ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಸ್ವಾತಂತ್ರ್ಯ ಹೋರಾಟಗಾರರಿಗೆ ತಾಲಿಬಾನ್‌ ಹೋಲಿಕೆ: ಎಸ್‌ಪಿ ಸಂಸದರ ವಿರುದ್ದ ದೇಶದ್ರೋಹ ಪ್ರಕರಣ

|
Google Oneindia Kannada News

ಲಕ್ನೋ, ಆ. 18: ತಾಲಿಬಾನ್ ಅನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿ ಹಿನ್ನೆಲೆಯಿಂದಾಗಿ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಸಮಾಜವಾದಿ ಪಕ್ಷದ ಸಂಸದ ಮತ್ತು ಇತರ ಇಬ್ಬರ ವಿರುದ್ಧ ದೇಶದ್ರೋಹದ ಮೊಕದ್ದಮೆ ದಾಖಲಿಸಲಾಗಿದೆ. "ತಾಲಿಬಾನ್ ಬಗ್ಗೆ ಪ್ರಚೋದನಕಾರಿ ಹೇಳಿಕೆ" ನೀಡಿದ ಶಫಿಕರ್ ರೆಹಮಾನ್ ಬಾರ್ಕ್ ಮತ್ತು ಇತರ ಇಬ್ಬರ ವಿರುದ್ಧ ಆಗಸ್ಟ್‌ 17 ರ ಮಂಗಳವಾರ ತಡರಾತ್ರಿ ಪ್ರಕರಣ ದಾಖಲು ಮಾಡಲಾಗಿದೆ," ಎಂದು ಚಂಬಲ್ ಜಿಲ್ಲೆಯ ಪೊಲೀಸ್ ಅಧೀಕ್ಷಕ ಚಾರ್ಖೇಶ್ ಮಿಶ್ರಾ ಹೇಳಿದ್ದಾರೆ.

"ಈ ಆರೋಪಿಗಳು ತಾಲಿಬಾನ್ ಅನ್ನು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ್ದಾರೆ ಮತ್ತು ತಾಲಿಬಾನ್‌ ಪರವಾಗಿ ವಿಜಯವನ್ನು ಆಚರಿಸಿದ್ದಾರೆ ಎಂದು ದೂರುದಾರರು ಹೇಳಿದ್ದಾರೆ," ಎಂದು ಇಂದು ಬಿಡುಗಡೆ ಮಾಡಿರುವ ವಿಡಿಯೋ ಹೇಳಿಕೆಯಲ್ಲಿ ಚಂಬಲ್ ಜಿಲ್ಲೆಯ ಪೊಲೀಸ್ ಅಧೀಕ್ಷಕ ಚಾರ್ಖೇಶ್ ಮಿಶ್ರಾ ತಿಳಿಸಿದ್ದಾರೆ.

 ಭಾರತ ತಾಲಿಬಾನ್‌ ಜೊತೆ ಮಾತನಾಡಬೇಕಿತ್ತು ಎಂದ ಓವೈಸಿ, ವಿಶ್ವಸಂಸ್ಥೆ ಮಧ್ಯಸ್ಥಿಕೆಗೆ ಕೆಟಿಆರ್‌ ಆಗ್ರಹ ಭಾರತ ತಾಲಿಬಾನ್‌ ಜೊತೆ ಮಾತನಾಡಬೇಕಿತ್ತು ಎಂದ ಓವೈಸಿ, ವಿಶ್ವಸಂಸ್ಥೆ ಮಧ್ಯಸ್ಥಿಕೆಗೆ ಕೆಟಿಆರ್‌ ಆಗ್ರಹ

"ಹಾಗೆಯೇ ಭಾರತ ಸರ್ಕಾರದ ಪ್ರಕಾರ ತಾಲಿಬಾನ್ ಭಯೋತ್ಪಾದಕ ಸಂಘಟನೆಯಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಕೆ ಮಾಡಿರುವ ಕಾರಣದಿಂದಾಗಿ ಇದನ್ನು ನಾವು ದೇಶದ್ರೋಹವೆಂದು ಪರಿಗಣಿಸಬಹುದು. ನಾವು ಎಫ್ಐಆರ್ ದಾಖಲಿಸಿದ್ದೇವೆ," ಎಂದು ಕೂಡಾ ಪೊಲೀಸ್ ಅಧೀಕ್ಷಕ ಚಾರ್ಖೇಶ್ ಮಿಶ್ರಾ ಸ್ಪಷ್ಟಪಡಿಸಿದ್ದಾರೆ.

Taliban Remarks: Sedition Case Against Samajwadi Party MP Dr Shafiqur Rahman Barq

ಸೋಮವಾರ, ಸಂಭಾಲ್‌ನ ಸಮಾಜವಾದಿ ಪಕ್ಷದ ಲೋಕಸಭಾ ಸಂಸದ, ಶಫಿಕರ್ ಬಾರ್ಕ್ ತಾಲಿಬಾನ್‌ಗಳು "ಅಫ್ಘಾನಿಸ್ತಾನ ಮುಕ್ತವಾಗಬೇಕೆಂದು ಬಯಸುತ್ತಾರೆ" ಮತ್ತು "ತಮ್ಮ ದೇಶವನ್ನು ನಡೆಸಲು ಬಯಸುತ್ತಾರೆ" ಎಂದು ಸುದ್ದಿಗಾರರಿಗೆ ತಿಳಿಸಿದರು. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಬಾರ್ಕ್ ತಾಲಿಬಾನ್ ಅನ್ನು "ರಷ್ಯಾ ಅಥವಾ ಅಮೆರಿಕವನ್ನು ಅಫ್ಘಾನಿಸ್ತಾನದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳಲು ಅನುಮತಿಸದ ಶಕ್ತಿ" ಎಂದು ಕರೆದರು ಮತ್ತು ಭಯೋತ್ಪಾದಕ ಗುಂಪಿನ ಕ್ರಮಗಳು "ಆಂತರಿಕ ವಿಷಯ"ಎಂದು ಹೇಳಿದರು.

"ಅಫ್ಘಾನಿಸ್ತಾನದ ಜನರು ಮುಕ್ತವಾಗಿರಲು ಬಯಸುತ್ತಾರೆ. ಇದು ಅವರ ವೈಯಕ್ತಿಕ ವಿಷಯ. ನಾವು ಹೇಗೆ ಹಸ್ತಕ್ಷೇಪ ಮಾಡಬಹುದು?," ಎಂದು ಶಫಿಕರ್ ರೆಹಮಾನ್ ಬಾರ್ಕ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಬ್ರಿಟಿಷರು ಭಾರತವನ್ನು ವಶಪಡಿಸಿಕೊಂಡಾಗ, ''ಇಡೀ ದೇಶವು ಸ್ವಾತಂತ್ರ್ಯಕ್ಕಾಗಿ ಹೋರಾಡಿತು'' ಎಂದು ಕೂಡಾ ಇದೇ ಸಂದರ್ಭದಲ್ಲಿ ಶಫಿಕರ್‌ ಉಲ್ಲೇಖ ಮಾಡಿದ್ದಾರೆ.

'ಇನ್ಮುಂದೆ ಶತ್ರುಗಳಲ್ಲ': ತಾಲಿಬಾನ್‌ಗೆ ರಷ್ಯಾ ಬೆಂಬಲಿಸುವುದಾದರೂ ಏಕೆ?'ಇನ್ಮುಂದೆ ಶತ್ರುಗಳಲ್ಲ': ತಾಲಿಬಾನ್‌ಗೆ ರಷ್ಯಾ ಬೆಂಬಲಿಸುವುದಾದರೂ ಏಕೆ?

ಈ ಹೇಳಿಕೆಯನ್ನು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ತೀವ್ರವಾಗಿ ಟೀಕಿಸಿದ್ದಾರೆ. ಈ ಹೇಳಿಕೆಯನ್ನು ಕಾಬೂಲ್ ಪತನದ ನಂತರ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ರ ಪ್ರತಿಕ್ರಿಯೆಗೆ ಹೋಲಿಕೆ ಮಾಡಿದ್ದಾರೆ. ಕಾಬೂಲ್‌ ಪತನವಾದ ಬಳಿಕ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ತಾಲಿಬಾ''ಗುಲಾಮಗಿರಿಯ ಸಂಕೋಲೆಗಳನ್ನು ಮುರಿದಿದೆ'' ಎಂದಿದ್ದರು.

"ಸಮಾಜವಾದಿ ಪಕ್ಷದಲ್ಲಿ ಏನು ಬೇಕಾದರೂ ಆಗಬಹುದು. 'ಜನ ಗಣ ಮನ' ಹಾಡಲು ಸಾಧ್ಯವಾಗದ ಜನರಿದ್ದಾರೆ. ಯಾರಾದರೂ ತಾಲಿಬಾನ್ ಅನ್ನು ಬೆಂಬಲಿಸಬಹುದು, ಭಯೋತ್ಪಾದಕರು ಸಿಕ್ಕಿಬಿದ್ದ ನಂತರ ಇತರರು ಪೊಲೀಸರ ಮೇಲೆ ಆರೋಪ ಹೊರಿಸಬಹುದು. ಇದು ಸಮಾಧಾನವಾಗಿದೆ," ಎಂದು ಲಕ್ನೋದಲ್ಲಿ ವಿಧಾನಸಭೆಯ ಹೊರಗೆ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮಾತನಾಡಿ ಸಮಾಜವಾದಿ ಪಕ್ಷವನ್ನು ಟೀಕಿಸಿದ್ದಾರೆ.

"ಈ ಹೇಳಿಕೆಯನ್ನು ನೀಡಿದ್ದಲ್ಲಿ ಆ ವ್ಯಕ್ತಿ ಮತ್ತು ಇಮ್ರಾನ್ ಖಾನ್ ನಡುವೆ ಯಾವುದೇ ವ್ಯತ್ಯಾಸವಿಲ್ಲ," ಎಂದು ಹೇಳಿದ ಕೇಶವ್ ಪ್ರಸಾದ್ ಮೌರ್ಯ ನಾನು ಈ ಹೇಳಿಕೆಯ ವಿಡಿಯೋ ತುಣುಕನ್ನು ನೋಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಧ್ಯಕ್ಷ ಅಶ್ರಫ್ ಘನಿ ಪಲಾಯನ ಮಾಡಿದ ನಂತರ ಮತ್ತು ಯಾವುದೇ ವಿರೋಧವಿಲ್ಲದೆ ಭಯೋತ್ಪಾದಕ ಗುಂಪು ಕಾಬೂಲ್‌ಗೆ ಕಾಲಿಟ್ಟಿದೆ. ತಾಲಿಬಾನ್ ಭಾನುವಾರ ಅಫ್ಘಾನಿಸ್ತಾನದ ಮೇಲೆ ಪರಿಣಾಮಕಾರಿ ನಿಯಂತ್ರಣವನ್ನು ತೆಗೆದುಕೊಂಡಿದೆ. ತಾಲಿಬಾನ್‌ ಕೇವಲ ಹತ್ತು ದಿನಗಳಲ್ಲಿ ಅಫ್ಘಾನಿಸ್ತಾನದ ಪ್ರಮುಖ ನಗರಗಳ ದಿಗ್ಭ್ರಮೆಗೊಳಿಸುವ ವೇಗದಲ್ಲಿ ತನ್ನ ವಶಕ್ಕೆ ಪಡೆದುಕೊಂಡಿದೆ.

(ಒನ್‌ಇಂಡಿಯಾ ಸುದ್ದಿ)

Recommended Video

ತಾಲಿಬಾನ್ ಆಡಳಿತದ ನಿಯಮಗಳನ್ನು ಕೇಳಿದ್ರೆ ಎಂಥವರೂ ನಡುಗಿ ಹೋಗ್ತಾರೆ | Oneindia Kannada

English summary
Afghanistan Taliban Crisis: A sedition case has been filed against a Samajwadi Party MP Dr Shafiqur Rahman Barq and two others in Uttar Pradesh over remarks that seem to compare the Taliban to India's freedom fighters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X