• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾರಾಣಸಿಯಲ್ಲಿ ಕೊರೊನಾ ಹೆಚ್ಚಳ, ಮೋದಿ 3 ಸೂತ್ರಗಳ ಪುನರುಚ್ಚಾರ

|

ವಾರಾಣಸಿ, ಏಪ್ರಿಲ್ 18: ಉತ್ತರ ಪ್ರದೇಶದ ವಾರಾಣಸಿಯ ಕೊರೊನಾ ಪರಿಸ್ಥಿತಿಗಳ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಭೆ ಕರೆದಿದ್ದರು
.
ಪ್ರಧಾನಿ ಮೋದಿಯವರು ಹಿರಿಯ ಅಧಿಕಾರಿಗಳು, ಸ್ಥಳೀಯ ಆಡಳಿತ ಅಧಿಕಾರಿಗಳು, ವೈದ್ಯರ ಜತೆ ಸಮಾಲೋಚನೆ ನಡೆಸಿದ್ದಾರೆ. ಟೆಸ್ಟ್, ಟ್ರ್ಯಾಕ್, ಟ್ರೀಟ್ಮೆಂಟ್ ಎನ್ನುವ ಮೂರು ಸೂತ್ರಗಳನ್ನು ಪುನರುಚ್ಚರಿಸಿದ್ದಾರೆ.

ಮಹಾರಾಷ್ಟ್ರ ಕೊರೊನಾ 3ನೇ ಅಲೆಗೆ ಸಿದ್ಧಗೊಳ್ಳುತ್ತಿದೆ: ಆದಿತ್ಯ ಠಾಕ್ರೆಮಹಾರಾಷ್ಟ್ರ ಕೊರೊನಾ 3ನೇ ಅಲೆಗೆ ಸಿದ್ಧಗೊಳ್ಳುತ್ತಿದೆ: ಆದಿತ್ಯ ಠಾಕ್ರೆ

ಸ್ಥಳೀಯ ಆಡಳಿತ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ, ಕೊರೊನಾ ಸೋಂಕಿತರಿಗೆ ಆಸ್ಪತ್ರೆ, ಬೆಡ್, ವಂಟಿಲೇಟರ್ , ಆಮ್ಲಜನಕ ಸೇರಿದಂತೆ ವೈದ್ಯಕೀಯ ಸೌಲಭ್ಯಸರಿಯಾಗಿ ಪೂರೈಕೆಯಾಗುವಂತೆ ಹಾಗೂ ಸಿಗುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯಕ್ಕೆ ಸೂಚನೆ ನೀಡಿದ್ದಾರೆ.

ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಆರೈಕೆಗೆ ಸರಿಯಾದ ಕೋವಿಡ್ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದಿದ್ದಾರೆ. ಇನ್ನು ಲಸಿಕೆ ವಿತರಣೆ ಕುರಿತು ಮಾಹಿತಿ ನೀಡಿ, ರೆಮ್‌ಡಿಸಿವಿರ್ ಸೇರಿದಂತೆ ಇತರೆ ಲಸಿಕೆ ಪೂರೈಕೆ ಅಭಾವ ಬಗೆ ಹರಿಸಲು ತೆಗೆದುಕೊಂಡ ಕ್ರಮಗಳ ವರದಿ ಪಡೆದುಕೊಂಡಿದ್ದಾರೆ.

ಆಮ್ಲಜನಕ ಕೊರತೆಯಾಗದಂತೆ ನೋಡಿಕೊಳ್ಳಲು ಮೋದಿ ಸೂಚನೆ ನೀಡಿದ್ದಾರೆ. ಪಿಎಂ ಕೇರ್ಸ್‌ನಿಂದ 32 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು 162 ಪಿಎಸ್‌ಎ ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

English summary
Prime Minister Narendra Modi on Sunday took a detailed review of the Covid situation in Uttar Pradesh’s Varanasi, which is also Prime Minister’s Lok Sabha constituency. During the virtual meeting, the Prime Minister told the officials that he was constantly getting feedback on the developments in Varanasi which has recently reported a very high positivity rate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X