ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಕುಸಿದ ಆರೋಗ್ಯ ವ್ಯವಸ್ಥೆ: ದೇವರ ಮೊರೆ ಹೋಗುತ್ತಿರುವ ಜನರು

|
Google Oneindia Kannada News

ಲಕ್ನೋ, ಮೇ 13: ಮಾಹಾಮಾರಿ ಕೋರೊನಾ 2ನೇ ತರಂಗವು ಗ್ರಾಮೀಣ ಭಾರತಕ್ಕೂ ಹರಡಲು ಪ್ರಾರಂಭಿಸಿದೆ. ಉತ್ತರ ಪ್ರದೇಶದ ಕಾನ್ಪುರ್ ಜಿಲ್ಲೆಯ ಭದ್ರಾಸ್ ಗ್ರಾಮದಲ್ಲಿ, ಏಪ್ರಿಲ್ ತಿಂಗಳಲ್ಲಿ 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ.

ಗ್ರಾಮೀಣ ಭಾಗದ ಯಾರೊಬ್ಬರೂ ಕೋವಿಡ್ ಪರೀಕ್ಷೆಗೆ ಒಳಗಾಗದ ಕಾರಣ ಅವರು ಕೋವಿಡ್-19 ನಿಂದ ಮೃತಪಟ್ಟಿದ್ದಾರೆಯೇ ಎಂದು ತಿಳಿಯಲು ಯಾವುದೇ ಸೌಕರ್ಯಗಳಿಲ್ಲ ಎಂದು ಸ್ಥಳೀಯ ಪತ್ರಕರ್ತರೊಬ್ಬರು ಹೇಳಿದ್ದಾರೆ. ಆದರೂ, ರೋಗಲಕ್ಷಣಗಳು ಕೊರೊನಾಗೆ ಹೊಂದಾಣಿಯಾಗುತ್ತಿವೆ.

ಕೋವಿಡ್ ಪರೀಕ್ಷಾ ಸೌಲಭ್ಯಗಳಿಲ್ಲ

ಕೋವಿಡ್ ಪರೀಕ್ಷಾ ಸೌಲಭ್ಯಗಳಿಲ್ಲ

ಕಡಿಮೆ ಅಂತರ ಮತ್ತು ದೂರದ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷಾ ಸೌಲಭ್ಯಗಳಿಲ್ಲದ ಕಾರಣ, ಉತ್ತರ ಪ್ರದೇಶದ ಗ್ರಾಮೀಣ ಭಾಗದ ಆರೋಗ್ಯ ವ್ಯವಸ್ಥೆಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಮತ್ತು ಜನರು ಈಗ ತಮ್ಮ ರಕ್ಷಣೆಗಾಗಿ ಧಾರ್ಮಿಕ ಆಚರಣೆಗಳತ್ತ ಮುಖ ಮಾಡಿದ್ದಾರೆ.

ಎಟಾವಾ ಜಿಲ್ಲೆಯ ಕೋವಿಡ್ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡಿದ್ದು, ಇದೇ ರೀತಿಯ ಪರಿಸ್ಥಿತಿ ಅನೇಕ ಗ್ರಾಮೀಣ ಪ್ರದೇಶಗಳಿಂದ ಬಂದಿದೆ. ಸೋಂಕಿತರನ್ನು ದೊಡ್ಡ ಆಸ್ಪತ್ರೆಗಳಿಗೆ ಸೇರಿಸುವ ವೇಳೆಗೆ ಅನೇಕ ರೋಗಿಗಳ ಸ್ಥಿತಿ ಗಂಭೀರವಾಗಿರುತ್ತದೆ.

ಬಹಿರಂಗವಾಗಿ ಮಲವಿಸರ್ಜನೆ

ಬಹಿರಂಗವಾಗಿ ಮಲವಿಸರ್ಜನೆ

ಎಟಾವಾ ಜಿಲ್ಲೆಯ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಾದ ಬಿ.ಆರ್.ಅಂಬೇಡ್ಕರ್ ಆಸ್ಪತ್ರೆಯಲ್ಲಿ, ಕೋವಿಡ್ ವಾರ್ಡ್‌ಗಳಲ್ಲಿ ಕೆಲಸ ಮಾಡುವುದಿಲ್ಲ ಎಂದು ನೈರ್ಮಲ್ಯ ಕಾರ್ಮಿಕರು ಹೇಳಿದ್ದು, ಹೀಗಾಗಿ 100 ಹಾಸಿಗೆಗಳ ಕೋವಿಡ್ ವಾರ್ಡ್‌ನ ಸ್ನಾನಗೃಹಗಳನ್ನು ಲಾಕ್ ಮಾಡಲಾಗಿದೆ. ಇದರ ಪರಿಣಾಮವಾಗಿ ಪುರುಷರು ಮತ್ತು ಮಹಿಳೆಯರೆನ್ನದೆ, ರೋಗಿಗಳು ಮತ್ತು ಅವರ ಪರಿಚಾರಕರು ಆಸ್ಪತ್ರೆಯ ಹೊರಗೆ ಬಹಿರಂಗವಾಗಿ ಮಲವಿಸರ್ಜನೆ ಮಾಡುತ್ತಿದ್ದಾರೆ.

"ನಾವು ಕೈ ಮತ್ತು ಆಹಾರ ತಟ್ಟೆಗಳನ್ನು ತೊಳೆಯುವ ಟ್ಯಾಪ್ ಇದೆ. ಆದರೆ, ಆ ಟ್ಯಾಪ್ ಬಳಿಯೇ ಜನರು ಮಲವಿಸರ್ಜನೆ ಮಾಡುತ್ತಿದ್ದಾರೆ. ಅವರು ಬೇರೆಲ್ಲಿಗೆ ಹೋಗಬೇಕು? " ಎಂದು ಸೋಂಕಿತನ ಪತ್ನಿ ಖಾಸಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

(Photo Courtesy- India Today)

ಸಾಮಾಜಿಕ ಅಂತರ ದೂರದ ಕನಸಾಗಿದೆ

ಸಾಮಾಜಿಕ ಅಂತರ ದೂರದ ಕನಸಾಗಿದೆ

ಕೋವಿಡ್ ವಾರ್ಡ್ ಒಳಗಡೆ ಕಸದ ದಿಬ್ಬಗಳಿದ್ದು, ಇನ್ನು ಸಾಮಾಜಿಕ ಅಂತರ ದೂರದ ಕನಸಾಗಿದೆ. ಜನರು ವಾರ್ಡ್‌ನ ಪ್ರವೇಶ ದ್ವಾರದಲ್ಲಿಯೇ ಮಲಗುತ್ತಿದ್ದು, ಯಾರು ಬೇಕಾದರೂ ಒಳಗೆ ಹೋಗಬಹುದಾಗಿದ್ದು, ಇಲ್ಲಿ ಯಾವುದೇ ಭದ್ರತೆ ಇಲ್ಲದಂತಾಗಿದೆ.

ಕೋವಿಡ್ ಆಸ್ಪತ್ರೆಯ ಆಡಳಿತ ಮಂಡಳಿಯನ್ನಾಗಲಿ ಅಥವಾ ವೈದ್ಯಕೀಯ ಸಿಬ್ಬಂದಿಯನ್ನಾಗಲಿ ಯಾರೂ ಸಿಗುತ್ತಿಲ್ಲ. ರೋಗಿಗಳನ್ನು ಅವರ ಕುಟುಂಬ ಸದಸ್ಯರೇ ನೋಡಿಕೊಳ್ಳುತ್ತಿದ್ದಾರೆ.

"ಆಸ್ಪತ್ರೆಯಲ್ಲಿ ಸಹಾಯ ಮಾಡಲು ಯಾರೂ ಇಲ್ಲ. ಆಮ್ಲಜನಕ ಸಿಲಿಂಡರ್‌ಗಳನ್ನು ನಾವೇ ತೆರೆಯಬೇಕು ಮತ್ತು ಅದು ಹೇಗೆ ಎಂದು ನಮಗೆ ತಿಳಿದಿಲ್ಲ" ಎಂದು ಮತ್ತೊಬ್ಬ ಸೋಂಕಿತನ ಪರಿಚಾರಕ ಹೇಳಿದ್ದಾರೆ.

(Photo Courtesy- India Today)

ಯಾವ ಔಷಧಿಗಳನ್ನು ನೀಡಬೇಕೆಂದೂ ತಿಳಿದಿಲ್ಲ

ಯಾವ ಔಷಧಿಗಳನ್ನು ನೀಡಬೇಕೆಂದೂ ತಿಳಿದಿಲ್ಲ

ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿರುವ ಯುವತಿಯೊಬ್ಬಳು, ಆಸ್ಪತ್ರೆಯಲ್ಲಿ ರಕ್ತದೊತ್ತಡ ಪರೀಕ್ಷಿಸುವ ಯಂತ್ರವಿಲ್ಲ ಎಂದು ಹೇಳಿದ್ದಾರೆ. ಆಕೆಯ ತಾಯಿ ಬಿಪಿ ರೋಗಿಯಾಗಿದ್ದು, ಆದರೆ ಪರೀಕ್ಷಿಸಲು ಯಾವುದೇ ಸೌಲಭ್ಯಗಳಿಲ್ಲ. ಅದಕ್ಕೆ ಯಾವ ಔಷಧಿಗಳನ್ನು ನೀಡಬೇಕೆಂದೂ ನಮಗೆ ತಿಳಿದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಖಾಸಗಿ ಸುದ್ದಿ ಮಾಧ್ಯಮದವರು ಜಿಲ್ಲಾ ಅಧಿಕಾರಿಗಳನ್ನು ಸಂಪರ್ಕಿಸಿದ ಹಲವು ಗಂಟೆಗಳ ನಂತರ, ಉತ್ತರಪ್ರದೇಶ ಪೊಲೀಸರು ಈ ವಿಷಯವನ್ನು ಅರಿತುಕೊಂಡು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದರೆ, ಸದ್ಯ ವಾರ್ಡ್ ಒಳಗಿನಿಂದ ಕಸವನ್ನು ತೆರವುಗೊಳಿಸಿದ್ದನ್ನು ಬಿಟ್ಟರೆ ಬೇರೇನೂ ಬದಲಾಗಿಲ್ಲ ಎಂದು ತಿಳಿದುಬಂದಿದೆ.

English summary
COVID-19: In Bhadras village in Uttar Pradesh's Kanpur district, more than 20 people have been killed in the month of April. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X