ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿಗೆ ಅಯೋಧ್ಯೆಯ ರಾಮ್ ಕಿ ಪೈಡಿ ಘಾಟ್‌ನಲ್ಲಿ ಭರ್ಜರಿ ಲೇಸರ್ ಶೋ

|
Google Oneindia Kannada News

ಅಯೋಧ್ಯೆ, ನವೆಂಬರ್ 3: ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯಲ್ಲಿ ದೀಪೋತ್ಸವ ಆಚರಣೆ ಸೋಮವಾರ ಸಂಜೆ ಅದ್ಧೂರಿಯಾಗಿ ಆರಂಭವಾಗಿದೆ. ಮೆಗಾ ಸಂಭ್ರಮಕ್ಕಾಗಿ ಭವ್ಯವಾದ 'ರಾಮ್ ಕಿ ಪೈಡಿ' ಘಾಟ್‌ನ್ನು ಬಣ್ಣಬಣ್ಣದ ದೀಪಗಳಿಂದ ಅಲಂಕಾರಗೊಳಿಸಲಾಗಿದೆ. ಘಾಟ್ ದೀಪೋತ್ಸವ ಆಚರಣೆಯ ಪ್ರಮುಖ ಸ್ಥಳವಾಗಿದೆ. ನಗರದ ರಾಮ್ ಕಿ ಪೈಡಿ ಘಾಟ್‌ನಲ್ಲಿ ಮಂಗಳವಾರ ನಡೆದ ಅತ್ಯಾಕರ್ಷಕ ಲೇಸರ್ ಶೋವನ್ನು ನೂರಾರು ಪ್ರವಾಸಿಗರು ಕಣ್ತುಂಬಿಕೊಂಡರು. ಅಯೋಧ್ಯೆಯಲ್ಲಿ ದೀಪೋತ್ಸವವನ್ನು ಸತತ ಐದನೇ ವರ್ಷ ನಡೆಸಲಾಗುತ್ತಿದೆ. ರಾಮ್ ಕಥಾ ಪಾರ್ಕ್‌ನಲ್ಲಿ ಶಿಲ್ಪ ಬಜಾರ್ ಉದ್ಘಾಟನೆಯೊಂದಿಗೆ ದೀಪಾವಳಿ ಆಚರಣೆಗಳು ಪ್ರಾರಂಭವಾಗಿವೆ. ಇದು ಬುಧವಾರದಂದು ದೀಪಾವಳಿಯ ಮುನ್ನಾ ಒಂಬತ್ತು ಲಕ್ಷ ಮಣ್ಣಿನ ದೀಪಗಳಿಂದ ಪ್ರಕಾಶಿಸಲ್ಪಡುತ್ತದೆ.

ನಾಗ್ಪುರದ ವಾಟ್ಕರ್ ಸಹೋದರಿಯರಾದ ಭಾಗ್ಯಶ್ರೀ ಮತ್ತು ಧನಶ್ರೀ ಅವರು ಉದ್ಘಾಟನಾ ದಿನದಂದು ರಾಮಾಯಣದ ವಿವಿಧ ಭಾಗಗಳ ಸಂಗೀತ ನಿರೂಪಣೆಯನ್ನು ಪ್ರಸ್ತುತಪಡಿಸಿದರು. ನಂತರ ಲಕ್ನೋದ ಇಶಾ ರತನ್ ಮತ್ತು ಮಿಶಾ ರತನ್ ಅವರಿಂದ ಕಥಕ್ ಪ್ರಸ್ತುತಿಪಡಿಸಲಾಯಿತು.

ಸುದ್ದಿಗಾರರೊಂದಿಗೆ ಮಾತನಾಡಿದ ಅಯೋಧ್ಯೆ ಬಿಜೆಪಿ ಶಾಸಕ ವೇದ್ ಪ್ರಕಾಶ್ ಗುಪ್ತಾ, "ಅಯೋಧ್ಯೆಯಲ್ಲಿ ಸೋಮವಾರ ದೀಪೋತ್ಸವ ಆಚರಣೆ ಪ್ರಾರಂಭವಾಯಿತು. ಇಡೀ ನಗರವನ್ನು ಅಲಂಕರಿಸಲಾಗಿದೆ. ಬುಧವಾರದಂದು ಮುಖ್ಯ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ" ಎಂದು ಹೇಳಿದ್ದಾರೆ.

Stunning laser show in Ayodhyas Ram Ki Paidi ghat

ಉತ್ತರ ಪ್ರದೇಶ ಸರ್ಕಾರವು 12 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಲಿದೆ. ಅದರಲ್ಲಿ ಒಂಬತ್ತು ಲಕ್ಷ ದೀಪಗಳನ್ನು ಸರಯೂ ನದಿ ದಡದಲ್ಲಿ ಬೆಳಗಿಸಲಾಗುವುದು, ಇದು ಹಿಂದಿನ ದೀಪಾವಳಿ ದಾಖಲೆಯನ್ನು ಉತ್ತಮಗೊಳಿಸುತ್ತದೆ. ಕಳೆದ ವರ್ಷ ಹಬ್ಬವನ್ನು ಆಚರಿಸಲು "ದೀಪೋತ್ಸವ" ಸಮಯದಲ್ಲಿ ಆರು ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳನ್ನು ಬೆಳಗಿಸಿ ವಿಶ್ವದಾಖಲೆಯನ್ನು ನಿರ್ಮಿಸಿತು. ಸರ್ಕಾರದ ಹೇಳಿಕೆಯ ಪ್ರಕಾರ, ಸೋಮವಾರದಿಂದ ಪ್ರಾರಂಭವಾಗುವ ಐದು ದಿನಗಳ ಆಚರಣೆಯ ಭಾಗವಾಗಿ ರಾಮ್ ಲೀಲಾಸ್, 3D ಹೊಲೊಗ್ರಾಫಿಕ್ ಪ್ರದರ್ಶನ, ಲೇಸರ್ ಶೋ ಮತ್ತು ಪಟಾಕಿಗಳನ್ನು ಪ್ರದರ್ಶಿಸಲಾಗುತ್ತದೆ.

ನವೆಂಬರ್ 3 ರಂದು ಸಂಜೆ 6 ರಿಂದ 6.30 ರವರೆಗೆ ಪಟ್ಟಣದ ಕೆಲವು ಭಾಗಗಳಲ್ಲಿ ಉಳಿದ ಮೂರು ಲಕ್ಷ ದೀಪಗಳೊಂದಿಗೆ ನದಿಯ ದಡದಲ್ಲಿ ಒಂಬತ್ತು ಲಕ್ಷ ದೀಪಗಳನ್ನು ಬೆಳಗಿಸಲಾಗುತ್ತದೆ. ಅಯೋಧ್ಯೆ ಆಡಳಿತ ಮತ್ತು ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯು ದೀಪಗಳನ್ನು ಬೆಳಗಿಸುವ ಕಾರ್ಯಕ್ಕಾಗಿ 12,000 ಸ್ವಯಂಸೇವಕರನ್ನು ಸಜ್ಜುಗೊಳಿಸಿದೆ. ನವೆಂಬರ್ 1 ರಿಂದ 5 ರವರೆಗೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿದ್ದು, ರಾಮ್ ಲೀಲಾವನ್ನು ಪ್ರದರ್ಶಿಸಲು ಶ್ರೀಲಂಕಾದಿಂದ ಸಾಂಸ್ಕೃತಿಕ ತಂಡವನ್ನು ಆಹ್ವಾನಿಸಲಾಗಿದೆ.

ರಾಜ್ಯದ ಎಲ್ಲಾ 75 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ 90,000 ಕ್ಕೂ ಹೆಚ್ಚು ಹಳ್ಳಿಗಳಿಂದ ಮಣ್ಣಿನ ದೀಪಗಳು ಸಕಾಲದಲ್ಲಿ ಅಯೋಧ್ಯೆಗೆ ತಲುಪುವಂತೆ ನೋಡಿಕೊಳ್ಳುವ ಕಾರ್ಯವನ್ನು ನಿಯೋಜಿಸಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಂಬತ್ತು ಲಕ್ಷ ದಿಯಾಗಳಲ್ಲಿ, ಉತ್ತರ ಪ್ರದೇಶದ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳ ಆವಾಸ್ ಯೋಜನೆಗಳ ಅಂದಾಜು ಒಂಬತ್ತು ಲಕ್ಷ ಫಲಾನುಭವಿಗಳಿಗೆ ತಲಾ ಒಂದು ಮನೆ ನೀಡಲಾಗುತ್ತಿತ್ತು. ಅದರಂತೆ 9 ಲಕ್ಷ ದೀಪ ಬೆಳಗಾಲಾಗುತ್ತಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್​ ತಿಳಿಸಿದ್ದಾರೆ.

Stunning laser show in Ayodhyas Ram Ki Paidi ghat

Recommended Video

ಪುನೀತ್ ಗೆ ಅವಮಾನ ಮಾಡಿದವನಿಗೆ ಹಿಗ್ಗಾಮುಗ್ಗ ಜಾಡಿಸಿದ ಸುದೀಪ್ ಮಗಳು | Oneindia Kannada

ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣ ಭವ್ಯ ದೀಪೋತ್ಸವ 2021 ಇನ್ನಷ್ಟು ಮಹತ್ವದ್ದಾಗಿದೆ. ಅಯೋಧ್ಯೆಯು ರಾಜ್ಯದ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳಿಗೆ ಕೇಂದ್ರ ಬಿಂದುವಾಗಿದೆ.ಈ ಕುರಿತು ಮಾತನಾಡಿರುವ ಅಧಿಕಾರಿಗಳು ಇದೊಂದು ಸ್ವಾಗತಾರ್ಹ ಹೆಜ್ಜೆಯಾಗಿದ್ದು, ರಾಜ್ಯದ ಎಲ್ಲಾ ಗ್ರಾಮಗಳು ಮತ್ತು ಜಿಲ್ಲೆಗಳು ಅಯೋಧ್ಯೆಯಲ್ಲಿ ಆಚರಣೆಯ ಭಾಗವಾಗಲು ಅವಕಾಶ ನೀಡುತ್ತಿರುವುದಾಗಿ ತಿಳಿಸಿದೆ.ಯೋಗಿ ಆದಿತ್ಯನಾಥ್​ 2017ರಿಂದ ಈ ದೀಪೋತ್ಸವ ಆಚರಣೆಯನ್ನು ನಡೆಸಿಕೊಂಡು ಬಂದಿದ್ದಾರೆ.

English summary
The Deepotsav celebrations in Uttar Pradesh's Ayodhya district began on a grand scale on Monday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X