ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾ ಗ್ರೂಪ್‌ ನಿಂದ ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

|
Google Oneindia Kannada News

ನೋಯ್ಡಾ, ಜೂನ್ 03; ಟಾಟಾ ಗ್ರೂಪ್‌ನ ಮೂಲಸೌಕರ್ಯ ಮತ್ತು ನಿರ್ಮಾಣ ವಿಭಾಗವಾದ ಟಾಟಾ ಪ್ರಾಜೆಕ್ಟ್ಸ್ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಜೆವಾರ್‌ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸುವ ಗುತ್ತಿಗೆಯನ್ನು ಪಡೆದುಕೊಂಡಿದೆ.

ಒಪ್ಪಂದದ ಭಾಗವಾಗಿ, ಟಾಟಾ ಪ್ರಾಜೆಕ್ಟ್ಸ್ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್, ರನ್ ವೇ, ಮೂಲಸೌಕರ್ಯ, ರಸ್ತೆಗಳು, ಲ್ಯಾಂಡ್ ಸೈಡ್ ಸೌಲಭ್ಯಗಳು ಮತ್ತು ಇತರ ಪೂರಕ ಕಟ್ಟಡಗಳನ್ನು ನಿರ್ಮಿಸಲಿದೆ ಎಂದು ಯಮುನಾ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ (ವೈಐಎಪಿಎಲ್) ಪ್ರಕಟಣೆಯಲ್ಲಿ ತಿಳಿಸಿದೆ.

ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ ಭೀತಿ, 5 ದಿನ ಅಲರ್ಟ್ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ ಭೀತಿ, 5 ದಿನ ಅಲರ್ಟ್

ಯಮುನಾ ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಸ್ವಿಸ್ ಡೆವಲಪರ್ ಜ್ಯೂರಿಚ್ ಏರ್ ಪೋರ್ಟ್ ಇಂಟರ್ ನ್ಯಾಷನಲ್ ಎಜಿ ಯ ಅಂಗಸಂಸ್ಥೆಯಾಗಿದೆ. ಈ ಸಂಸ್ಥೆಯು ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ಇದನ್ನು ಸ್ಥಾಪಿಸಲಾಗಿದೆ. 2019 ರಲ್ಲಿ ಜ್ಯೂರಿಚ್ ಏರ್ ಪೋರ್ಟ್ ಇಂಟರ್ ನ್ಯಾಷನಲ್ ಎಜಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಗುತ್ತಿಗೆಯನ್ನು ಪಡೆದಿದೆ.

ಯುಪಿಯಲ್ಲಿ ಹೊಸ ಮದರಸಾಗಳಿಗೆ ಅನುದಾನ ನಿಲ್ಲಿಸಿದ ಯೋಗಿ ಸರ್ಕಾರ ಯುಪಿಯಲ್ಲಿ ಹೊಸ ಮದರಸಾಗಳಿಗೆ ಅನುದಾನ ನಿಲ್ಲಿಸಿದ ಯೋಗಿ ಸರ್ಕಾರ

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಭಿವೃದ್ಧಿಯನ್ನು ಪ್ರಾರಂಭಿಸಲು 2020ರ ಅಕ್ಟೋಬರ್ 7 ರಂದು ಉತ್ತರ ಪ್ರದೇಶ ಸರಕಾರವು ಯಮುನಾ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

 ಭಾರತದ ಅತಿದೊಡ್ಡ ವಿಮಾನ ನಿಲ್ದಾಣ

ಭಾರತದ ಅತಿದೊಡ್ಡ ವಿಮಾನ ನಿಲ್ದಾಣ

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸಂಪೂರ್ಣವಾಗಿ ನಿರ್ಮಾಣಗೊಂಡ ನಂತರ ಭಾರತದ ಅತಿದೊಡ್ಡ ವಿಮಾನ ನಿಲ್ದಾಣವಾಗಲಿದೆ. 1,334 ಹೆಕ್ಟೇರ್ ಗಳಲ್ಲಿ ಹರಡಿರುವ ಹಸಿರುಮಯ ಪ್ರದೇಶವು, ಮೊದಲ ಹಂತದಲ್ಲಿ 5,700 ಕೋಟಿ ರು. ವೆಚ್ಚದಲ್ಲಿ ವಾರ್ಷಿಕ 12 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯದೊಂದಿಗೆ ಸಿಂಗಲ್ ರನ್ ವೇ ಕಾರ್ಯಾಚರಣೆಯನ್ನು ಹೊಂದಿರುತ್ತದೆ.

 ಟಾಟಾ ಪ್ರಾಜೆಕ್ಟ್ಸ್ ಗೆ ಗುತ್ತಿಗೆ

ಟಾಟಾ ಪ್ರಾಜೆಕ್ಟ್ಸ್ ಗೆ ಗುತ್ತಿಗೆ

"ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಂಜಿನಿಯರಿಂಗ್ ಮತ್ತು ನಿರ್ಮಾಣವನ್ನು ಕೈಗೊಳ್ಳಲು ಯಮುನಾ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಅನ್ನು ಆಯ್ಕೆ ಮಾಡಿದೆ. ದೊಡ್ಡ ಮೂಲಸೌಕರ್ಯ ಯೋಜನೆಗಳ ವಿನ್ಯಾಸ ಮತ್ತು ನಿರ್ಮಾಣದಲ್ಲಿ ಅನುಭವವನ್ನು ಹೊಂದಿರುವ ಪಟ್ಟಿ ಮಾಡಿದ ಮೂರು ಕಂಪನಿಗಳ ಪೈಕಿ ಟಾಟಾ ಪ್ರಾಜೆಕ್ಟ್ಸ್ಅನ್ನು ಆಯ್ಕೆ ಮಾಡಲಾಗಿದೆ,'' ಎಂದು ಪ್ರಕಟಣೆ ತಿಳಿಸಿದೆ. ಡೆವಲಪರ್ ಪ್ರಕಾರ, ಹೊಸ ವಿಮಾನ ನಿಲ್ದಾಣವು 2024ರ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ.

 2024ರ ವೇಳೆಗೆ ವಿಮಾನ ನಿಲ್ದಾಣ ಕಾರ್ಯಾರಂಭ

2024ರ ವೇಳೆಗೆ ವಿಮಾನ ನಿಲ್ದಾಣ ಕಾರ್ಯಾರಂಭ

ಇಪಿಸಿ ಒಪ್ಪಂದವು ಪೂರ್ಣಗೊಂಡಿರುವುದಿಂದ, ವಿಮಾನ ನಿಲ್ದಾಣದ ಮೊದಲ ಹಂತವು ಮುಂದಿನ ಮೂರು ವರ್ಷದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಯಮುನಾ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಹೇಳಿದೆ.

"ನಾವು ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಪಿಸಿ ಕೆಲಸಕ್ಕಾಗಿ ಟಾಟಾ ಪ್ರಾಜೆಕ್ಟ್ಸ್ ನೊಂದಿಗೆ ಪಾಲುದಾರಿಕೆ ಹೊಂದಲು ಸಂತೋಷವಾಗಿದೆ. ಈ ಒಪ್ಪಂದದೊಂದಿಗೆ ನಮ್ಮಯೋಜನೆಯು ಮುಂದಿನ ಹಂತವನ್ನು ಪ್ರವೇಶಿಸುತ್ತದೆ. ಪ್ರದೇಶದಲ್ಲಿ ನಿರ್ಮಾಣ ಚುಟುವಟಿಕೆಗಳು ವೇಗಗೊಳ್ಳಲಿದೆ,'' ಎಂದು ಯಮುನಾ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಿಸ್ಟೋಫ್ ಸ್ಕ್ನೇಲ್ ಮನ್ ಹೇಳಿದರು.

 ದೇಶದ ದೊಡ್ಡ ನಿರ್ಮಾಣ ಕಾಮಗಾರಿಗಳ ಗುತ್ತಿಗೆ

ದೇಶದ ದೊಡ್ಡ ನಿರ್ಮಾಣ ಕಾಮಗಾರಿಗಳ ಗುತ್ತಿಗೆ

"ಯಮುನಾ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ನಿಗದಿತ ಸಮಯಕ್ಕೆ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಿದ್ದೇವೆ. ನೂತನ ತಂತ್ರಜ್ಞಾನದೊಂದಿಗೆ ಗುಣಮಟ್ಟ, ಸುರಕ್ಷತೆ ಮತ್ತು ಸುಸ್ಥಿರತೆಗೆ ಆದ್ಯತೆ ನೀಡುತ್ತೇವೆ,'' ಎಂದು ಟಾಟಾ ಪ್ರಾಜೆಕ್ಟ್ಸ್ ಸಿಇಒ ಮತ್ತು ಎಂಡಿ ವಿನಾಯಕ್ ಪೈ ಹೇಳಿದರು. ಇದರೊಂದಿಗೆ ಟಾಟಾ ಪ್ರಾಜೆಕ್ಟ್ಸ್ ನೂತನ ಸಂಸತ್ ಕಟ್ಟಡ, ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಮತ್ತು ವಿವಿಧ ನಗರಗಳಲ್ಲಿ ಮೆಟ್ರೋ ರೈಲು ಮಾರ್ಗಗಳ ನಿರ್ಮಾಣ ಕಾರ್ಯಗಳು ಸೇರಿವೆ.

Recommended Video

ಪಂಜಾಬ್ ಕಿಂಗ್ಸ್ ಬೌಲರ್ ಗೆ ಟೀಮ್ ಇಂಡಿಯಾದಲ್ಲಿ ಅವಕಾಶ | OneIndia Kannada

English summary
Tata Group's infrastructure and construction arm, Tata Projects, has bagged the contract to construct the upcoming Noida International Airport at Greater Noida.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X