ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಧರ ಸಾವಿಗೆ ಸಂಭ್ರಮಿಸಿದ ವಿದ್ಯಾರ್ಥಿ ವಿರುದ್ಧ ಎಫ್‌ಐಆರ್‌

|
Google Oneindia Kannada News

ಅಲೀಘಡ, ಫೆಬ್ರವರಿ 15: ನಿನ್ನೆ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದ ಅಲೀಘಡ ವಿವಿಯ ವಿದ್ಯಾರ್ಥಿಯ ಮೇಲೆ ಸ್ಥಳೀಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಅಲಿಘಡ್ ವಿವಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಬಸೀಮ್ ಹಿಲಾಲ್ ಎಂಬುವನು ಟ್ವೀಟ್‌ ಮಾಡಿ 'ಹೌ ಈಸ್‌ ದ ಜೈಶ್' 'ಗ್ರೇಟ್ ಸರ್' ಎಂದು ಟ್ವೀಟ್ ಮಾಡಿದ್ದ. ಯೋಧರ ಮೇಲೆ ದಾಳಿ ಮಾಡಿದ್ದ ಜೈಷ್‌-ಎ-ಮೊಹಮ್ಮದ್ ಅನ್ನು ಗ್ರೇಟ್ ಎಂದು ಹೊಗಳಿದ್ದ.

ಉರಿ ಸಿನಿಮಾದ ಪ್ರಸಿದ್ಧ ಸಂಭಾಷಣೆ 'ಹೌ ಈಸ್‌ ದ ಜೋಷ್‌' ಅನ್ನು ತಿರುಚಿ 'ಹೌ ಈಸ್ ದ ಜೈಶ್‌' ಎಂದು ಆತ ತಿರುಚಿದ್ದ. ಈತನ ಟ್ವೀಟ್‌ನ ಸ್ಕ್ರೀನ್‌ ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಟ್ವಿಟ್ಟಗರು ಕ್ರಮಕ್ಕೆ ಒತ್ತಾಯಿಸಿದ್ದರು.

Student who tweeted praising terrorist group has been suspended from Aligarh University

ತನ್ನ ಟ್ವೀಟ್‌ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಬಸೀಲ್ ಹಿಲಾಲ್ ಟ್ವೀಟ್‌ ಅನ್ನು ಡಿಲೀಟ್ ಮಾಡಿದ್ದಾನೆ. ಆದರೆ ಸ್ಥಳೀಯ ಪೊಲೀಸರು ಆತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಆತನ ಮೇಲೆ ಸೆಕ್ಷನ್ 153ಎ, 67 ಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಲಿಘಡ ವಿಶ್ವವಿದ್ಯಾಲಯವು ಬಸೀಲ್ ಹಿಲಾಲ್ ಅನ್ನು ಅಮಾನತುಗೊಳಿಸಿದೆ. ಬಿಸೀಲ್ ಹಿಲಾಲ್ ಕಾಶ್ಮೀರದವನಾಗಿದ್ದು, ವಿವಿಯಲ್ಲಿ ಬಿಎಸ್‌ಸಿ ಗಣಿತ ವಿಷಯವನ್ನು ಅಧ್ಯಯನ ಮಾಡುತ್ತಿದ್ದ.

English summary
An FIR has been registered against Basim Hilal, a student of Aligarh Muslim University, for his tweet over yesterday's Pulwama attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X