ಪರೀಕ್ಷೆ ವೇಳೆಯೇ ಕಾಲೇಜು ಆವರಣದಲ್ಲಿ ಶಾಲಾ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
ಖಾನ್ಪುರ, ಅಕ್ಟೋಬರ್ 13: ಉತ್ತರ ಪ್ರದೇಶದ ಪ್ರಾಂತೀಯ ನಾಗರಿಕ ಸೇವೆಗಳ (ಪಿಸಿಎಸ್) ಪ್ರಾಥಮಿಕ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಝಾನ್ಸಿ ಕಾಲೇಜು ಕ್ಯಾಂಪಸ್ ಅವರಣದಲ್ಲೇ 10ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಉತ್ತರ ಪ್ರದೇಶದ ಹತ್ರಾಸ್ನಲ್ಲಿ ದಲಿತ ಯುವತಿಯನ್ನು ಎಳೆದೊಯ್ದು ನಾಲ್ವರು ಅತ್ಯಾಚಾರವೆಸಗಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ಘಟಿಸಿದೆ.
3 ವಿಡಿಯೋಗಳಲ್ಲಿ ತನ್ನ ಮೇಲಾದ ಅತ್ಯಾಚಾರದ ಬಗ್ಗೆ ಮಾಹಿತಿ ನೀಡಿದ್ದ ಹತ್ರಾಸ್ ಸಂತ್ರಸ್ತೆ
ಈ ಘಟನೆ ಇದೀಗ ದೇಶದಾದ್ಯಂತ ದೊಡ್ಡ ಮಟ್ಟದ ಪ್ರತಿಭಟನೆ ಮತ್ತು ಜನರ ಆಕ್ರೋಶಕ್ಕೆ ಕಾರಣವಾಗಿರುವ ಬೆನ್ನಲ್ಲೇ 17 ವರ್ಷದ ವಿದ್ಯಾರ್ಥಿನಿ ಮೇಲೆ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ವಿದ್ಯಾರ್ಥಿನಿ ತನ್ನ ದೂರಿನಲ್ಲಿ, ಕಾಲೇಜಿನ ಸುಮಾರು 12 ಮಂದಿ ವಿದ್ಯಾರ್ಥಿಗಳು ಬಲವಂತವಾಗಿ ತನ್ನನ್ನು ಕ್ಯಾಂಪಸ್ ಒಳಗೆ ಎಳೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾರೆ. ಘಟನೆಯನ್ನು ವಿಡಿಯೋ ಮಾಡಿಕೊಂಡು ಯಾರಿಗಾದರೂ ವಿಷಯ ಬಹಿರಂಗಪಡಿಸಿದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಹೆಚ್ಚಿನ ತನಿಖೆ ನಡೆಯುತ್ತಿದೆ ಮತ್ತು ಅಪರಾಧದಲ್ಲಿ ಬೇರೆ ಯಾವುದೇ ವಿದ್ಯಾರ್ಥಿಗಳ ಹೆಸರುಗಳು ಕಾಣಿಸಿಕೊಂಡರೆ, ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳಾದ ರೋಹಿತ್ ಸೈನಿ ಮತ್ತು ಭಾರತ್ ಕುಶ್ವಾಹ ಸೇರಿದಂತೆ ಎಂಟು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಝಾನ್ಸಿ ಹಿರಿಯ ಪೊಲೀಸ್ ಅಧಿಕಾರಿ (ಎಸ್ಎಸ್ಪಿ) ದಿನೇಶ್ ಕುಮಾರ್.ಪಿ ತಿಳಿಸಿದ್ದಾರೆ.
ಪೊಲೀಸರು ವಿವಿಧ ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರದ ಆರೋಪ) 395 (ಡಕಾಯಿತಿ), 386 (ಸುಲಿಗೆ), 323 (ನೋವನ್ನುಂಟುಮಾಡುವುದು) ಭಾರತೀಯ ದಂಡ ಸಂಹಿತೆಯ 120 ಬಿ (ಕ್ರಿಮಿನಲ್ ಪಿತೂರಿ) ಮತ್ತು ಐಟಿ ಸೆಕ್ಷನ್ 66 ಡಿ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಆಕ್ಟ್ ಮತ್ತು ಪೊಕ್ಸೊ ಕಾಯ್ದೆಯ ಸೆಕ್ಷನ್ 3/4 ಇದರಲ್ಲಿ ಆರೋಪಿ ರೋಹಿತ್ ಸೈನಿ ಮತ್ತು ಭಾರತ್ ಕುಶ್ವಾಹ ಹೆಸರನ್ನು ಸೇರಿಸಲಾಗಿದೆ.
ಆರೋಪಿಗಳಾದ ಶೈಲೇಂದ್ರ ನಾಥ್ ಪಾಠಕ್, ಮಾಯಾಂಕ್ ಶಿವಾರೆ, ವಿಪಿನ್ ತಿವಾರಿ, ಮೋನು ಪರಿ, ಧರ್ಮೇಂದ್ರ ಸೇನ್ ಮತ್ತು ಸಂಜಯ್ ಕುಶ್ವಾಹ ಅವರನ್ನು ಪೊಲೀಸರು ಬಂಧಿಸಿದ್ದಾರೆ "ಎಂದು ಎಸ್ಎಸ್ಪಿ ಮಾಹಿತಿ ನೀಡಿದ್ದಾರೆ.