ಹರಡಿದ ಆರೋಪದ ಮೇಲೆ 72 ಜನರನ್ನು ಬಂಧಿಸಲಾಗಿದೆ ಮತ್ತು ತೀರ್ಪಿನ ನಂತರ ನಕಾರಾತ್ಮಕ ಸಂದೇಶಗಳನ್ನು ಹರಡಿದ ಮೂವರನ್ನು ಬಂಧಿಸಲಾಗಿದೆ.

ಅಯೋಧ್ಯೆ ತೀರ್ಪು ಏನು?

ಅಯೋಧ್ಯೆ ತೀರ್ಪು ಏನು?

ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ಸ್ಥಾಪನೆ ಮಾಡಬೇಕು ಎಂದು ಕೇಂದ್ರಕ್ಕೆ ಸೂಚನೆ ನೀಡಿದ ಸುಪ್ರೀಂಕೋರ್ಟ್, ಮಸೀದಿ ನಿರ್ಮಾಣಕ್ಕಾಗಿ ಐದು ಎಕರೆ ಭೂಮಿಯನ್ನು ಪರ್ಯಾಯವಾಗಿ ಸುನ್ನಿ ವಕ್ಫ್ ಮಂಡಳಿಗೆ ಒದಗಿಸಬೇಕು ಎಂದು ಹೇಳಿದೆ.

ವಿವಾದಿತ ಭೂಮಿಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟಿಗಳನ್ನು ಒಳಗೊಂಡ ಮಂಡಳಿ ರಚನೆಗೆ ಮೂರು ತಿಂಗಳಲ್ಲಿ ಯೋಜನೆಯೊಂದನ್ನು ರೂಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದೆ.

ಮಂದಿರ ನಿರ್ಮಾಣಕ್ಕೆ ಜತೆಯಾಗಿ ಕೆಲಸ ಮಾಡೋಣ: ಮೋಹನ್ ಭಾಗ್ವತ್ ಮಂದಿರ ನಿರ್ಮಾಣಕ್ಕಾಗಿ ಸಂಪೂರ್ಣ 2.77 ಎಕರೆ ವಿವಾದಿತ ಭೂಮಿಯನ್ನು ಸುಪ್ರೀಂಕೋರ್ಟ್ ನೀಡಿದೆ.

English summary
It was a big day for the entire nation, especially for Uttar Pradesh, in view of the Ayodhya verdict on Ram Mandir-Babri Masjid land dispute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X