ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಜುಬೇರ್‌ ಜಾಮೀನು ಅರ್ಜಿ ವಿಚಾರಣೆ ವಿಸ್ತರಿಸಿದ ಸುಪ್ರೀಂ

|
Google Oneindia Kannada News

ಲಖಿಂಪುರ ಜುಲೈ 12: ಉತ್ತರ ಪ್ರದೇಶದ ಸೀತಾಪುರದಲ್ಲಿ ದಾಖಲಾದ ಪ್ರಕರಣದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಮೊಹಮ್ಮದ್ ಜುಬೇರ್‌ಗೆ ಸುಪ್ರೀಂ ಕೋರ್ಟ್ ಇಂದು ಮಧ್ಯಂತರ ಜಾಮೀನು ವಿಚಾರಣೆ ಸೆಪ್ಟಂಬರ್ 7ಕ್ಕೆ ವಿಸ್ತರಿಸಿದೆ. ಇದು ಸೀತಾಪುರ್ ಪ್ರಕರಣಕ್ಕೆ ಸೀಮಿತವಾಗಿದೆ. ಉತ್ತರಪ್ರದೇಶದ ಸೀತಾಪುರ್‌ನಲ್ಲಿ ಜುಬೇರ್ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಕೋರ್ಟ್ ಈ ಆದೇಶ ನೀಡಿದೆ.

ಜುಬೇರ್ ವಿರುದ್ಧ ದೆಹಲಿ ಮತ್ತು ಲಖಿಂಪುರದಲ್ಲಿರುವ ವಿಚಾರಣೆಯಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಹಿಂದೂ ಸ್ವಾಮೀಜಿಗಳನ್ನು ದ್ವೇಷ ಪ್ರಚೋದಕರು ಎಂದು ಜುಬೇರ್ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಸೀತಾಪುರದಲ್ಲಿ ಪ್ರಕರಣ ದಾಖಲಾಗಿತ್ತು.

Breaking: ಆಲ್ಟ್‌ ನ್ಯೂಸ್‌ನ ಮೊಹಮದ್‌ ಜುಬೈರ್‌ಗೆ ಮಧ್ಯಂತರ ಜಾಮೀನುBreaking: ಆಲ್ಟ್‌ ನ್ಯೂಸ್‌ನ ಮೊಹಮದ್‌ ಜುಬೈರ್‌ಗೆ ಮಧ್ಯಂತರ ಜಾಮೀನು

ಸುಪ್ರೀಂಕೋರ್ಟ್ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ ರಾಜು ಅವರು ಈ ಪ್ರಕರಣದಲ್ಲಿ ಸ್ಥಿತಿ ವರದಿ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ಜುಬೇರ್ ಪರ ಹಾಜರಾದ ಹಿರಿಯ ವಕೀಲ ಕೋಲಿನ್ ಗೋನ್ಸ್ಲವ್ ತಮ್ಮ ಕಕ್ಷಿದಾರರಿಗೆ ಕೇವಲ ಐದು ದಿನ ಜಾಮೀನು ನೀಡಿರುವುದು ಎಂದು ನ್ಯಾಯಾಲಯಕ್ಕೆ ಹೇಳಿದರು. ಇದಾದ ನಂತರ ಸುಪ್ರೀಂಕೋರ್ಟ್ ಸಲ್ಲಿಸಲು ರಾಜ್ಯ ಕಾಲಾವಕಾಶ ಕೋರಿದೆ. ನಾಲ್ಕು ವಾರಗಳೊಳಗೆ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.

Supreme Court extended the hearing of Zubairs bail application

ಖಾಸಗಿ ಸುದ್ದಿ ವಾಹಿನಿಯೊಂದರ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ಸೆಪ್ಟೆಂಬರ್ 2021ರಲ್ಲಿ ಜುಬೈರ್ ವಿರುದ್ಧ ಲಖಿಂಪುರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೇ 14, 2021 ರಂದು ಜುಬೇರ್ ಮಾಡಿದ ಟ್ವೀಟ್‌ಗಾಗಿ ದೂರು ದಾಖಲಿಸಲಾಗಿತ್ತು. ಜುಬೈರ್ ತನ್ನ ಟ್ವೀಟ್ ಮೂಲಕ ಜನರನ್ನು ದಾರಿತಪ್ಪಿಸಿದ್ದಾರೆ ಎಂದು ದೂರುದಾರ ಆಶಿಶ್ ಕಟಿಯಾರ್ ಎಂಬುವವರು ಆರೋಪಿಸಿದ್ದರು.

https://kannada.oneindia.com/news/amritsar/late-sidhu-moose-wala-song-in-afsana-khan-marriage-video-goes-viral-261492.html

ಟ್ವೀಟ್ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಸೀತಾಪುರದಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರಿಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಐದು ದಿನಗಳ ಮಧ್ಯಂತರ ಜಾಮೀನು ನೀಡಿತ್ತು. 1983 ರಲ್ಲಿ ಬಿಡುಗಡೆಯಾದ ಹಿಂದಿ ಚಲನಚಿತ್ರವೊಂದರ ಸ್ಕ್ರೀನ್‌ಶಾಟ್ ಹೊಂದಿರುವ ನಾಲ್ಕು ವರ್ಷಗಳ ಹಳೆಯ ಟ್ವೀಟ್‌ನ ಮೇಲೆ ಮೊಹಮ್ಮದ್ ಜುಬೇರ್ ಅವರನ್ನು ಜೂನ್ 27 ರಂದು ಮೊದಲ ಬಾರಿಗೆ ದೆಹಲಿ ಪೊಲೀಸರು ಬಂಧಿಸಿದ್ದರು.

Recommended Video

Gujarat ನಲ್ಲಿ ಹಿಂದೆಂದೂ ಕೇಳರಿಯದ Cricket Scam | *Cricket | OneIndia Kannada

English summary
Supreme Court today extended the interim bail hearing of Mohammad Zubair to September 7 in a case filed in Uttar Pradesh's Sitapur on charges of hurting religious sentiments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X